ನನ್ನದು ಮಾನವ ಕುಲ, ಮಾನವ ನಕ್ಷತ್ರ – ಕುಲ, ಗೋತ್ರ ಕೇಳಿದ ಪುರೋಹಿತರಿಗೆ ಸತೀಶ್‌ ಜಾರಕಿಹೊಳಿ ಉತ್ತರ

Public TV
1 Min Read

ಕಾರವಾರ: ಪೂಜಾ ಕಾರ್ಯವೊಂದಕ್ಕೆ ಕುಲ, ಗೋತ್ರ ಕೇಳಿದ ಪುರೋಹಿತರಿಗೆ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಉತ್ತರ ವಿಶಿಷ್ಟವಾಗಿದೆ. ಪುರೋಹಿತರಿಗೆ ನಾಸ್ತಿಕ ಮನೋಭಾವದ ಸಚಿವರು ಮಾನವೀಯತೆ ಪಾಠ ಹೇಳಿದ್ದಾರೆ.

ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ ತಾಲೂಕಿನ ಶಿವಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹೆಗ್ಗಾರ ಗ್ರಾಮದಲ್ಲಿ ಕಾಲುಸಂಕ ನಿರ್ಮಾಣ ಕಾಮಗಾರಿಯ ಉದ್ಘಾಟನಾ ಸಮಾರಂಭಕ್ಕೆ ಸಚಿವ ಸತೀಶ್‌ ಜಾರಕಿಹೊಳಿ ಆಗಮಿಸಿದ್ದರು. ಗಣಪತಿ ಪೂಜೆ ಸಂದರ್ಭದಲ್ಲಿ ಪೂಜಾ ಕಾರ್ಯ ನೆರವೇರಿಸಲು ಹೆಗ್ಗಾರಿನ ಮಹಾಬಲೇಶ್ವರ ಗೋಪಾಲಕೃಷ್ಣ ದೀಕ್ಷಿತ್ ಎಂಬ ಪುರೋಹಿತರು ಇದ್ದರು. ಇದನ್ನೂ ಓದಿ: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಬಾವ ನಾಪತ್ತೆ – ಕಿಡ್ನ್ಯಾಪ್ ಶಂಕೆ

ಈ ವೇಳೆ ಪುರೋಹಿತರು, ಜಾರಕಿಹೊಳಿ ಅವರಿಗೆ ನಿಮ್ಮ ಕುಲ, ನಕ್ಷತ್ರ ಯಾವುದು ಎಂದು ಪೂಜಾ ಕಾರ್ಯಕ್ಕಾಗಿ ಕೇಳಿದ್ದಾರೆ. ನನ್ನ ಕುಲ ಮಾನವ ಕುಲ, ಮಾನವ ನಕ್ಷತ್ರ ಎಂದು ಹೇಳುವ ಮೂಲಕ ಮಾನವತಾ ವಾದದ ಪಾಠ ಮಾಡಿದ್ದಾರೆ. ಇನ್ನು ಪುರೋಹಿತರು ಸಹ ಅವರು ಹೇಳಿದಂತೆಯೇ ನಕ್ಷತ್ರವನ್ನು ಮಾನವ ನಕ್ಷತ್ರ, ಮನುಷ್ಯ ಕುಲ ಎಂದು ಮಂತ್ರಹೇಳುವ ಮೂಲಕ ಗಣಪತಿ ಪೂಜೆ ನೆರವೇರಿಸಿದರು.

ನಾಸ್ತಿಕ ಮನೋಭಾವ ಹೊಂದಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಜನರಲ್ಲಿ ಜಾಗೃತಿ ಮೂಡಿಸಲು ಧಾರ್ಮಿಕ ಅನಿಷ್ಟ ಪದ್ದತಿ, ಮೂಡ ನಂಬಿಕೆ ವಿರುದ್ಧ ನಿರಂತರವಾಗಿ ಸಮರ ಸಾರುತ್ತಾ ಬಂದಿದ್ದಾರೆ. ಇದನ್ನೂ ಓದಿ: ಡಾಕ್ಟರ್‌ ಆಗಬೇಕೆಂದು ಕನಸು ಕಂಡಿದ್ದ ಹುಡುಗಿ ರಕ್ತದ ಕ್ಯಾನ್ಸರ್‌ಗೆ ಬಲಿ – ಮಗಳ ಆಸೆಯಂತೆ ದೇಹದಾನ ಮಾಡಿದ ಪೋಷಕರು

Share This Article