ನಮ್ಮ ಇಲಾಖೆಯಲ್ಲಿ ಅನುದಾನ ಇಲ್ಲ- ಸದನದಲ್ಲಿ ಜಲಸಂಪನ್ಮೂಲ ಸಚಿವರ ಅಳಲು

By
2 Min Read

ಬೆಂಗಳೂರು: ಜಲ ಸಂಪನ್ಮೂಲ ಇಲಾಖೆಯಲ್ಲಿ ಅನುದಾನ ಕೊರತೆ ಇದೆ ಅಂತ ಸ್ವತಃ ಜಲಸಂಪನ್ಮೂಲ ಇಲಾಖೆ ಸಚಿವರೇ ಅಸಹಾಯಕತೆ ತೋಡಿಕೊಂಡ ಘಟನೆ ನಡೆಯಿತು.

ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 72ರ ಅಡಿ ಜೆಡಿಎಸ್ ನ ಬಿಎಂ ಫಾರೂಕ್, ಜಲ ಸಂಪನ್ಮೂಲ ಇಲಾಖೆ ಬಿಲ್ ಪಾವತಿ ಆಗದ ಬಗ್ಗೆ ವಿಷಯ ಪ್ರಸ್ತಾಪ ಮಾಡಿದರು. ಜಲ ಸಂಪನ್ಮೂಲ ಇಲಾಖೆ ವಿವಿಧ ನಿಗಮದಲ್ಲಿ ಆದ ಕಾಮಗಾರಿಗಳ ಬಿಲ್ ಇನ್ನು ಪಾವತಿ ಆಗಿಲ್ಲ. ಕೋಟ್ಯಂತರ ರೂಪಾಯಿ ಹಣ ಇಲಾಖೆ ಬಾಕಿ ಉಳಿಸಿಕೊಂಡಿದೆ. ಕೂಡಲೇ ಕಾಮಗಾರಿಗಳ ಬಿಲ್ಲಿನ ಮೊತ್ತ ಪಾವತಿಸಿ. ಇಲ್ಲದೆ ಹೋದ್ರೆ ಹೊಸ ಕಾಮಗಾರಿ ಹೇಗೆ ಮಾಡುತ್ತೀರಾ ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಸ್ಪೀಕರ್ ಕಾಗೇರಿಗೆ ವೆರಿಗುಡ್ ಎಂದ ಸಿದ್ದರಾಮಯ್ಯ

ಇದಕ್ಕೆ ಉತ್ತರ ನೀಡಿದ ಸಚಿವ ಕಾರಜೋಳ, 2021-22ನೇ ಸಾಲಿನ 4 ನಿಗಮಗಳಾದ ಕೃಷ್ಣ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮ, ಕಾವೇರಿ ನೀರಾವರಿ ನಿಗಮಗಳಿಗೆ 17410.28 ಕೋಟಿ ಬಿಡುಗಡೆ ಮಾಡಲಾಗಿದೆ. ಜನವರಿ ಅಂತ್ಯಕ್ಕೆ 10967.47 ಕೋಟಿ ಬಿಡುಗಡೆಯಾಗಿದೆ. ಈ ಯೋಜನೆಗಳನ್ನ ಪೂರ್ಣಗೊಳಿಸಲು 1 ಲಕ್ಷ ಕೋಟಿ ಅಗತ್ಯವಿದೆ. ಬಾಕಿ ಇರುವ ಬಿಲ್ ಮೊತ್ತ 9998.95 ಕೋಟಿ ಆಗಿದೆ. ಹಂತ ಹಂತವಾಗಿ ಆದ್ಯತೆ ಮೇರೆಗೆ ಹಣವನ್ನು ಬಿಡುಗಡೆ ಮಾಡಲಾಗುತ್ತೇವೆ ಅಂತ ಭರವಸೆ ನೀಡಿದರು. ಇದನ್ನೂ ಓದಿ: ಪರೀಕ್ಷೆ ನಡೆಸಿ ಕರ್ನಾಟಕದ ಮೆಡಿಕಲ್‌ ಕಾಲೇಜುಗಳಲ್ಲಿ ಸೀಟ್‌ ನೀಡಿ: ಎಚ್‌ಡಿಕೆ

 

ನಮ್ಮ ಬಜೆಟ್ ಅಲೋಕೇಶನ್ ಮತ್ತು ನಮ್ಮ ಯೋಜನೆಗಳಿಗೆ ತುಂಬಾ ವ್ಯತ್ಯಾಸ ಇದೆ. ಈ ಇಲಾಖೆಯಲ್ಲಿ ಅನೇಕ ಸಮಸ್ಯೆಗಳು ಇವೆ. ಮಹದಾಯಿ, ಮೇಕೆದಾಟು ಸೇರಿದಂತೆ ಅನೇಕ ಯೋಜನೆಗಳು ಕೋರ್ಟ್‍ನಲ್ಲಿ ಇವೆ. ಟೋಕನ್ ಹಣ ಇಟ್ಟು ಯೋಜನೆ ಸ್ಯಾಂಕ್ಷನ್ ಮಾಡೋದ್ರೀಂದ ಈ ಸಮಸ್ಯೆ ಆಗ್ತಿದೆ ಅಂತ ತಿಳಿಸಿದರು. ನಮ್ಮ ಇಲಾಖೆಯಲ್ಲಿ ಅನುದಾನ ಕೊರತೆ ಇದೆ. ನಮ್ಮಲ್ಲಿ ಇನ್ನು 22 ಲಕ್ಷ ಹೆಕ್ಟೇರ್ ನೀರಾವರಿ ಮಾಡೋ ಅವಕಾಶ ಇದೆ. ಆದ್ರೆ ನಮಗೆ ಅನುದಾನ ಕೊರತೆಯಿಂದ ಸಮಸ್ಯೆ ಆಗ್ತಿದೆ ಅಂತ ಅಸಹಾಯಕತೆ ತೋಡಿಕೊಂಡರು. ಇದನ್ನೂ ಓದಿ: ಎತ್ತಿನಹೊಳೆ ಪೂರ್ಣ ಆದ್ರೆ ನೇಣು ಹಾಕಿಕೊಳ್ಳುತ್ತೇನೆ: ಭೋಜೇಗೌಡ

Share This Article
Leave a Comment

Leave a Reply

Your email address will not be published. Required fields are marked *