ಸೆ.27ರಂದು ತುಮಕೂರು- ಯಶವಂತಪುರ ಮೆಮು ರೈಲಿಗೆ ಚಾಲನೆ

Public TV
1 Min Read

ತುಮಕೂರು: ತುಮಕೂರು- ಯಶವಂತಪುರ (Tumkur-Yeshwanthpur) ಮೆಮು ರೈಲು ಸಂಚಾರಕ್ಕೆ (Memu Train) ಸೆ. 27ರಂದು ಬೆಳಿಗ್ಗೆ 8 ಗಂಟೆಗೆ ನಗರದ ರೈಲು ನಿಲ್ದಾಣದಲ್ಲಿ ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V Somana) ಚಾಲನೆ ನೀಡಲಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ (Jyothi Ganesh) ತಿಳಿಸಿದರು.

ನಗರದಿಂದ ಬೆಳಿಗ್ಗೆ 8:45ಕ್ಕೆ ಹೊರಟು 10:25 ಗಂಟೆಗೆ ಯಶವಂತಪುರ ತಲುಪಲಿದೆ. ಅಲ್ಲಿಂದ ಸಂಜೆ 5:45ಕ್ಕೆ ಹೊರಡುವ ರೈಲು ರಾತ್ರಿ 7:05 ಗಂಟೆಗೆ ತುಮಕೂರು (Tumakuru) ಪ್ರವೇಶಿಸಲಿದೆ. ಭಾನುವಾರ ಹೊರತುಪಡಿಸಿ ಉಳಿದ ಎಲ್ಲ ದಿನ ರೈಲು ಪ್ರಯಾಣಿಕರ ಇದರ ಪ್ರಯೋಜನ ಪಡೆಯಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇದನ್ನೂ ಓದಿ: ಮುಡಾ ಕೇಸಲ್ಲಿ ಸಿಎಂಗೆ ಅಸಲಿ ಸಂಕಷ್ಟ – ಕೋರ್ಟ್‌ ಆದೇಶದಲ್ಲಿ ಏನಿದೆ? ಯಾರ ವಿರುದ್ಧ ತನಿಖೆ?

ಮೆಮು ರೈಲು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದು, ಕೊನೆಗೂ ಸಂಚಾರ ಆರಂಭವಾಗುತ್ತಿದೆ. ಸೋಮಣ್ಣ ಕೇಂದ್ರ ಸಚಿವರಾದ ನಂತರ ಜಿಲ್ಲೆಯ ರೈಲ್ವೆ ಕಾಮಗಾರಿಗಳಿಗೆ ವೇಗ ನೀಡಿದ್ದಾರೆ. 500 ಕೋಟಿ ರೂ.ಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ರೈಲ್ವೆ ಕೆಳ ಸೇತುವೆ, ಮೇಲ್ಸೇತುವೆ ನಿರ್ಮಾಣ ಕಾರ್ಯವೂ ಶುರುವಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ರಷ್ಯಾ ಮೇಲೆ ಕ್ರೂಸ್‌ ಕ್ಷಿಪಣಿ ದಾಳಿಗೆ ಉಕ್ರೇನ್‌ ಪ್ಲ್ಯಾನ್‌ – ಉನ್ನತಾಧಿಕಾರಿಗಳ ತುರ್ತುಸಭೆ ಕರೆದ ಪುಟಿನ್‌

ಭೀಮಸಂದ್ರ, ಶೆಟ್ಟಿಹಳ್ಳಿ ಕೆಳ ಸೇತುವೆಗಳ ಅಭಿವೃದ್ಧಿ ಕಾರ್ಯ ಆರಂಭವಾಗಿದೆ. ರೈಲ್ವೆ ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

 

Share This Article