ಮುಂದಿನ ದಿನಗಳಲ್ಲಿ ಪ್ರತಾಪ್ ಸಿಂಹ ನಡವಳಿಕೆಯಿಂದ ಬಿಜೆಪಿಗೆ ಹೊಡೆತ- ಸಚಿವ ಎಂ.ಬಿ ಪಾಟೀಲ್

Public TV
1 Min Read

ವಿಜಯಪುರ: ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಸುಮ್ ಸುಮ್ನೆ ಸಮಸ್ಯೆಗಳನ್ನು ಸೃಷ್ಟಿ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಾಪ್ ಸಿಂಹ ಅವರ ನಡವಳಿಕೆ ಬಿಜೆಪಿಗೆ ಹೊಡೆತ ಕೊಡಲಿದೆ ಅಂತ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರ ಮಾತಿನಲ್ಲಿ ಹಿಡಿತ ಇಲ್ಲ. ಕಿತ್ತೂರಾಣಿ ಚೆನ್ನಮ್ಮ, ಒನಕೆ ಓಬವ್ವರಂತಹ ಸ್ವತಂತ್ರ ಹೋರಾಟಗಾರರ ಬಗ್ಗೆ ಮಾತನಾಡಿದ್ದರು. ಪ್ರತಾಪ್ ಸಿಂಹನೇ ಗಲಭೆಗಳನ್ನು ಎಬ್ಬಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು, ಸಂಸದರ ಉದ್ದೇಶ ಸರಿಯಿಲ್ಲ ಅಂತ ಹೇಳಿದ್ರು.

ಇದನ್ನೂ ಓದಿ: ಪ್ರತಾಪ್ ಸಿಂಹಗೆ ಪೊಲಿಟಿಕಲ್ ಮೆಚ್ಯುರಿಟಿ ಇಲ್ಲ: ಸಿಎಂ ಸಿದ್ದರಾಮಯ್ಯ

ಗುಜರಾತ್‍ನಲ್ಲಿ ಕಾಂಗ್ರೆಸ್ ಗೆಲ್ಲುತ್ತೆ. ಮೋದಿ ಜಾಥಾನೂ ನೋಡಿದ್ದೀರಿ. ಇತ್ತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ನಮ್ಮ ಹಾರ್ದಿಕ್ ಪಟೇಲ್ ಜಾಥಾವನ್ನು ಕೂಡ ನೋಡಿದ್ದೀರಿ. ಪ್ಲಸ್ 4%ರಷ್ಟು ಅಥವಾ ಮೈನಸ್ 4%ರಷ್ಟು ಆದರೆ ಒಂದು ಸರಕಾರ ಬದಲಾಗುತ್ತೆ. ಯಾವೊಂದು ಮಾಧ್ಯಮ ಇದನ್ನ ಹೇಳುತ್ತಿಲ್ಲ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಪಟೇಲರು, ಉದ್ಯಮಿಗಳು ಎಲ್ಲರು ಒಂದು ಕಡೆ ಇದ್ದಾಗ ಅದು ಹೇಗೆ ಮೋದಿ ಗೆಲ್ಲುತ್ತಾರೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:  ಓಬವ್ವ, ಕಿತ್ತೂರು ರಾಣಿ ಬಗ್ಗೆ ಪ್ರಕಟವಾದ ಪೋಸ್ಟಿಗೂ ನನಗೂ ಸಂಬಂಧವಿಲ್ಲ: ಪ್ರತಾಪ್ ಸಿಂಹ

4 ವರ್ಷದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನನ್ನಂತೆ ಸಿದ್ಧರಾಮಯ್ಯ ಕೆಲಸ ಮಾಡಿದ್ದಾರೆಂದು ಮಾಜಿ ಪ್ರಧಾನಿ ದೇವೇಗೌಡರೇ ಹೊಗಳಿದ್ದಾರೆ. ಆದ್ರೆ ಕುಮಾರಸ್ವಾಮಿ ಇದನ್ನ ಸರಕಾರಕ್ಕೆ ದೇವೇಗೌಡರು ಟಾಂಗ್ ಕೊಟ್ಟಿದ್ದಾರೆ ಎಂದಿದ್ದಾರೆ. ದೇವೇಗೌಡರ ಹೇಳಿಕೆ ಸಿದ್ಧರಾಮಯ್ಯಗೆ ಟಾಂಗ್ ನೀಡಿದ್ದರೆ, ಅದು ಅವರಿಗೂ ಅನ್ವಯಿಸುತ್ತೆ ಎಂದು ಎಚ್‍ಡಿಕೆಗೆ ಪಾಟೀಲ್ ಟಾಂಗ್ ನೀಡಿದರು.

ಇದನ್ನೂ ಓದಿ: ಪ್ರತಾಪ್ ಸಿಂಹ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರಿಗೆ ಕಾಂಗ್ರೆಸ್ಸಿನಿಂದ ಹಣ ಹಂಚಿಕೆ

Share This Article
Leave a Comment

Leave a Reply

Your email address will not be published. Required fields are marked *