ನಾವ್ ಹೇಳಿದಂಗೆ ಕೆಲ್ಸ ಮಾಡೋ ಹಾಗಿದ್ರೆ ಇಲ್ಲಿರಿ, ಇಲ್ಲ ನಡೀರಿ: ಮಹಿಳಾ ಅಧಿಕಾರಿ ಮೇಲೆ ಸಚಿವ ವೆಂಕಟೇಶ್ ದರ್ಪ

Public TV
1 Min Read

ಮೈಸೂರು: ನಾವು ಹೇಳಿದ ಹಾಗೆ ಕೆಲಸ ಮಾಡುವ ಹಾಗಿದ್ದರೆ ಇಲ್ಲಿರಿ.. ಇಲ್ಲಾ ಅಂದ್ರೆ ನಡೀರಿ ಎಂದು ಮಹಿಳಾ ಅಧಿಕಾರಿ ಮೇಲೆ ಸಚಿವ ಕೆ.ವೆಂಕಟೇಶ್ ದರ್ಪ ತೋರಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ.

ತಾನು ಸೂಚಿಸಿದ ವ್ಯಕ್ತಿಗೆ ಕೆಲಸ ಕೊಡಲಿಲ್ಲ ಎಂಬ ಕಾರಣಕ್ಕೆ ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆ ಪ್ರಿನ್ಸಿಪಾಲ್‌ಗೆ ಆವಾಜ್ ಹಾಕಿದ್ದಾರೆಂಬ ಆರೋಪ ಸಚಿವರ ಮೇಲೆ ಕೇಳಿಬಂದಿದೆ.

ಪಿರಿಯಾಪಟ್ಟಣ ತಾಲೂಕಿನ ಅಬ್ಬಳತಿ ಗ್ರಾಮದಲ್ಲಿರುವ ಶಾಲೆಯ ಪ್ರಿನ್ಸಿಪಾಲ್ ಮೇಲೆ ಸಚಿವರು ದರ್ಪ ತೋರಿದ್ದಾರೆ ಎನ್ನಲಾಗಿದ್ದು, ‘ಏನಮ್ಮ ಏನ್ ತಿಳ್ಕೊಂಡಿದಿಯ? ಮಹದೇವಪ್ಪ ಕಡೆಯವಳು ಅಂತ ಏನೇನೋ ಮಾತಾಡ್ತಿಯಂತೆ. ಮಹದೇವಪ್ಪನ ಇಲ್ಲಿಗೆ ಎಂಎಲ್‌ಎನಾ ಅಥವಾ ಮಂತ್ರಿನಾ ಎಂದು ಅವಾಜ್ ಹಾಕಿದ್ದಾರೆ.

ತಲೆಹರಟೆ ಎಲ್ಲ ಮಾಡಬೇಡಿ. ನಾವ್ ಹೇಳಿದಂಗೆ ಕೆಲಸ ಮಾಡೋ ಹಾಗಿದ್ರೆ ಇಲ್ಲಿರಿ.. ಇಲ್ಲ ನಡೀರಿ ಎಂದು ಪಶು ಸಂಗೋಪನೆ ಸಚಿವರು ಎಚ್ಚರಿಸಿದ್ದಾರೆ ಎಂದು ತಿಳಿದುಬಂದಿದೆ.

Share This Article