ನಾವು ಪರಿಹಾರ ಕೊಡೋಕೆ ಶುರು ಮಾಡಿದ್ಮೇಲೆ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ: ಶಿವಾನಂದ ಪಾಟೀಲ್

Public TV
2 Min Read

ಹಾವೇರಿ: ರೈತರ ಆತ್ಮಹತ್ಯೆ ಬಗ್ಗೆ ಸಚಿವ ಶಿವಾನಂದ ಪಾಟೀಲ್ (Shivananda Ptil) ಅವರು ಹಗುರವಾಗಿ ಮಾತನಾಡಿದ್ರಾ ಎಂಬ ಪ್ರಶ್ನೆಯೊಂದು ಎದ್ದಿದೆ.

ಹಾವೇರಿಯಲ್ಲಿ (Haveri) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಆತ್ಮಹತ್ಯೆ ಪ್ರಕರಣದ ಆತಂಕದ ರೀತಿಯಲ್ಲಿ ವರದಿ ಮಾಡಿದರೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗ್ತಾ ಇದೆ. ಒಬ್ಬರು ಕುಡಿದು ಕುಡಿದು ಸತ್ತಿರುತ್ತಾರೆ. ಹಾರ್ಟ್ ಅಟ್ಯಾಕ್ ಆಗಿ ಸತ್ತವರೂ ಇದ್ದಾರೆ. ನಾವು 2015 ರಲ್ಲಿ ಐದು ಲಕ್ಷ ಪರಿಹಾರ ಕೊಡೊಕೆ ಶುರು ಮಾಡಿದ್ದೀವಿ. ಅವತ್ತಿಂದಾ ಆತ್ಮಹತ್ಯೆ ಗಳು ಹೆಚ್ಚಾಗುತ್ತಾ ಇದೆ. ಇದನ್ನು ನೀವೂ ಗಮನಿಸಬೇಕು ಎಂದು ಹೇಳಿದ್ದಾರೆ.

ರೈತರ ಆತ್ಮಹತ್ಯೆ ಪ್ರಕರಣಗಳು ಇವತ್ತಿಂದಿಲ್ಲಾ ಅಂದಿನಿಂದಾ ಆಗ್ತಾನೆ ಇದ್ದಾವೆ. 2020ನೇ ವರ್ಷದಲ್ಲಿ 500ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021 ರಲ್ಲಿ 600ಕ್ಕೂ ಹೆಚ್ಚು ಸೂಸೈಡ್ ಆಗಿದ್ದಾವೆ. ಆದರೆ ನೀವು ಎಫ್‍ಐಆರ್ ಪರಿಗಣೆನೆ ತೆಗೆದುಕೊಂಡರೆ ನಿಮ್ಮದು ತಪ್ಪು. ರೈತರು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ತಾ ಇದ್ದಾರೆ. ಸುಮ್ ಸುಮ್ಮನೆ ಪತ್ರಿಕೆಯವರು ಯಾಕೆ ಬರೆಯುತ್ತಾ ಇದ್ದಾರೋ ಗೊತ್ತಿಲ್ಲ. ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಇರ್ತಾರೆ. ನೀವೂ ಪರಿಶೀಲನೆ ಮಾಡಿ ಬರೆಯಬೇಕು. ಸಂಬಂಧಿಕರು ಆತ್ಮಹತ್ಯೆ ಅಂತಾ ಕಂಪ್ಲೇಟ್ ಕೊಟ್ಟರೆ ಪರಿಹಾರ ಸಿಗುತ್ತೆ ಎನ್ನೋದು ದುರಾಸೆ ಹೆಚ್ಚು ಪ್ರಕರಣ ಆಗುತ್ತಿದೆ ಎಂದಿದ್ದಾರೆ.

ನಿಜವಾಗಿ ರೈತರಿಗೆ ಅನ್ಯಾಯ ಆಗಿದ್ದರೆ ಪರಿಹಾರ ವಿಳಂಬ ಮಾಡಲ್ಲ. ಜನಪ್ರತಿನಿಧಿಗಳ ಮೇಲೆ ಜನ ಸಾಮಾನ್ಯರು ಒತ್ತಡ ತರುತ್ತಾರೆ. ಹೀಗಾಗಿ ತಪ್ಪು ವರದಿ ಮಾಡೋದ್ರಿಂದ ಪ್ಯಾನಿಕ್ ಆಗುತ್ತೆ. ಕೆಲ ಮುಖಂಡರು ಕೂಡಾ ಪರಿಹಾರ ಸಿಗಬೋದು ಎಂದು ಆ ರೀತಿ ವರದಿ ಮಾಡ್ತಾರೆ. 2014ರ ಹಿಂದೆ ಎಷ್ಟು, 2015 ರ ನಂತರ ಎಷ್ಟು ಆತ್ಮಹತ್ಯೆ ಅಂತಾ ನೀವೇ ನೋಡಿ. ಆ ವೇಳೆ ಇಷ್ಟೊಂದು ವರದಿ ಆಗ್ತಾ ಇರಲಿಲ್ಲ. ಈವಾಗ ಹೆಚ್ಚು ವರದಿ ಆಗ್ತಾ ಇದ್ದಾವೆ ಎಂದು ರೈತರ ಆತ್ಮಹತ್ಯೆಯ ಬಗ್ಗೆ ಸಚಿವ ಶಿವಾನಂದ ಪಾಟೀಲ್ ಹಗುರವಾಗಿ ಮಾತಾಡಿದ್ರಾ ಅನ್ನೋದು ಚರ್ಚೆ ಕಾರಣವಾಗಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್