ಸುದೀಪ್ ಬಗ್ಗೆ ಬೇಸರ ಹೊರಹಾಕಿದ ಸಚಿವ ಕೆ.ಎನ್.ರಾಜಣ್ಣ

Public TV
1 Min Read

ವಿಧಾನಸಭೆ (Assembly) ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನತಿಯಂತೆ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ ನಟ ಸುದೀಪ್ (Sudeep) ಬಗ್ಗೆ ಸಚಿವ ಹಾಗೂ ವಾಲ್ಮೀಕಿ (Valmiki) ಸಮುದಾಯದ ಮುಖಂಡ ಕೆ.ಎನ್ ರಾಜಣ್ಣ (KN Rajanna) ಬೇಸರ ಹೊರಹಾಕಿದ್ದಾರೆ. ಸಿನಿಮಾ ನಟರು ರಾಜಕಾರಣ ಮಾಡಿದ ಗೌರವ ಕಳೆದುಕೊಳ್ಳುತ್ತಾರೆ ಎಂದಿದ್ದಾರೆ.

ಸುದೀಪ್ ಅವರು ನಮ್ಮದೇ ಸಮುದಾಯದವರು. ನಮ್ಮ ಸಮುದಾಯದ ನಾಯಕರ ವಿರುದ್ಧವೇ ಅವರು ಪ್ರಚಾರ ಮಾಡಿದರು. ಅವರೊಬ್ಬ ನಟನಾಗಿ, ನಟಿಸಬೇಕು. ಅದನ್ನು ಬಿಟ್ಟು ರಾಜಕೀಯ ಮಾಡುವುದು ಸರಿಯಲ್ಲ. ಅವರ ನಡೆ ನನಗೆ ಬೇಸರ ತರಿಸಿದೆ. ತಮ್ಮ ಕ್ಷೇತ್ರ ಬಿಟ್ಟು ಬಂದರೆ ಗೌರವ ಕಡಿಮೆ ಆಗುತ್ತದೆ ಎಂದು ರಾಜಣ್ಣ ಹೇಳಿದ್ದಾರೆ. ಇದನ್ನೂ ಓದಿ:ಅಪ್ಪ- ಅಮ್ಮನ ಕ್ಯೂಟ್ ಲವ್‌ ಸ್ಟೋರಿ ಹಂಚಿಕೊಂಡು ಮದುವೆ ವಾರ್ಷಿಕೋತ್ಸವಕ್ಕೆ ರಾಧಿಕಾ ವಿಶ್‌ ‌

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ (Election) ಸುದೀಪ್ ಬಿಜೆಪಿಯ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ವಾಲ್ಮೀಕಿ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡಿದ್ದರು. ಇದನ್ನು ರಾಜಣ್ಣ ಪ್ರಶ್ನಿಸಿದ್ದಾರೆ. ಈ ರೀತಿ ಮಾಡುವುದು ಸರಿಯಾದದ್ದು ಅಲ್ಲ ಎಂದು ಅವರು ಮಾತನಾಡಿದ್ದಾರೆ.

 

ಸದ್ಯ ಸುದೀಪ್ ಹೊಸ ಸಿನಿಮಾಗಳ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಒಂದು ಸಿನಿಮಾದ ಟೀಸರ್ ಕೂಡ ರೆಡಿಯಾಗಿದೆ. ಸದ್ಯದಲ್ಲೇ ಆ ಟೀಸರ್ ರಿಲೀಸ್ ಮಾಡುವುದಾಗಿಯೂ ಚಿತ್ರತಂಡ ಹೇಳಿಕೊಂಡಿದೆ. ಅವರ ಹೊಸ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಕೂಡ ಮೂಡಿದ್ದು, ಇನ್ನಷ್ಟೇ ತಂಡದ ವಿವರಗಳು ಲಭ್ಯವಾಗಲಿವೆ.

Share This Article