ರಾಮನಗರಕ್ಕಿಂದು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

0 Min Read

ರಾಮನಗರ: ಜಿಲ್ಲೆಗೆ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಆಗಮಿಸಲಿದ್ದು, ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಬೆ.11ಕ್ಕೆ ಬೆಂಗಳೂರಿನಿಂದ ರಸ್ತೆ ಮೂಲಕ ರಾಮನಗರ ತಾಲೂಕಿನ ಬನ್ನಿಕುಪ್ಪೆ ಗ್ರಾಮಕ್ಕೆ ಭೇಟಿ ನೀಡಿ, ನೂತನವಾಗಿ ನಿರ್ಮಾಣವಾಗುತ್ತಿರುವ ವೇದವಿದ್ಯಾ ವಿಹಾರ ಗುರುಕುಲದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಮಧ್ಯಾಹ್ನ 1ಕ್ಕೆ ಮತ್ತೆ ವಾಪಸ್ಸಾಗಲಿದ್ದಾರೆ. ಇದನ್ನೂ ಓದಿ:ನಂದಿನಿ ನಕಲಿ ತುಪ್ಪದ ಹಾವಳಿ ತಡೆಗೆ ಕ್ರಮ – ಕೆಎಂಎಫ್‌ನಿಂದ ಮಾಸ್ಟರ್ ಪ್ಲ್ಯಾನ್

ವೇದವಿದ್ಯಾ ವಿಹಾರ ಗುರುಕುಲದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಹ್ವಾನಿತರಿಗಷ್ಟೇ ಪ್ರವೇಶಕ್ಕೆ ಅವಕಾಶವಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

Share This Article