ಚೀನಾವನ್ನು ಪ್ರತಿನಿಧಿಸಲು ಬಂದಿದ್ದಾರೆಯೇ: ರಾಹುಲ್ ವಿರುದ್ಧ ಜೋಶಿ ಕಿಡಿ

Public TV
3 Min Read

ನವದೆಹಲಿ: ರಾಹುಲ್ ಗಾಂಧಿ ಅವರು ತಮ್ಮ ಬುದ್ಧಿಯ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಗೊಂದಲಕ್ಕೊಳಗಾಗಿದ್ದಾರೆ. ಅವರು ಭಾರತ ಒಂದು ರಾಷ್ಟ್ರವಲ್ಲ. ಭಾರತ ಇತಿಹಾಸಕ್ಕೆ ಒಳಪಟ್ಟಿಲ್ಲ. ಚೀನಾ ದೃಷ್ಟಿಕೋನ ಸರಿಯಾಗಿದೆ ಎಂದ ಹೇಳುತ್ತಾರೆ. ಅವರೇನು ಸಂಸತ್ತಿನಲ್ಲಿ ಚೀನಾವನ್ನು ಪ್ರತಿನಿಧಿಸಲು ಬಂದಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ನೀವು ಸಂವಿಧಾನವನ್ನು ಓದಿದರೆ ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ವಿವರಿಸಲಾಗಿದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ರಾಹುಲ್ ಗಾಂಧಿಗೆ ನೆನಪಿನ ಶಕ್ತಿ ಹೋಗಿದೆ ಅನ್ನಿಸುತ್ತದೆ. ಭಾರತವಷ್ಟೇ ಅಲ್ಲ, ಇಡೀ ಜಗತ್ತು ಕೊರೊನಾ ಸೋಂಕಿನಿಂದ ಸುತ್ತುವರಿದಿದೆ. ಹಾಗಾಗಿ ಆಯಾ ರಾಷ್ಟ್ರಗಳು ದ್ವೀಪದಂತೆ ಪ್ರತ್ಯೇಕಗೊಂಡಿವೆ. ಹಾಗಾಗಿ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಗಣರಾಜ್ಯೋತ್ಸವಕ್ಕೆ ಯಾವುದೇ ಅತಿಥಿಯನ್ನು ಭಾರತ ಆಹ್ವಾನಿಸಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಮಾತನಾಡುವಾಗ ರಾಜ್ಯದ ಒಕ್ಕೂಟದ ದನಿ ಅಡಗಿಸಲು ಕೇಂದ್ರ ಸಕಾರವು ನ್ಯಾಯಾಂಗ ವ್ಯವಸ್ಥೆ ಹಾಗೂ ಪೆಗಾಸಸ್ ಸ್ಪೈವೇರ್‍ಗಳನ್ನು ಸಾಧನವಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತವಾಗಿದೆ.

ಭಾರತವು ಒಂದು ದೇಶವಲ್ಲ ಇದು ರಾಜ್ಯಗಳ ಒಕ್ಕೂಟ ಎಂದು ಸಂವಿಧಾನ ಹೇಳುತ್ತದೆ. ಯಾವುದೇ ಒಬ್ಬ ವ್ಯಕ್ತಿ ಇಡೀ ದೇಶದ ಮೇಲೆ ಪ್ರಭುತ್ವ ಸಾಧಿಸಲು ಆಗದು. ದೇಶದಲ್ಲಿ ಬಹುಸಂಸ್ಕøತಿ ಹಾಗೂ ಬಹುಭಾಷೆ ಇವೆ. ಇವನ್ನು ದಮನಿಸಲು ಆಗದು. ಇದು ಒಂದು ಒಕ್ಕೂಟ ವ್ಯವಸ್ಥೆಯೇ ಹೊರತು ಸಾಮ್ರಾಜ್ಯವಲ್ಲ ಎಂದಿದ್ದರು. ಇದನ್ನೂ ಓದಿ: ಸಂಪುಟ ವಿಸ್ತರಣೆಗೆ ಸಿಗುತ್ತಾ ವರಿಷ್ಠರ ಗ್ರೀನ್ ಸಿಗ್ನಲ್- ಯಾರೆಲ್ಲ ಸಚಿವಾಕಾಂಕ್ಷಿಗಳು?

ಜಮ್ಮು ಮತ್ತು ಕಾಶ್ಮೀರದಲ್ಲಿ ಚೀನಾ ಮತ್ತು ಪಾಕಿಸ್ತಾನವನ್ನು ಒಟ್ಟಿಗೆ ತರುವ ಅಪರಾಧವನ್ನು ಕೇಂದ್ರ ಸರ್ಕಾರ ಮಾಡಿದೆ. ದೊಡ್ಡ ವ್ಯೂಹಾತ್ಮಕ ತಪ್ಪು ಮಾಡಿದೆ ಎಂದು ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದ್ದರು. ಇದನ್ನೂ ಓದಿ: ರಾಜಕೀಯ ಪುನರ್‌ ಪ್ರವೇಶಕ್ಕೆ ರೆಡ್ಡಿ ಯತ್ನ – ಅನುಮತಿ ನೀಡುತ್ತಾ ಹೈಕಮಾಂಡ್‌?

Share This Article
Leave a Comment

Leave a Reply

Your email address will not be published. Required fields are marked *