ಲೋಕಸಭಾ ಚುನಾವಣೆ ಸೋಲಿನ ಕಹಿ ಬಗ್ಗೆ ಸಿಎಂ ಎದುರೇ ಸಚಿವ ಮುನಿಯಪ್ಪ ನೋವಿನ ಮಾತು

Public TV
1 Min Read

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ತಮಗಾದ ಸೋಲಿನ ಬಗ್ಗೆ ಸಚಿವ ಕೆ.ಹೆಚ್‌.ಮುನಿಯಪ್ಪ(K H Muniyappa) ಸಿಎಂ ಇದ್ದ ವೇದಿಕೆಯಲ್ಲೇ ಪ್ರಸ್ತಾಪ ಮಾಡಿದರು.

ವಿಧಾನಸೌಧದ ಆವರಣದಲ್ಲಿ ನಡೆದ ಬಾಬು ಜಗಜೀವನ್ ರಾಮ್(Babu Jagajeevan Ram) ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಮುನಿಯಪ್ಪ ಭಾಷಣ ಮಾಡಿ ಸ್ವಪಕ್ಷೀಯರ ವಿರುದ್ಧ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಒಳ ಮೀಸಲಾತಿ ಜಾರಿ ಮಾಡಿಯೇ ಮಾಡ್ತೀವಿ, ಯಾರಿಗೂ ಅನ್ಯಾಯ ಮಾಡಲ್ಲ: ಸಿದ್ದರಾಮಯ್ಯ

ಬಾಬು ಜಗಜೀವನ್ ರಾಂರಂತೆ ನಾನು 8 ಬಾರಿ ಸಂಸದನಾಗಿ ಗೆಲ್ಲುವ ಅವಕಾಶ ಇತ್ತು. ಇನ್ನೊಂದು ಬಾರಿ ಗೆದ್ದಿದ್ದರೆ ನಾನು ಅವರ ಸಾಲಿನಲ್ಲಿ ಸೇರುತ್ತಿದ್ದೆ, ಆದರೆ ಸಾಧ್ಯ ಆಗಲಿಲ್ಲ. ನಮ್ಮವರೇ ನಮಗೆ ತೊಂದರೆ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಶ್ರೀಲಂಕಾದ ಅತ್ಯುನ್ನತ ಗೌರವ ‘ಮಿತ್ರ ವಿಭೂಷಣ’‌ ಪ್ರಶಸ್ತಿ ಪ್ರದಾನ

ನನಗೆ ಬಹಳ ನೋವಿದೆ. ನನಗೆ ಅನ್ಯಾಯ ಮಾಡಿದ್ದಕ್ಕೆ ದೇವರು ಅವರಿಗೂ ತೋರಿಸಿದ. ಅವರೇ ಅನುಭವಿಸಿದರು ಎಂದು ಪರೋಕ್ಷವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮೇಲೆ ಅಸಮಾಧಾನ ಹೊರಹಾಕಿದರು.

Share This Article