ಭಾರತ ದೇಶದ ಹಿಂದುತ್ವದ ಸಂಕೇತ ಕೇಸರಿ – ಸಿದ್ದರಾಮಯ್ಯಗೆ ಮುನಿರತ್ನ ಟಾಂಗ್

Public TV
2 Min Read

– ಉಪಚುನಾವಣೆಯಲ್ಲಿ ಈಗಾಗಲೇ ಬಿಜೆಪಿ ಗೆದ್ದಾಗಿದೆ

ಹಾವೇರಿ: ಭಾರತ ದೇಶದ ಹಿಂದುತ್ವದ ಸಂಕೇತ ಕೇಸರಿಯಾಗಿದೆ. ನೀವು ಚರ್ಚೆ ಮಾಡಿ, ನಾವು ಕೂಡ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಸರ್ಕಾರಿ ನೌಕರರು ಪಕ್ಷದ ಚಿಹ್ನೆ ಇರುವವರಲ್ಲ ಎಂದು ಸಚಿವ ಮುನಿರತ್ನ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.

ಹಾನಗಲ್ ತಾಲೂಕು ಅಕ್ಕಿ ಆಲೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪೊಲೀಸ್ ಅಧಿಕಾರಿಗಳು ಕೇಸರಿ ಶಾಲು ಧರಿಸಿದ್ದಕ್ಕೆ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದರು. ಒಂದು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಿ. ನಾನು ಕೇಸರಿ ಶಾಲ್ ಹಾಕೊಂಡಿದ್ದೀನಿ. ಶಾಲ್ ಮೇಲಿರುವ ಇದು ನಮ್ಮ ಪಕ್ಷದ ಚಿಹ್ನೆ. ಪೊಲೀಸ್ ಠಾಣೆಯಲ್ಲಿ ಕೇಸರಿ ಶಾಲು ಹಾಕೊಂಡಿದ್ದಾರೆ. ಅದರಲ್ಲಿ ತಪ್ಪೆನಿದೆ?, ಕೇಸರಿ ಶಾಲಲ್ಲಿ ನಮ್ಮ ಪಕ್ಷದ ಚಿಹ್ನೆ ಇತ್ತಾ?, ಇದ್ದರೆ ಅದರ ಬಗ್ಗೆ ನಾವು ಉತ್ತರ ಕೊಡಬಹುದು. ಚಿಹ್ನೆ ಇಲ್ಲದೇ ಇರೋ ಕೇಸರಿ ಬಗ್ಗೆ ನಾನ್ಯಾಕೆ ಉತ್ತರ ಕೊಡಲಿ. ನಮ್ಮ ಬಿಜೆಪಿ ಚಿಹ್ನೆ ಇದ್ದರೆ ನಾನು ಉತ್ತರ ಕೊಡಬಹುದು ಎಂದರು.

ಹಾನಗಲ್ ಉಪ ಚುನಾವಣೆ ನಾವೇ ಗೆಲ್ತೀವಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಶಿರಾ, ಆರ್ ಆರ್ ನಗರ ಮುಗಿದಿದೆ. ಇನ್ನೊಂದು ಉತ್ತರಕ್ಕೆ ಕಾಂಗ್ರೆಸ್ ನವರು ಕಾಯ್ತಾ ಇದ್ದಾರೆ. ಅದಕ್ಕೆ ಉತ್ತರ ಸಿಗುತ್ತೆ. ಉಪಚುನಾವಣೆ ಈಗಾಗಲೇ ಗೆದ್ದಾಗಿದೆ. ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಈ ಚುನಾವಣೆ ಖಂಡಿತಾ ಗೆಲ್ತೀವಿ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಕುಮಾರಸ್ವಾಮಿ, ರೇವಣ್ಣ ಹೊಡೆದಾಡುತ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ಕನಸು ಕಂಡರೂ ಆಗಲ್ಲ: ರೇವಣ್ಣ

ಆರ್ ಎಸ್ ಎಸ್ ಬಗ್ಗೆ ಸಿದ್ದರಾಮಯ್ಯ ಟೀಕೆ ಮಾಡಿದ ವಿಚಾರ ಸಂಬಂಧ ಮಾತನಾಡಿ, ಆರ್ ಎಸ್ ಎಸ್ ನವರು ಈ ದೇಶಕ್ಕೋಸ್ಕರ ಅದರದ್ದೇ ಆದ ಪ್ರಚಾರ ಮಾಡುವವರು. ಅವರೇನೂ ಯಾರೂ ಭಯೋತ್ಪಾದಕರಲ್ಲವಲ್ಲ. ಯಾವುದಾದರೂ ದೇಶದ್ರೋಹದ ಕೆಲಸ ಮಾಡಿದ್ದಾರಾ?. ಅದರ ಬಗ್ಗೆ ಯಾಕೆ ಚರ್ಚೆ ಮಾಡೋದು. ಕೋಮುವಾದಿ ಸಂಘಟನೆ ಅಂತ ನೀವು ಅನ್ಕೊಂಡಿರಬಹುದು. ರಾಜಕೀಯಕ್ಕೋಸ್ಕರ ಹೇಳ್ತಾ ಇದ್ದಾರೆ. ರಾಜಕೀಯಕ್ಕೋಸ್ಕರ ರಾಜಕೀಯ ಮುಖಂಡರು ಈ ರೀತಿ ಹೇಳ್ತಾ ಇದ್ದಾರೆ. ಆರ್ ಎಸ್ ಎಸ್ ನವರು ಯಾವ ತಪ್ಪು ಮಾಡ್ತಾ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: 2023 ರಲ್ಲಿ ಜೆಡಿಎಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ, ಇದು ದೈವದ ಆಟ: ಶರವಣ

ಚುನಾವಣೆ ಬಂದಾಗ ಗೂಂಡಾ ಸರ್ಕಾರ ಅಂತಾರೆ. ಚುನಾವಣೆ ಬಂದಾಗ ಇವರಿಗೆ ಆರ್ ಎಸ್ ಎಸ್ ನವರು, ಗೂಂಡಾಗಳಂತೆ ಕಾಣಿಸುತ್ತಾರೆ. ಚುನಾವಣೆ ಇಲ್ಲದಾಗ ಯಾವುದೂ ಇರಲ್ಲ. ಇದೇ ವೇಳೆ 2023 ಕ್ಕೆ ನಾವೇ ಅಧಿಕಾರಕ್ಕೆ ಬರ್ತೀವಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, 2023 ಕಳೆದ ಮೇಲೆ 2028 ರವಳಗೆ ಯಾರ್ಯಾರು ಏನೇನ್ ಆಗಿರ್ತಾರೆ ತಿಳಿಯುತ್ತೆ, ಸ್ವಲ್ಪ ತಾಳ್ಮೆಯಿಂದ ಕಾಯಿರಿ. 2023 ರ ನಂತರ ಸರ್ಕಾರ ಯಾರು ರಚನೆ ಮಾಡ್ತಾರೆ. ಇದಾದ ಮೇಲೆ 5 ವರ್ಷ ಆದ ಮೇಲೆ ಏನೇನಾಗುತ್ತೆ ಅಂತ ಇವಾಗ್ಲೆ ಕಾಣಿಸ್ತಿದೆ ಎಂದರು. ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ಡೀಲರ್: ಜಮೀರ್ ವಾಗ್ದಾಳಿ

ಬೆಂಗಳೂರಿನಲ್ಲಿ ಕಟ್ಟಡಗಳು ಕುಸಿಯುತ್ತಿದೆ. ಕುಸಿಯುವ ಕಟ್ಟಡಗಳನ್ನು ಗುರುತು ಮಾಡಿ. ಜೀವ ರಕ್ಷಣೆ ಮಾಡಲಾಗ್ತಿದೆ. ಕಟ್ಟಡ ತೆರವು ಮಾಡಿ ಪುನರ್ ನಿರ್ಮಾಣ ಮಾಡಲು ಅಧಿಕೃತ ನಕ್ಷೆ ಮಾಡ್ತಿದ್ದಾರೆ. ಜೀವ ಮುಖ್ಯ ಕಟ್ಟಡ ಇನ್ನೊಂದು ಕಟ್ಟಬಹುದು ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *