ಬೆಲ್ಲ ನೀರಿನ ಋಣ ತೀರಿಸಿದ್ದೇನೆ- ಉಡುಪಿಯಲ್ಲಿ ಆರ್ ಅಶೋಕ್ ಗ್ರಾಮ ವಾಸ್ತವ್ಯ

Public TV
1 Min Read

ಉಡುಪಿ: ಗ್ರಾಮ ವಾಸ್ತವ್ಯದಿಂದ ಅಸ್ಪೃಶ್ಯತೆ ಹೇಗಿರುತ್ತದೆ ಎಂಬ ಅನುಭವ ನನಗೆ ಆಗಿದೆ. ಕಣ್ಣ ಮುಂದೆ ಸಮಸ್ಯೆ ಇದ್ದರೂ ನಾವು ಕಣ್ಣುಮುಚ್ಚಿಕೊಂಡು ಓಡಾಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಾಸ್ತವ ತೆರೆದಿಟ್ಟರು.

ಉಡುಪಿ ಜಿಲ್ಲೆ ಆರೂರು ಗ್ರಾಮ ವಾಸ್ತವ್ಯದಲ್ಲಿ ಎರಡು ದಿನಗಳ ಕಾಲ ಹಲವಾರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಶೋಕ್, ಗ್ರಾಮ ವಾಸ್ತವ್ಯ ಜೀವನದಲ್ಲೇ ಹೊಸ ಅನುಭವ ಹೊಸ ವಿಚಾರ ಸಿಕ್ಕಿದೆ. ನಮ್ಮ ನಡುವೆ ಮುಖ್ಯ ವಾಹಿನಿಗೆ ಬಾರದ ನೂರಾರು ಜನಾಂಗಗಳಿವೆ. ಜೀವನದಲ್ಲಿ ನೋಡದೆ ಇರುವ ಸತ್ಯಸಂಗತಿಗಳು ಅರಿವಾಗಿದೆ ಎಂದರು. ಇದನ್ನೂ ಓದಿ: ಮತಗಟ್ಟೆಯಲ್ಲಿ ಸೆಲ್ಫಿ ತೆಗೆದಿದ್ದಕ್ಕೆ ಮೇಯರ್ ವಿರುದ್ಧ ಕೇಸ್

ಕಂದಾಯ ಇಲಾಖೆಗೆ ಸಂಬಂಧಪಟ್ಟ ಎಲ್ಲವನ್ನು ಸ್ಥಳದಲ್ಲಿ ತೀರ್ಮಾನ ಮಾಡಿದ್ದೇನೆ. ನನ್ನದಲ್ಲದ ಇಲಾಖೆಗಳ ಕೆಲಸವನ್ನು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹಿಂದುಳಿದ ಜಿಲ್ಲೆ ಯಾದಗಿರಿಗೆ ನನ್ನ ಮುಂದಿನ ಭೇಟಿ. ಅಲ್ಲಿನ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕೊಡಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ನಂದಿಬೆಟ್ಟದಲ್ಲಿ ಸಿಲುಕಿದ ಯುವಕ – ಹೆಲಿಕಾಪ್ಟರ್ ಮೂಲಕ ರಕ್ಷಣೆ!

ಬೆಲ್ಲ ನೀರಿನ ಋಣ ತೀರಿಸಿದ್ದೇನೆ:
ಕುಡುಬಿ ಸಮುದಾಯದ ಮನೆಯಲ್ಲಿ ಬೆಲ್ಲ ನೀರು ಕುಡಿದಿದ್ದೇನೆ. ಕುಡುಬಿ ಸಮುದಾಯಕ್ಕೆ 50 ಎಕರೆ ಜಮೀನು ಅವರ ಹೆಸರಿನಲ್ಲಿ ಮಾಡುತ್ತಿದ್ದೇನೆ. ಕೊರಗ ಸಮುದಾಯದ ಮನೆಯಲ್ಲಿ ಫಲಾಹಾರ ಸವಿದಿದ್ದೇನೆ. ಯುವಕನಿಗೆ ಗ್ರಾಮ ಸಹಾಯಕ ಹುದ್ದೆ ನೀಡಲಾಗಿದೆ. ಯಾವ ಸಮಾಜವನ್ನು ನೀವು ದೂರ ಇಟ್ಟಿದ್ದೀರೋ, ಯಾವ ಸಮುದಾಯ ಅಸ್ಪೃಶ್ಯತೆ ಇತ್ತೋ, ಅದೇ ಸಮುದಾಯದ ಯುವಕ ನಾಳೆಯಿಂದ ನಿಮ್ಮ ಗ್ರಾಮದಲ್ಲಿ ಗ್ರಾಮಸಹಾಯಕ ಆಗಿ ಕೆಲಸ ಮಾಡಲಿದ್ದಾನೆ ಎಂದು ಸಚಿವ ಅಶೋಕ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *