ಸಿಎಂ ಬದಲಾವಣೆ ವಿಚಾರ| ಶಾಸಕರನ್ನು ಕೇಳಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯ: ಕೆ.ಎನ್.ರಾಜಣ್ಣ

Public TV
1 Min Read

ಬೆಂಗಳೂರು: ಸಿಎಂ ಬದಲಾವಣೆ ವಿಚಾರವಾಗಿ ಶಾಸಕರನ್ನು ಕೇಳಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯ. ಶಾಸಕರ ಅಭಿಪ್ರಾಯ ಏನೇ ಇದ್ದರೂ, 138 ಜನ ಒಂದೇ ಅಭಿಪ್ರಾಯ ಹೇಳಲ್ಲ ಅಂತ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು. ಏನ್ ಹೇಳ್ಬೇಕೊ ಹೇಳಿದ್ದೀನಿ ಎಂಬ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಹೇಳಿದ ಮೇಲೆ ಏನು ಮಾತಾಡೋದಕ್ಕೆ ಹೋಗೋದಿಲ್ಲ. ಪಕ್ಷ ನಾಯಕತ್ವದ ಬಗ್ಗೆ ಎಲ್ಲಾ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತೆ. ಒನ್ ಮ್ಯಾನ್ ಒನ್ ಪೋಸ್ಟ್ ವಿಚಾರವಾಗಿಯೂ ಯಾರಿಗೆ ಯಾವುದು ಅನ್ವಯ ಆಗುತ್ತೆ ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಅದನ್ನ ನಾವು ಒಪ್ಪಬೇಕಾಗುತ್ತೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತಾಡುವ ರಾಜಣ್ಣ ಅವರಿಂದ ಡ್ಯಾಮೇಜ್ ಆಗ್ತಿದೆ ಎಂಬ ಕಡೂರು ಶಾಸಕ ಆನಂದ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರವರ ಅಭಿಪ್ರಾಯ ಹೇಳಲು ಸರ್ವ ಸ್ವತಂತ್ರರು. ಅವರು ಹೇಳಿಕೊಂಡರೆ ನಮ್ಮ ಆಪೇಕ್ಷೆ ಇಲ್ಲ ಎಂದರು.

ಸಿಎಂ ಪತ್ನಿ ಹಾಗೂ ಸಚಿವ ಸುರೇಶ್‌ಗೆ ಇ.ಡಿ ನೋಟಿಸ್ ವಿಚಾರವಾಗಿ ಪ್ರತಿಕ್ರಿಯಿಸಿದ ರಾಜಣ್ಣ, ಅದು ರಾಜಕೀಯ ಪ್ರೇರಿತರಾಗಿ ಕೊಟ್ಟಿರುವ ನೋಟಿಸ್. ಅದರ ಸತ್ಯಾಸತ್ಯತೆ ವಿಚಾರ ಕೋರ್ಟ್ ಮುಂದೆ ಬಂದಿದೆ. ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನೋಡ್ರಿ, ಕಾನೂನು ಎಲ್ಲರಿಗೂ ಒಂದೆ. ಅವರಿಗೆ ಒಂದು, ಇವರಿಗೊಂದು ಅಂತ ಎರಡು ಕಾನೂನು ಇರಲ್ಲ. ಸಿಬಿಐಗೆ ಯಾರ ಕೇಂದ್ರದ ಹೋಮ್ ಮಿನಿಸ್ಟರ್ ಅಧೀನದಲ್ಲಿ‌ ಇರುತ್ತೆ. ಒಂದೊಂದು‌ ತನಿಖಾ ಸಂಸ್ಥೆ ಒಬ್ಬೊಬ್ಬರ ಅಧೀನದಲ್ಲಿರುತ್ತೆ ಎಂದು ತಿಳಿಸಿದರು.

Share This Article