ಧರ್ಮಸ್ಥಳ ಪ್ರಕರಣ RSS vs RSS ನಡುವಿನ ಜಗಳ – ಪ್ರಿಯಾಂಕ್ ಖರ್ಗೆ

Public TV
3 Min Read

ಬೆಂಗಳೂರು: ಧರ್ಮಸ್ಥಳ ಕೇಸ್ RSS vs RSS ನಡುವಿನ ಜಗಳ ಅಂತ ಬಿಜೆಪಿ ನಾಯಕರ ವಿರುಧ್ಧ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ. ಬಿಜೆಪಿಯಿಂದ ʻಧರ್ಮಸ್ಥಳ ಚಲೋʼ ಮಾಡ್ತಿರೋ ಬಗ್ಗೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ತೀವ್ರ ವಾಗ್ದಾಳಿ ನಡೆಸಿದರು.

ಧರ್ಮಸ್ಥಳ ಕೇಸ್ ನಲ್ಲಿ (Dharmasthala Case) ಬಿಜೆಪಿ ಅವರೇ SIT ಆಗಬೇಕು, ತ‌ನಿಖೆ ಆಗಬೇಕು ಅಂತ ಹೇಳಿದ್ರು. SIT ಆದ ಮೇಲೆ ಇವರು ಯಾವುದೇ ಹೇಳಿಕೆ ಕೊಟ್ಟಿರಲಿಲ್ಲ. ಈಗ ತನಿಖೆ ನಡೆಯೋವಾಗ ಜ್ಞಾನೋದಯ ಆಗಿದೆಯೋ ಅಥವಾ ಯಾರಾದ್ರು ಒತ್ತಡ ಹಾಕಿದ್ದಾರೋ ಗೊತ್ತಿಲ್ಲ, ಒಟ್ನಲ್ಲಿ ಮಾತಾಡ್ತಿದ್ದಾರೆ. ಧಮಸ್ಥಳ ಕೇಸ್ RSS vs RSS ಜಗಳ ಅಂತ ಕಿಡಿಕಾರಿದರು. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್‌ – ಎನ್‌ಐಎ ತನಿಖೆಗೆ ಬಿವೈವಿ ಒತ್ತಾಯ

ಷಡ್ಯಂತ ಆಗಿದೆ ಅಂತ ಹೇಳ್ತಿರೋದು, ಷಡ್ಯಂತ ಮಾಡಿರೋದು ಯಾರು? ಬಿಜೆಪಿ ಅವರು ತಿಮರೋಡಿ, ಗಿರಿಶ್ ಮಟ್ಟಣ್ಣನವರ್ ಬಗ್ಗೆ ಮಾತಾಡ್ತಿದ್ದಾರೆ. ಇವರೆಲ್ಲ ಯಾರ ಕೂಸುಗಳು? ಯಾರ ಗರಡಿಯಲ್ಲಿ ಬೆಳೆದ ವ್ಯಕ್ತಿಗಳು ಇವರು. ಇವೆರೆಲ್ಲ BJP, RSS ವ್ಯಕ್ತಿಗಳೇ. ಮಟ್ಟಣ್ಣನವರ್ ಬಿಜೆಪಿ ಯುವ ಮೋರ್ಚಾದಲ್ಲಿ ಇದ್ದವರು. ಮರೆತು ಹೋಗಿದೆಯಾ? ಬಿಜೆಪಿ ಸ್ಥಳೀಯ ಮುಖಂಡರಿಗೆ ಇದು ಗೊತ್ತಿದೆ ಅಂತ ಹೇಳ್ತಿದ್ದಾರೆ. ಹೇಳಲಿ ಹಾಗಾದ್ರೆ. ತಿಮರೋಡಿ RSS ವ್ಯಕ್ತಿ, RSSಗೆ ಗೊತ್ತಿಲ್ಲದೇ ಇವೆಲ್ಲಾ ನಡೆಯುತ್ತದೆಯಾ? RSS ಜಗಳವನ್ನ ತನಿಖೆ ತಂದು ಹಚ್ಚೋದು ಸರಿಯಲ್ಲ ಅಂತ ಬಿಜೆಪಿ, RSS ವಿರುದ್ಧ ಕಿಡಿಕಾರಿದರು.

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯದ ಬಗ್ಗೆ ಚಲೋ ಮಾಡಿ
SIT ತನಿಖೆ ಆಗ್ತಿದೆ. ಸತ್ಯ ಹೊರಗೆ ತರುತ್ತೇವೆ ಅಂತ ಸಿಎಂ, ಗೃಹ ಸಚಿವರು ಸದನದಲ್ಲಿ ಹೇಳಿದ್ದಾರೆ. ಸತ್ಯಾಂಶ ಹೊರಗೆ ಬರೋ ಮುನ್ನ ಇವರು ಧರ್ಮಸ್ಥಳ ಚಲೋ, ಚಾಮುಂಡೇಶ್ವರಿ ಚಲೋ ಯಾಕೆ ಮಾಡ್ತೀರಾ? ಬಿಜೆಪಿ ಅವರು ಯಾವತ್ತಾದ್ರು ಒಂದು ಸಾರಿ ದೆಹಲಿ ಚಲೊ ಮಾಡಿ. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯದ ಬಗ್ಗೆ ಚಲೋ ಮಾಡಿ. ರಾಜಕೀಯ ಬೇಳೆ ಬೇಯಿಸೋಕೆ ಈ ಧರ್ಮಸ್ಥಳ ಯಾತ್ರೆ ಮಾಡ್ತಿದ್ದಾರೆ ಅಷ್ಟೆ ಅಂತ ಬಿಜೆಪಿ ವಿರುದ್ದ ಪ್ರಿಯಾಂಕ್ ಕಿಡಿಕಾರಿದರು. ಇದನ್ನೂ ಓದಿ: ಬಿಜೆಪಿಯಲ್ಲಿ ನಡೆಯಲಾರದ ನಾಣ್ಯಗಳು ಚಾಲ್ತಿಗೆ ಬರೋಕೆ ದಸರಾ ಬಗ್ಗೆ ಮಾತು – ಪ್ರಿಯಾಂಕ್ ಖರ್ಗೆ

CBI, NIA ಯಲ್ಲಿ ಕರ್ನಾಟಕ ಕೇಸ್ ಎಷ್ಟು ಇದೆ?
CBIಗೆ ಕೊಡಿ NIA ಗೆ ಕೊಡಿ ಅಂತಾರೆ CBI, NIA ಯಲ್ಲಿ ಕರ್ನಾಟಕ ಕೇಸ್ ಎಷ್ಟು ಇದೆ ಅಂತ ಬಿಜೆಪಿ ಅವರಿಗೆ ಅರಿವಿದೆಯಾ? CBI ನಲ್ಲಿ 74 ಕೇಸ್ ಕರ್ನಾಟಕದ ಕೇಸ್ ಇವೆ. ಹಲವಾರು ವರ್ಷಗಳಿಂದ ಕೇಸ್ ಇವೆ. ಏನ್ ಮಾಡ್ತಾ ಇದ್ದೀರಪ್ಪಾ? CBI ಅವರು ಇವು ತನಿಖೆ ಮಾಡೋಕೆ ಆಗದೇ ನಮ್ ಸರ್ಕಾರಕ್ಕೆ ಸಿಬ್ಬಂದಿ, ಕಚೇರಿ ಕೊಡಿ ಅಂತ 2024 ರಲ್ಲಿ ಪತ್ರ ಬರೆದಿದ್ದಾರೆ. ನಮ್ ಅಧಿಕಾರಿಗಳನ್ನ ತೆಗೆದುಕೊಂಡು ತನಿಖೆ ಮಾಡೋಕೆ CBI, NIA ಬೇಕಾ? ಅಂತ CBI ನಲ್ಲಿ ಬಾಕಿ ಇರೋ ಕೇಸ್ ಪಟ್ಟಿ ಬಿಡುಗಡೆ ಮಾಡಿ ಬಿಜೆಪಿಗೆ ತಿರುಗೇಟು ಕೊಟ್ರು. ಇದನ್ನೂ ಓದಿ: ವಿಜಯೇಂದ್ರನಿಗೆ ಬೇರೆ ಬಂಡವಾಳವಿಲ್ಲ, ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸ್ತಿದ್ದಾನೆ – ಎಂ.ಬಿ ಪಾಟೀಲ್

NIA ಸೂಮೊಟೊ ಕೇಸ್ ಹಾಕಿಕೊಳ್ಳಲಿ
NIAಗೆ ಕೊಡೋಕೆ ಯಾವ ದೊಡ್ಡ ನ್ಯಾಷನಲ್ ಸೆಕ್ಯುರಿಟಿ ವಿಷಯ ಇದರಲ್ಲಿ. NIAಗೆ ಕೊಡೋದನ್ನ ಸಿಎಂ, ಗೃಹ ಸಚಿವರು ತಿರಸ್ಕಾರ ಮಾಡಿದ್ದಾರೆ. ಅಷ್ಟು ಇದ್ದರೆ ನೀವು ಹೋಗಿ ಅಲ್ಲಿ ಹೋಗಿ ಆಗ್ರಹ ಮಾಡಿ. NIA ಅವರು ಸುಮೋಟೋ ಕೇಸ್ ಹಾಕಿಕೊಳ್ಳಲಿ. ಯಾವುದಕ್ಕೆ ಆದ್ಯತೆ ನೀಡಬೇಕು ಅಂತ ಗೊತ್ತಾಗ್ತಿಲ್ಲ. ಧರ್ಮಸ್ಥಳ ಕೇಸ್ RSS VS RSS ಜಗಳ ಅಷ್ಟೇ. ಇದನ್ನ ರಾಜ್ಯ ಸರ್ಕಾರಕ್ಕೆ ಹಚ್ಚೋ ಹುನ್ನಾರ ನಡೆದಿದೆ. ಧರ್ಮಸ್ಥಳ ಚಲೋ, ಚಾಮುಂಡಿ ಚಲೋ ರಾಜ್ಯಾಧ್ಯಕ್ಷ, ವಿಪಕ್ಷ ಸ್ಥಾನ ಉಳಿಸಿಕೊಳ್ಳೋಕೆ, ಕುರ್ಚಿ ಉಳಿಸಿಕೊಳ್ಳೋದಕ್ಕೆ ಈ ಚಲೋ ಮಾಡ್ತಿರೋದು ಅಂತ ವಾಗ್ದಾಳಿ ನಡೆಸಿದರು. ನಳಿನ್‌ ಕುಮಾರ್‌ ಕಟೀಲ್‌ ಅವರು 2023 ರಲ್ಲಿ ಬಹಿರಂಗವಾಗಿ ಹೇಳ್ತಾರೆ. ಸುನೀಲ್ ಕುಮಾರ್‌ಗೆ ಸೌಜನ್ಯ ಕೇಸ್ ಬಗ್ಗೆ ಎಲ್ಲಾ ಗೊತ್ತಿದೆ. ಅವರನ್ನ ಮಾತಾಡೋಕೆ ಹೇಳಿ ಅಂತ ಅಂತ ಹೇಳಿದ್ರು.

ಕೇಂದ್ರ ಸರ್ಕಾರದಿಂದ ಸೆಕ್ಯುರಿಟಿ ಕೊಡಿಸ್ತೀವಿ ಅಂತ ಮಾತಾಡಿದ್ರು. ಇದರ ಬಗ್ಗೆ ಮೊದಲು ಬಿಜೆಪಿ ಅವರು ಮಾತಾಡಲಿ. ಮರೆತು ಹೋಗಿದ್ರೆ ಕಟೀಲ್‌ ಅವರು ಬಿಜೆಪಿ ಭಾಷಣ ಕೇಳಿ. ಮೊದಲು ಬಿಜೆಪಿ ಅವರು ಇದಕ್ಕೆ ಉತ್ತರ ಕೊಡಲಿ. ಆಮೇಲೆ ಯಾವ ಚಲೋಬೇಕಾದ್ರೆ ಮಾಡಲಿ ಅವರು ಅಂತ ಸವಾಲ್ ಹಾಕಿದ್ರು. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ; ಎನ್‌ಐಎ ತನಿಖೆಗೆ ಶಾಸಕ ಗೋಪಾಲಯ್ಯ ಒತ್ತಾಯ

Share This Article