ಉಡುಪಿ: ಈಗಲ್ಟನ್ ರೆಸಾರ್ಟಿಲ್ಲಿ ಬಳ್ಳಾರಿ ಶಾಸಕರು ಹೊಡೆದಾಟದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಸಚಿವೆ ಜಯಮಾಲಾ ಶಂಕೆ ವ್ಯಕ್ತಪಡಿಸಿದ್ದಾರೆ.
ಶಾಸಕರು ಗಲಾಟೆ ಮಾಡಿಕೊಂಡರೆ ಕಾಂಗ್ರೆಸ್ ಪಕ್ಷ ಏನು ಮಾಡಲು ಸಾಧ್ಯ? ಶಾಸಕ ಆನಂದ್ ಸಿಂಗ್ ಅವರನ್ನು ನಾನು ನೋಡಲು ಹೋಗಿಲ್ಲ. ಹೀ ಇಸ್ ವೆಲ್- ಈಗ ಚೆನ್ನಾಗಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಇದು ಶಾಸಕರ ವೈಯಕ್ತಿಕ ಜಗಳ. ಬಳ್ಳಾರಿ ಶಾಸಕರು ರೆಸಾರ್ಟಿನಲ್ಲಿ ಹೊಡದಾಡಿಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಯಾರೇ ಹೊಡೆದಾಡಿದರೂ ನಾವು ಸಪೋರ್ಟ್ ಮಾಡಲ್ಲ ಎಂದರು.
ಶಾಸಕರು ಹೊಡೆದುಕೊಂಡರೆ ಕಾಂಗ್ರೆಸ್ ಪಾರ್ಟಿ ಇಮೇಜ್‍ಗೆ ಏನೂ ಧಕ್ಕೆಯಾಗುವುದಿಲ್ಲ. ಯಾರೂ ಟೆನ್ಶನ್ ಮಾಡಿಕೊಳ್ಳಬೇಕಾಗಿಲ್ಲ. ಕಾಂಗ್ರೆಸ್ ಪಕ್ಷ ಏನು ಮಾಡಿದೆ? ನಾವೇನು ಹೊಡೆದಾಡಿಕೊಳ್ಳಿ ಅಂತ ಹೇಳಿದ್ವಾ ಅಂತ ಪ್ರಶ್ನಿಸಿ ಸ್ಪಲ್ಪ ಗರಂ ಆದರು. ಯಾಕೆ ಬೇರೆ ಪಕ್ಷದವರೇನೂ ಹೊಡೆದಾಡಿಕೊಳ್ಳಲ್ವಾ. ಅವರಿಗ್ಯಾರಿಗೂ ಬಾಯಿ ಇಲ್ವಾ, ಕೈ ಇಲ್ವಾ ಅಂತ ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ಕೊಟ್ಟರು.
ಬಿಜೆಪಿಯವರೇ ರೆಸಾರ್ಟ್ ಗಲಾಟೆಯನ್ನು ಯಾಕೆ ಮಾಡಿಸಿರಬಾರದು. ನಮ್ಮ ಕಣ್ಣಿಗೆ ಕಾಣೋದು ಮಾತ್ರ ಸತ್ಯ ಅನ್ನೋಕಾಗಲ್ಲ ಅಂತ ಸಚಿವೆ ಜಯಮಾಲಾ ಹೊಸ ಆರೋಪ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv