ಸ್ವಾಮೀಜಿಗಳು ಹೇಳಿಕೆ‌ ನೀಡುವುದು ಅವರ ವೈಯಕ್ತಿಕ ಅಭಿಪ್ರಾಯ – ರಂಭಾಪುರಿ ಶ್ರೀ ಹೇಳಿಕೆಗೆ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯೆ

Public TV
1 Min Read

ನವದೆಹಲಿ: ಸ್ವಾಮೀಜಿಗಳು ಹೇಳಿಕೆ‌ ನೀಡುವುದು ಅವರ ವೈಯಕ್ತಿಕ ಅಭಿಪ್ರಾಯ, ಅರ್ಶಿವಾದ ಮಾಡುವುದಾಗಲಿ ಅಥವಾ ಅಭಿಪ್ರಾಯ ತಿಳಿಸುವುದು ಅದು ಅವರ ವೈಯಕ್ತಿಕವಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ (Chaluvarayaswamy) ಹೇಳಿದರು.

ಡಿಕೆ ಶಿವಕುಮಾರ್ (D.K.Shivakumar) ಮುಖ್ಯಮಂತ್ರಿಯಾಗಲಿ ಎಂದು ರಂಭಾಪುರಿ ಶ್ರೀ (Rambhapuri Swamiji) ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಆ ರೀತಿ ಪ್ರಶ್ನೆಯೇ ಇಲ್ಲ‌. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಬಹಳ ಅನ್ಯೋನ್ಯವಾಗಿದ್ದಾರೆ. ಬಹಳ ಕಷ್ಟ ಪಟ್ಟು ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ನಾನು ಕೂಡ ನೋಡಿದ್ದೇನೆ. ಅವರು ಪ್ರತಿ ಹಂತದಲ್ಲೂ ಮತ್ತೆ ಸರ್ಕಾರ ತರಬೇಕು. ಜನಪರ ಕೆಲಸ ಮಾಡಬೇಕು ಎಂದು ಕೆಲಸ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಬಿಹಾರ ಮತದಾರರ ಪಟ್ಟಿ ನವೀಕರಣ: ಜುಲೈ 10 ರಂದು ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಏನೇ ತೀರ್ಮಾನ ಆದರೂ ಹೈಕಮಾಂಡ್ ಜೊತೆಗೆ ಮಾತಾಡಿ ತೀರ್ಮಾನ ಮಾಡೋ ಥರ ಇಟ್ಟುಕೊಂಡಿದ್ದಾರೆ. ಸ್ವಾಮಿಜಿ ಅವರ ಅಭಿಪ್ರಾಯ ಅದು ಅವರ ವೈಯಕ್ತಿಕ. ಬಹಳ ಹಿಂದಿನಿಂದಲೂ ಬಹಳಷ್ಟು ಜನರು ಅಭಿಪ್ರಾಯ ಹೇಳಿದ್ದಾರೆ. ನೀವು ಯಾಕೆ ಹೇಳಿದ್ದೀರಿ ಅಂತಾ ನಾವು ಕೇಳಲು ಆಗುತ್ತಾ? ಡಿಕೆ ಶಿವಕುಮಾರ್ ಕೇಳಲು ಆಗುತ್ತಾ ಅಥವಾ ಸಿದ್ದರಾಮಯ್ಯನವರನ್ನು ಕೇಳಲು ಆಗುತ್ತಾ? ಸ್ವಾಮೀಜಿಗಳು ನಮಗೆ ಗುರುಗಳ ಸ್ಥಾನದಲ್ಲಿ ಇದ್ದಾರೆ. ಅವರ ಅಭಿಪ್ರಾಯ ಅಷ್ಟೇ ಇದು. ಹೆಚ್ಚು ಚರ್ಚೆ ಅಗತ್ಯ ಇಲ್ಲ ಎಂದು ತಿಳಿಸಿದರು.

ಗ್ಯಾರಂಟಿ ಬೇಕಾ ರಸ್ತೆ ಬೇಕಾ ಎಂಬ ಬಸವರಾಜ್ ರಾಯರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿ, ಗ್ಯಾರಂಟಿನೂ ಆಗುತ್ತೆ ರಸ್ತೆನೂ ಆಗುತ್ತೆ. ಅದ್ಯಾಕೆ ಅವರು ಮಾತಾಡಿದ್ದಾರೋ ನನಗೆ ಗೊತ್ತಿಲ್ಲ. ಮೊನ್ನೆ 50 ಕೋಟಿ ಕೊಟ್ಟಿದ್ದಾರೆ. ಅಲ್ಲದೇ, ಇಲಾಖೆಗಳಲ್ಲೂ ಅನುದಾನ ಕೊಟ್ಟಿದ್ದಾರೆ. ಆರ್‌ಡಿಪಿಆರ್ PWD ಇಲಾಖೆಯಲ್ಲೂ ಕೊಟ್ಟಿದ್ದಾರೆ. ರಾಯರೆಡ್ಡಿ ಹಿರಿಯ ಶಾಸಕರು. ಅವರು ಯಾಕೆ ಹೀಗೆ ನನಗೆ ಗೊತ್ತಿಲ್ಲ. ಹೈಕಮಾಂಡ್ ಸೂಚನೆ ಮೇರೆಗೆ ಸುರ್ಜೇವಾಲ ಸಭೆ ನಡೆಸುತ್ತಿದ್ದಾರೆ. ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಖಲಿಸ್ತಾನಿ ಭಯೋತ್ಪಾದಕ ಹ್ಯಾಪಿ ಪಾಸಿಯಾ ಭಾರತಕ್ಕೆ ಹಸ್ತಾಂತರ ಪ್ರಕ್ರಿಯೆ ಶುರು

Share This Article