ಹಿಜಬ್ ವಿವಾದ- ಹೈಕೋರ್ಟ್ ತೀರ್ಪಿನ ನಂತರ ಕ್ರಮ: ಬಿಸಿ ನಾಗೇಶ್

Public TV
1 Min Read

ಬೆಂಗಳೂರು/ ಕಾರವಾರ: ಹಿಜಬ್ ವಿವಾದದ ಪ್ರಕರಣವು ಹೈಕೋಟ್‍ನಲ್ಲಿದೆ. ತೀರ್ಪು ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಇಲಾಖೆ ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದೆ. ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಸಮವಸ್ತ್ರ ಹಾಕಬೇಕು ಎಂದ ಅವರು ರಾಜಕೀಯ ಶಕ್ತಿಗಳು ಹಿಜಾಬ್ ಪ್ರಕರಣದ ಹಿಂದೆ ಇದ್ದಾರೆ. ಗೊಂದಲ ಸೃಷ್ಟಿ ಮಾಡಲು ಹೀಗೆ ಕೆಲವರು ಮಾಡುತ್ತಿದ್ದಾರೆ. ಸಮವಸ್ತ್ರ ಕುರಿತು ಕಮಿಟಿ ರಚನೆಗೆ ಸರ್ಕಾರ ನಿರ್ಧಾರ ಮಾಡಿದೆ ಎಂದು ಹೇಳಿದರು.

ಶಿಕ್ಷಣ ಇಲಾಖೆ ತೀರ್ಮಾನವೇ ಅಂತಿಮ: ಕಾರವಾರದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಿಜಬ್ ವಿವಾದದ ಕುರಿತು ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಅವರದ್ದೇ ಆದ ನಿಯಮ ಇದೆ. ಶಿಕ್ಷಣ ಇಲಾಖೆ ಕಾರ್ಯವ್ಯಾಪ್ತಿಯಲ್ಲಿ ಚಟುವಟಿಕೆಗಳು ನಡೆಯುತ್ತವೆ. ಈ ವಿವಾದದಲ್ಲಿ ಶಿಕ್ಷಣ ಇಲಾಖೆ ತೀರ್ಮಾನವೇ ಅಂತಿಮ. ಯಾವ ಗೊಂದಲಕ್ಕೂ ಅವಕಾಶವಿಲ್ಲ. ಶಿಕ್ಷಣ ಇಲಾಖೆಯ ನಿಯಮವೇ ಅಂತಿಮವಾಗಿರಲಿದೆ ಎಂದರು.

ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು, ಕೆಲವು ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಲು ಮುಖ್ಯಮಂತ್ರಿ ಅವರು ದೆಹಲಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಹಿರಿಯ ಶಾಸಕರು ತಮ್ಮ ಭಾವನೆಯನ್ನು ಕೇಂದ್ರ ನಾಯಕರ ಮುಂದೆ ಹೇಳಿಕೊಂಡಿದ್ದಾರೆ. ಏನು ಮಾಡಬೇಕು ಎಂಬುದನ್ನು ಮುಖ್ಯಮಂತ್ರಿ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ನಿಮಗೆ ಪ್ರವೇಶವಿಲ್ಲ – ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಗೇಟ್‍ನಲ್ಲೇ ತಡೆದ ಪ್ರಿನ್ಸಿಪಾಲ್

ಪಕ್ಷದಲ್ಲಿ ಭಿನ್ನಾಬಿಪ್ರಾಯಗಳು ಶಮನ ಆಗುತ್ತದೆ. ಎಲ್ಲರೂ ಒಟ್ಟಾಗಿ ಇದ್ದೇವೆ. ಹಿರಿಯ ಸಚಿವರನ್ನು ಸಂಪುಟದಿಂದ ತೆಗೆಯುವುದಿರಲಿ, ಪಕ್ಷದ ಸಂಘಟನೆಗೆ ಬಳಸಿಕೊಳ್ಳುವುದಿರಲಿ ವರಿಷ್ಠರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದರು. ಇದನ್ನೂ ಓದಿ: ಕಾಲೇಜುಗಳಿಗೆ ಯಾರೂ ಹಿಜಬ್, ಕೇಸರಿ ಶಾಲು ಧರಿಸಿ ಬರುವಂತಿಲ್ಲ: ಆರಗ ಜ್ಞಾನೇಂದ್ರ

Share This Article
Leave a Comment

Leave a Reply

Your email address will not be published. Required fields are marked *