ಹಿಂದೂಪರ ಕಾರ್ಯಕರ್ತರ ವಿರುದ್ಧ ಕೇಸ್‌ ಎಂಬ ಆರೋಪಕ್ಕೂ, ಚೈತ್ರಾ ಪ್ರಕರಣಕ್ಕೂ ಸಂಬಂಧ ಇಲ್ಲ: ಜಿ.ಪರಮೇಶ್ವರ್

By
1 Min Read

ಬೆಂಗಳೂರು: ಚೈತ್ರಾ ಕುಂದಾಪುರ (Chaithra Kundapura) ಪ್ರಕರಣಕ್ಕೂ, ಹಿಂದೂಪರ ಸಂಘಟನೆ ಸದಸ್ಯರ ವಿರುದ್ಧ ಕೇಸು ಎನ್ನುವ ಆರೋಪಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (G.Parameshwar) ತಿಳಿಸಿದ್ದಾರೆ.

ಸದಾಶಿವನಗರದ ಸರ್ಕಾರಿ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ (BJP) ಟಿಕೆಟ್ ಕೊಡಿಸೋದಾಗಿ ಹಣ ಪಡೆದಿದ್ದಾರೆ ಎಂಬುದು ನನಗೆ ಬಂದ ಮಾಹಿತಿ. 3.5 ಕೋಟಿ ಹಣ ಪಡೆದಿರುವ ಕಂಪ್ಲೆಂಟ್ ಆಗಿದೆ. ಆ ಪ್ರಕರಣದಲ್ಲಿ ಕಂಪ್ಲೆಂಟ್ ಪಡೆದು ವಿಚಾರಣೆ ನಡೆಯುತ್ತಿದೆ. ಮಿಕ್ಕಿದ ವಿಚಾರ ತನಿಖೆ ಬಳಿಕ ಗೊತ್ತಾಗಲಿದೆ. ಅವರ ಹೇಳಿಕೆ ತೆಗೆದುಕೊಂಡು ಬಂಧನ ಆಗಿದೆ. ಸ್ವಾಮೀಜಿ ಇದ್ದಾರೆ ಎಂದರೆ ತನಿಖೆ ಆಗುತ್ತದೆ. ಸ್ವಾಮೀಜಿಯವರ ತಪ್ಪಿದ್ದರೆ, ಅವರ ಬಂಧನ ಕೂಡ ಆಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚೈತ್ರಾ ಪ್ರಕರಣಕ್ಕೂ ಇಂದಿರಾ ಕ್ಯಾಂಟೀನ್ ಬಿಲ್‌ಗೂ ಸಂಬಂಧ ಇಲ್ಲ: ಗೋವಿಂದ ಬಾಬು

ಬಿಜೆಪಿಯವರು ಆರೋಪ ಮಾಡ್ತಾರೆ. ಪೊಲೀಸರು ಸುಮೋಟೊ ಕೇಸು ಹಾಕಿಕೊಂಡಿಲ್ಲ. ದೂರಿನ ಆಧಾರದ ಮೇಲೆ ಬಂಧನ ಆಗಿದೆ. ಯಾರಿಂದ ತಪ್ಪು ಆಗಿದೆಯೋ ಅವರ ವಿರುದ್ಧ ಕ್ರಮ ಆಗಲಿದೆ. ಹಿಂದೂ ಪರವಾದ ಭಾಷಣ ಮಾಡಿದ್ದಾರೆ. ಅದನ್ನ ಇದಕ್ಕೆ ಮಿಕ್ಸಪ್ ಮಾಡುವುದು ಬೇಡ ಎಂದಿದ್ದಾರೆ.

ಸಚಿವ ಸುಧಾಕರ್ ಅವರಿಂದ ಅನ್ಯಾಯಕ್ಕೊಳಗಾದವರ ಮನೆಗೆ ಬಿಜೆಪಿ ನಿಯೋಗದ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊದಲೇ ಹೋಗಬೇಕಿತ್ತು. ಈಗ ಯಾಕೆ ಹೋಗುತ್ತಿದ್ದಾರೆ? ಹತ್ತು ವರ್ಷದ ಹಳೆಯ ಪ್ರಕರಣ ಎಂದು ಸುಧಾಕರ್ ಹೇಳಿದ್ದಾರೆ. ಅದನ್ನ ಈಗ ಮತ್ತೆ ಕೆದಕುವ ಕೆಲಸ ಬಿಜೆಪಿ ಮಾಡ್ತಿದೆ. ಅಟ್ರಾಸಿಟಿ ಅಡಿ ಯಾಕೆ ಬಂಧನ ಇಲ್ಲ ಎಂದು ಬಿಜೆಪಿಯವರು ಆರೋಪ ಮಾಡ್ತಿದಾರೆ. ಎಲ್ಲದಕ್ಕೂ ಒಂದು ಪದ್ಧತಿ ಇದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಎಷ್ಟು ನ್ಯಾಯ ಒದಗಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಎಲ್ಲಾ ದೊಡ್ಡೋರ ಹೆಸರೆಲ್ಲ ಹೊರಗಡೆ ಬರುತ್ತೆ: ಚೈತ್ರಾ ಕುಂದಾಪುರ

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್