ಶಕ್ತಿ ಯೋಜನೆಯಿಂದ ಇಲಾಖೆ ಅಭಿವೃದ್ಧಿ ಕಷ್ಟ – ಖಾತೆ ಬದಲಾವಣೆಗೆ ರಾಮಲಿಂಗಾರೆಡ್ಡಿ ಒತ್ತಡ?

Public TV
1 Min Read

ಬೆಂಗಳೂರು: ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಮ್ಮ ಖಾತೆ ಬದಲಾವಣೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ರಾಜ್ಯ ಸರ್ಕಾರದ ಬಜೆಟ್ ಮಂಡನೆ ಬೆನ್ನಲ್ಲೇ ಖಾತೆ ಬದಲಾವಣೆ ಒತ್ತಡ ಕೇಳಿಬಂದಿದೆ ಎನ್ನಲಾಗುತ್ತಿದೆ. ಶಕ್ತಿ ಯೋಜನೆ ಹೊಡೆತದಲ್ಲಿ ಇಲಾಖೆಯ ಅಭಿವೃದ್ಧಿ ಕಷ್ಟವಾಗಿದೆ. ಬಜೆಟ್ ನಿರೀಕ್ಷೆಯೂ ಹುಸಿಯಾಗಿದೆ. ಬೇರೆ ಯಾವುದಾದರೂ ಖಾತೆ ಕೊಟ್ಟರೆ ಒಕೆ. ಈ ಖಾತೆಯಿಂದ ಬಿಡುಗಡೆಗೆ ಮನವಿ ಮಾಡಿದ್ದಾರೆಂಬ ಮಾತು ಕೇಳಿಬಂದಿದೆ. ಇದನ್ನೂ ಓದಿ: ಲೋಕಾಯುಕ್ತರ ಮುಂದೆ ದಡೇಸುಗೂರು ನನ್ನ ಪತಿ ಎಂದ ಮಹಿಳಾಧಿಕಾರಿ – 2ನೇ ಮದುವೆಯಾದ್ರಾ ಮಾಜಿ ಶಾಸಕ?

ಬಜೆಟ್‌ನಲ್ಲಿ ನಿರೀಕ್ಷಿತ ಅನುದಾನ ಇಲ್ಲದಿರುವುದು ಹಾಗೂ ಶಕ್ತಿ ಯೋಜನೆಯ ಆರ್ಥಿಕ ಹೊಡೆತ ಇಲಾಖೆ ಬಗ್ಗೆ ಬೇಸರಕ್ಕೆ ಕಾರಣವಾಗಿದೆ. ಆದ್ದರಿಂದ ಸಿಎಂ ಬಳಿ ಮನವಿ ಮೂಲಕ ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಬಯಸಿದ್ದಾರೆಂದು ತಿಳಿದುಬಂದಿದೆ.

5 ವರ್ಷಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಅಡಿಯಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ 5,200 ಕೋಟಿ ನಷ್ಟ ಆಗಿದೆ ಎಂದು ಈಚೆಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಸಭಾಪತಿ ಹೊರಟ್ಟಿ ಮನೆ ಬಳಿ ದರೋಡೆ ಮಾಡಿದ್ದ ಇಬ್ಬರ ಕಾಲಿಗೆ ಗುಂಡೇಟು!

Share This Article