ತುಮಕೂರನ್ನೂ ಗ್ರೇಟರ್ ಬೆಂಗಳೂರಿಗೆ ಸೇರಿಸಿ – ಪರಮೇಶ್ವರ್

Public TV
1 Min Read

– ತುಮಕೂರಿಗೆ ಮೆಟ್ರೋ ಅಗತ್ಯವಿದೆ ಎಂದ ಗೃಹಸಚಿವ

ಬೆಂಗಳೂರು: ತುಮಕೂರನ್ನೂ (Tumkur) ಗ್ರೇಟರ್ ಬೆಂಗಳೂರಿಗೆ ಸೇರಿಸಬೇಕು ಅಂತ ಗೃಹ ಸಚಿವ ಪರಮೇಶ್ವರ್ (G. Parameshwar) ಸರ್ಕಾರವನ್ನ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ತುಮಕೂರನ್ನ ಗ್ರೇಟರ್ ಬೆಂಗಳೂರಿಗೆ (Greater Bengaluru) ಸೇರಿಸಬೇಕು. ರಾಮನಗರವನ್ನ ಬೆಂಗಳೂರು ದಕ್ಷಿಣ ಅಂತ ಮಾಡಿ ಗ್ರೇಟರ್ ಬೆಂಗಳೂರಿಗೆ ಸೇರಿಸಿದ್ದಾರೆ. ತುಮಕೂರು ಬೆಂಗಳೂರಿಗೆ 70 ಕಿಮೀ ದೂರ ಇರೋದು. ನಮ್ಮನ್ನು ಬೆಂಗಳೂರಿಗೆ ಸೇರಿಸಿಕೊಂಡ್ರೆ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದಾಗುತ್ತದೆ. ಹೀಗಾಗಿ ಗ್ರೇಟರ್ ಬೆಂಗಳೂರಿಗೆ ನಮ್ಮನ್ನ ಸೇರಿಸಬೇಕು ಅಂತ ನಾವು ಪ್ರಸ್ತಾವನೆ ಕೊಡ್ತೀವಿ ಅಂತ ತಿಳಿಸಿದರು. ಇದನ್ನೂ ಓದಿ: ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಡಿಸಿ ನೋಟಿಸ್ – ತನಿಖೆಗೆ ಹಾಜರಾಗುವಂತೆ 45 ಮಂದಿಗೆ ಸೂಚನೆ

ಇದೇ ವೇಳೆ ಕೇಂದ್ರ ಸಚಿವ ಸೋಮಣ್ಣರನ್ನ ಭೇಟಿಯಾಗಿದ್ದ ಬಗ್ಗೆ ಮಾಹಿತಿ ನೀಡಿದ್ರು. ತುಮಕೂರು ನ್ಯಾಷನಲ್ ಹೈವೆಯಲ್ಲಿ ತುಮಕೂರು ಪ್ರಾರಂಭದಲ್ಲಿ ಆರ್ಚ್ ಹಾಕಬೇಕು ಅಂತ ಸ್ಮಾರ್ಟ್ ಸಿಟಿಯಲ್ಲಿ ಹಣ ಹೊಂದಿಸಿದ್ದೇವೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಆಗಬೇಕು. ಇದಕ್ಕಾಗಿ ಸೋಮಣ್ಣ (V Sonanna) ಅವರನ್ನ ಭೇಟಿಯಾಗಿ ಗಡ್ಕರಿ ಅವರಿಗೆ ಮಾತಾಡಿ ಅನುಮತಿ ಕೊಡಿಸೋಕೆ ಕೇಳೋಕೆ ಹೋಗಿದ್ದೆ. ಕುಡಿಯೋ ನೀರಿನ ಅನೇಕ ಯೋಜನೆ ಕೇಂದ್ರ ಸರ್ಕಾರಕ್ಕೆ ಹೋಗಿದೆ. ಅದನ್ನು ಕೊಡಿಸಬೇಕು ಅಂತ ಮನವಿ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇಯಲ್ಲಿ ಕಾರುಗಳ ನಡುವೆ ಅಪಘಾತ – ಇಬ್ಬರು ಸಾವು, ನಾಲ್ವರು ಗಂಭೀರ

ತುಮಕೂರಿಗೆ ಮೆಟ್ರೋ ಅಗತ್ಯವಿದೆ
ತುಮಕೂರಿಗೆ ಮೆಟ್ರೋ ಯೋಜನೆ ರಾಜ್ಯದ ತೀರ್ಮಾನ ಏನಾಗುತ್ತೆ ನೋಡಿಕೊಂಡು ಕೇಂದ್ರದವರ ಬಳಿ ಮಾತಾಡ್ತೀವಿ. ಮೆಟ್ರೋ ಅಗತ್ಯವಿದೆ ಅಂತ ಸೋಮಣ್ಣ ಹೇಳಿದ್ದಾರೆ. ಜೊತೆಗೆ ಸಬ್‌ ಅರ್ಬನ್‌ ಕೂಡ ಆಗಬೇಕು ಅಂತ ಇದೆ. ಎರಡೂ ಆಗಲಿ, ತುಮಕೂರು ಅತಿವೇಗವಾಗಿ ಬೆಳೆಯುತ್ತಿದೆ. ಇಂಡಸ್ಟ್ರಿ ಹಬ್ ಬೆಳೆಯುತ್ತಿದೆ. ಬೆಂಗಳೂರು ವಿಸ್ತರಣೆ ಮಾಡಿದಂತೆ ತುಮಕೂರು ವಿಸ್ತರಣೆ ಮಾಡಬೇಕು ಅಂತ ಅನೇಕರು ಹೇಳ್ತಿದ್ದಾರೆ. ಅದರ ಬಗ್ಗೆ ಚರ್ಚೆ ಆಗ್ತಿದೆ ಎಂದರು. ಇದನ್ನೂ ಓದಿ: ವಿಜಯಪುರ | ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಗೃಹಿಣಿ ಸಾವು

Share This Article