ನಮ್ಮದು ಮಹಿಳಾಪ್ರಿಯ ಸರ್ಕಾರ, ಮದ್ಯದಂಗಡಿ ಹೆಚ್ಚಳಕ್ಕೆ ನನ್ನದೂ ವಿರೋಧವಿದೆ: ಲಕ್ಷ್ಮಿ ಹೆಬ್ಬಾಳ್ಕರ್

Public TV
1 Min Read

ಬೆಂಗಳೂರು: ನಮ್ಮದು ಮಹಿಳಾಪ್ರಿಯ ಸರ್ಕಾರ. ಕಾಂಗ್ರೆಸ್ (Congress) ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿದ್ದಾರೆ.

ಮದ್ಯದಂಗಡಿಗಳಿಗೆ ಹೆಚ್ಚುವರಿ ಅನುಮತಿ ಕೊಡಲ್ಲ ಎಂಬ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರಿಗೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹೆಚ್ಚು ಅನುಮತಿ ಕೊಡುವುದಕ್ಕೆ ನಮ್ಮ ವಿರೋಧ ಇದೆ. ಮಹಿಳಾ ಸಬಲೀಕರಣಕ್ಕೆ ಇಷ್ಟೆಲ್ಲಾ ಒತ್ತು ಕೊಟ್ಟು ಇದರ ಮಧ್ಯೆ ಜನಸಂಖ್ಯೆ ಆಧಾರಿತವಾಗಿ ಮದ್ಯದಂಗಡಿ ಹೆಚ್ಚಳಕ್ಕೆ ಸರ್ಕಾರದ ಭಾಗವಾದರೂ ನಾನು ವಿರೋಧ ಇದ್ದೇನೆ ಎಂದರು.

ಮಹಿಳೆಯರು ಕೂಡ ಇದನ್ನ ಇಷ್ಟಪಡಲ್ಲ. ನಮ್ಮದು ಮಹಿಳಾಪ್ರಿಯ ಸರ್ಕಾರ. ಕಾಂಗ್ರೆಸ್ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತದೆ. ಇಂತಹ ನಿರ್ಧಾರಕ್ಕೆ ನಮ್ಮ ವಿರೋಧ ಇದೆ. ಸಿಎಂ ನಿರ್ಧಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಗೃಹಲಕ್ಷ್ಮಿ ಹಣವನ್ನು ನಿಮ್ಮ ಗಂಡಂದಿರಿಗೆ ಕೊಡಬೇಡಿ – ಮಹಿಳೆಯರಿಗೆ ಡಿಕೆಶಿ ಕರೆ

ರಾವಣ, ಕೀಚಕ ಅನ್ನೋದು ಬಿಜೆಪಿಯವರ ಸಂಸ್ಕೃತಿಯನ್ನ ತೋರಿಸುತ್ತೆ. ಬಿಜೆಪಿಯವರು ರಾಮ ಅಂತಾರೆ ಬಾಯಿ ತೆಗೆದರೆ ರಾಮನ ಬಗ್ಗೆ ಮಾತನಾಡ್ತಾರೆ ರಾವಣನ ಕಾಯಕ ಮಾಡುತ್ತಾರೆ ಎಂದು ಹೇಳಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್