ಬಿಜೆಪಿಯಿಂದ ಅಂತರ ಕಾಯ್ದುಕೊಂಡ ನಾರಾಯಣಗೌಡ- ಶಕ್ತಿಪ್ರದರ್ಶನಕ್ಕೆ ಸಿದ್ಧತೆ ನಡೆಸ್ತಿದ್ದಾರಾ ಸಚಿವರು?

Public TV
2 Min Read

ಮಂಡ್ಯ: ಸಚಿವ ನಾರಾಯಣಗೌಡ (Narayana Gowda) ಬಿಜೆಪಿಗೆ ಕೈ ಕೊಟ್ಟು ಕಾಂಗ್ರೆಸ್ (Congress) ಕೈ ಹಿಡಿಯುತ್ತಾರೆ ಎಂಬ ಚರ್ಚೆಗೆ ದಿನೇ ದಿನೇ ಪುಷ್ಟಿ ಹೆಚ್ಚಾಗುತ್ತಿದೆ. ನಾರಾಯಣಗೌಡರು ಮುಂದೆ ಕಾಂಗ್ರೆಸ್‍ಗೆ ಹೋಗ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಬಿಜೆಪಿಯಲ್ಲಿ ಮಾತ್ರ ಇರಲ್ಲ ಎಂದು ನಾರಾಯಣಗೌಡರ ಆ ಕಾರ್ಯಕ್ರಮ ಹೇಳ್ತಾ ಇದೆ.

ಸಚಿವ ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ವದಂತಿ ಕಳೆದ ಒಂದು ವಾರದಿಂದ ಕೇಳಿಬರುತ್ತಿವೆ. ಈ ಚರ್ಚೆಗೆ ಬಿಜೆಪಿ (BJP) ನಾಯಕರು ಕಾನ್ಫಿಡೆಂಟ್‍ನಿಂದ ಅಲ್ಲದಿದ್ರು, ಬಾಯಿ ಮಾತಿನಲ್ಲಿ ಅವರು ನಮ್ಮ ಪಕ್ಷದಲ್ಲಿಯೇ ಇರ್ತಾರೆ ಎಂದು ಹೇಳ್ತಾ ಇದ್ದಾರೆ. ಆದರೆ ನಾರಾಯಣಗೌಡರ ನಡೆ ಮಾತ್ರ ಬಿಜೆಪಿ ನಾಯಕರಿಗೆ ಫುಲ್ ಕನ್ಫ್ಯೂಸ್ ಮಾಡ್ತಾ ಇದೆ.

ಕೆಆರ್‍ ಪೇಟೆ (KR Pete) ಕ್ಷೇತದಲ್ಲಿ ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಮಾತ್ರ ಸಚಿವ ನಾರಾಯಣಗೌಡ ಪಾಲ್ಗೊಂಡಿದ್ದರು. ಅದನ್ನು ಹೊರತುಪಡಿಸಿ ಬೇರೆ ಯಾವ ಕ್ಷೇತ್ರದಲ್ಲೂ ಕಾಣಿಸಿಕೊಳ್ಳಲಿಲ್ಲ. ಆದರೆ ಕೆಆರ್ ಪೇಟೆ ವಿಜಯಸಂಕಲ್ಪ ಯಾತ್ರೆ (Vijaya Sankalpa Yatre) ಯಲ್ಲಿ ಭಾಗಿಯಾದ್ರು ಅವರು ನಮ್ಮ ಪಕ್ಷದಲ್ಲಿ ಇರ್ತಾರೆ ಎಂದುಕೊಳ್ಳುತ್ತಿದ್ದ ಬಿಜೆಪಿ ನಾಯಕರಿಗೆ ಕಹಾನಿ ಮೇ ಟ್ವಿಸ್ಟ್ ಅಂತಾ ಇಂದು ಸಚಿವರು ಮೆಗಾ ಟ್ವಿಸ್ಟ್ ಕೊಟ್ಟಿದ್ದಾರೆ. ಇದನ್ನೂ ಓದಿ: ಕಾರಿನಲ್ಲಿ ಫಾಲೋ ಮಾಡ್ತಾರೆ, ಟ್ರಕ್ ಹತ್ತಿಸಲು ಬರ್ತಾರೆ- ಶಾಸಕಿ ರೂಪಾಲಿ ನಾಯ್ಕ್‌ಗೆ ಜೀವ ಬೆದರಿಕೆ

ನಾರಾಯಣಗೌಡ ಕೆಆರ್ ಪೇಟೆ ಕ್ಷೇತ್ರಾದ್ಯಂತ ತಮ್ಮ ಮತದಾರರಿಗೆ ಬಾಡೂಟ ಹಾಕಿಸುತ್ತಿದ್ದಾರೆ. ಬುಧವಾರ ಯಡಿಯೂರಪ್ಪ ಹುಟ್ಟೂರಾದ ಬೂಕನಕೆರೆಯಲ್ಲಿ ಭರ್ಜರಿ ಬಾಡೂಟ ಹಾಕಿಸಿದ್ರು. ಇದಕ್ಕೂ ಮುನ್ನ ಸಮಾವೇಶ ಕೂಡ ಆಯೋಜಿಸಿದ್ರು. ಈ ಹಿಂದೆ ನಾರಾಯಣಗೌಡರ ಕಾರ್ಯಕ್ರಮದಲ್ಲಿ ಬಿಜೆಪಿ ಬಾವುಟಗಳು, ಫ್ಲೆಕ್ಸ್, ಬಂಟಿಂಕ್ಸ್ ಗಳು ರಾರಾಜಿಸುತ್ತಿದ್ದವು. ಅಲ್ಲದೇ ನಾರಾಯಣಗೌಡರು ತಮ್ಮ ಭಾಷಣದ ಉದ್ದಕ್ಕೂ ಬಿಜೆಪಿ ಪಕ್ಷವನ್ನು ಹಾಡಿ ಕೊಂಡಾಡುತ್ತಿದ್ರು. ಆದರೆ ನಿನ್ನೆ ನಡೆದ ಈ ಕಾರ್ಯಕ್ರಮಲ್ಲಿ ಮಾತ್ರ ಹುಡುಕಿದ್ರು ಒಂದೇ ಒಂದು ಬಿಜೆಪಿ ಪಕ್ಷದ ಬಾವುಟ, ಫ್ಲೆಕ್ಸ್, ಬಂಟಿಂಕ್ಸ್ ಗಳು ಕಾಣಿಸಲೇ ಇಲ್ಲ. ತಮ್ಮ ಭಾಷಣದಲ್ಲಿ ಅಪ್ಪಿ-ತಪ್ಪಿಯೂ ನಾರಾಯಣಗೌಡ ಬಿಜೆಪಿ ಎಂಬ ಪದವನ್ನು ಬಳಸಲಿಲ್ಲ. ತಮ್ಮ ಭಾಷಣದಲ್ಲಿ ಕೇವಲ ನನ್ನ ಮತದಾರರೇ ನನ್ನ ದೇವರು, ನೀವು ನನಗೆ ಬೆಂಬಲಿಸಿದ್ರೆ ನಾನು ಚುನಾವಣೆಗೆ ನಿಲ್ಲುತ್ತೇನೆ. ನಾನು ಸೋತರೂ, ಗೆದ್ದರೂ ಕೆಆರ್ ಪೇಟೆಯಲ್ಲಿಯೇ ಇರ್ತೀನಿ, ನನ್ನ ಮಣ್ಣು ಇಲ್ಲಿಯೇ ಆಗುತ್ತೆ ಎಂದು ಭಾವುಕವಾಗಿ ಮಾತನಾಡಿದ್ರು.

ಒಟ್ಟಾರೆ ಸಚಿವ ನಾರಾಯಣಗೌಡ ನಡೆ ನಿಗೂಢವಾಗಿದ್ದು, ಬಿಜೆಪಿ ತೊರೆಯೋದು ಬಹುತೇಕ ಖಚಿತ ಎನ್ನಲಾಗಿದೆ. ಆದರೆ ಮುಂದೆ ಕಾರ್ಯಕರ್ತರ ವಿರೋಧದ ನಡುವೆಯೂ ಕಾಂಗ್ರೆಸ್ ಸೇರುತ್ತಾರಾ? ಅಥವಾ ಪಕ್ಷೇತರವಾಗಿ ಕಮಾಲ್ ಮಾಡಬೇಕು ಎಂದು ಏನಾದರೂ ಲೆಕ್ಕಾಚಾರ ಹಾಕಿಕೊಂಡಿದ್ದಾರಾ? ಎಂದು ಕಾದುನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *