ಸುರ್ಜೇವಾಲಾಗೆ ಡೋಂಟ್ ಕೇರ್ ಅಂದ ಸಚಿವ ರಾಜಣ್ಣ – ಯುರೋಪ್‌ಗೆ ಫ್ಯಾಮಿಲಿ ಟೂರ್

Public TV
1 Min Read

ಬೆಂಗಳೂರು: ಕಾಂಗ್ರೆಸ್ (Congress) ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರಿಗೆ ಸಚಿವ ರಾಜಣ್ಣ (KN Rajanna) ಡೋಂಟ್ ಕೇರ್ ಅಂದಿದ್ದು, ನಾನು ಯುರೋಪ್‌ಗೆ ಹೋಗಬೇಕು ಬಂದ ಮೇಲೆ ಸಿಗುತ್ತೇನೆ ಎಂದು ಹೇಳಿದ್ದಾರೆ.ಇದನ್ನೂ ಓದಿ: NCERT 8ನೇ ತರಗತಿ ಪಠ್ಯಪುಸ್ತಕ ಪರಿಷ್ಕರಣೆ – ದೆಹಲಿ ಸುಲ್ತಾನರ ಕ್ರೌರ್ಯ, ಮೊಘಲರ ಅಸಹಿಷ್ಣುತೆ ಉಲ್ಲೇಖ

ರಣದೀಪ್ ಸುರ್ಜೇವಾಲಾ ಅವರು ರಾಜ್ಯದಲ್ಲಿ ಸರಣಿ ಸಭೆ ನಡೆಸುತ್ತಿದ್ದಾರೆ. ಹೀಗಾಗಿ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು, ನಾನು ಯುರೋಪ್‌ಗೆ ಹೋಗಬೇಕು, ಪ್ರವಾಸದ ದಿನಾಂಕ ಮೊದಲೇ ನಿಗದಿಯಾಗಿದೆ. ನಿಮ್ಮ ಮೀಟಿಂಗ್ ಇತ್ತೀಚಿಗೆ ಫಿಕ್ಸ್ ಆಗಿದೆ. ಹೀಗಾಗಿ ನಾನು ವಿದೇಶ ಪ್ರವಾಸದಿಂದ ವಾಪಾಸ್ ಬಂದ ಮೇಲೆ ಸುರ್ಜೇವಾಲಾರನ್ನು ಪ್ರತ್ಯೇಕವಾಗಿ ಭೇಟಿ ಮಾಡುತ್ತೇನೆ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾಧ್ಯಮದವರೊಂದಿಗೆ ರಾಜಣ್ಣ ಪುತ್ರ ರಾಜೇಂದ್ರ ಮಾತನಾಡಿ, ನಮ್ಮ ತಂದೆ ಅವರು ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ನಮ್ಮ ತಾಯಿ, ಅವರ ಕಸಿನ್ಸ್ ಜೊತೆ ಹೋಗಿದ್ದಾರೆ, ಒಂದೂವರೆ ತಿಂಗಳ ಹಿಂದೆ ನಿಗದಿಯಾಗಿತ್ತು. ಸುರ್ಜೇವಾಲಾ ಅವರ ಗಮನಕ್ಕೆ ತಂದಿದ್ದಾರೆ. ಮೌಖಿಕವಾಗಿ ಮಾತನಾಡಿದ್ದಾರೆ. ವಿದೇಶ ಪ್ರವಾಸದಿಂದ ಬಂದ ಬಳಿಕ ಸುರ್ಜೇವಾಲಾ ಅವರನ್ನ ಭೇಟಿ ಮಾಡುತ್ತಾರೆ. ಪ್ರವಾಸಕ್ಕೆ ಹೋಗುವುದನ್ನ ಸಿಎಂ ಅವರ ಗಮನಕ್ಕೆ ತಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ನವೀಕರಿಸಬಹುದಾದ ಇಂಧನದಲ್ಲಿ ಭಾರತ ಅದ್ಭುತ ಸಾಧನೆ – ಪ್ರಧಾನಿ ಮೋದಿ ಶ್ಲಾಘನೆ

Share This Article