ಗಣೇಶೋತ್ಸವ ಆಚರಣೆ ನಡೆಸಿಯೇ ನಡೆಸುತ್ತೇವೆ: ಈಶ್ವರಪ್ಪ

Public TV
1 Min Read

– ಜನಾಶೀರ್ವಾದ ಯಾತ್ರೆಯಲ್ಲಿ ಜನ ಸೇರಿಸಿದ್ದನ್ನು ಒಪ್ಪುವುದಿಲ್ಲ

ಶಿವಮೊಗ್ಗ: ರಾಜ್ಯದ ಒಬ್ಬ ಜವಾಬ್ದಾರಿಯುತ ಸಚಿವನಾಗಿ ಜನಾಶೀರ್ವಾದ ಯಾತ್ರೆಯಲ್ಲಿ ಜನ ಸೇರಿಸಿದ್ದನ್ನ ಒಪ್ಪುವುದಿಲ್ಲ. ಅದೇ ರೀತಿ ಗಣೇಶೋತ್ಸವವನ್ನು ನಿಲ್ಲಿಸಬೇಕು ಎಂಬುದನ್ನು ಒಪ್ಪುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಈ ಬಗ್ಗೆ ಮಾತನಾಡಿದ ಅವರು, ಸರ್ಕಾರ ಜನರ ಆರೋಗ್ಯ ಮತ್ತು ಗಣೇಶೋತ್ಸವ ಎರಡು ಕಡೆಗೂ ಗಮನ ನೀಡಬೇಕು. ನಾವು ಹಿಂದುತ್ವದ ಮೇಲೆ ಅಧಿಕಾರಕ್ಕೆ ಬಂದಿದ್ದೇವೆ. ಹೀಗಾಗಿಯೇ ಗಣೇಶ ಉತ್ಸವ ಯಶಸ್ವಿಯಾಗಿ ನಡೆಯಬೇಕು ಎಂಬುದು ನಮ್ಮ ಆಶಯ ಎಂದರು. ಇದನ್ನೂ ಓದಿ: ಶಿರಸಿಯಲ್ಲಿ ಸಹಬಾಳ್ವೆ ಸಾರುವ ಕೈ ಚಕ್ಕುಲಿ ಕಂಬಳ

ಈ ಬಾರಿ ಯಾವುದೇ ಕಾರಣಕ್ಕು ಗಣೇಶೋತ್ಸವ ನಿಲ್ಲುವುದಿಲ್ಲ. ಗಣಪತಿ ಉತ್ಸವ ನಡೆಸಿಯೇ, ನಡೆಸುತ್ತೇವೆ. ಆದರೆ ಕೋವಿಡ್ ಕಾರಣದಿಂದಾಗಿ ನೀತಿ ನಿಯಮಗಳಡಿಯಲ್ಲಿ ಗಣೇಶೋತ್ಸವ ನಡೆಸುತ್ತೇವೆ. ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಇದಕ್ಕೆ ನೀತಿ ನಿಯಮ ಜಾರಿಗೆ ತರಲಾಗುತ್ತದೆ. ಈ ಬಾರಿ ಗಣೇಶ ಉತ್ಸವ ನಡೆಸಲು ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.  ಇದನ್ನೂ ಓದಿ: ದೆಹಲಿ ವಿಧಾನಸಭೆಯಿಂದ ಕೆಂಪುಕೋಟೆಗೆ ಸಂಪರ್ಕಿಸುವ ರಹಸ್ಯ ಸುರಂಗ ಮಾರ್ಗ ಪತ್ತೆ

Share This Article
Leave a Comment

Leave a Reply

Your email address will not be published. Required fields are marked *