`ದಿತ್ವಾʼ ಅಬ್ಬರಕ್ಕೆ ಕನಿಷ್ಠ ಉಷ್ಣಾಂಶ ದಾಖಲು – ಇನ್ನೂ ಮೂರು ದಿನ ಇರಲಿದೆ ಮೈ ಕೊರೆವ ಚಳಿ

1 Min Read

– ಮಂಜಿನನಗರಿಯಾಗಿ ಗಡಿಜಿಲ್ಲೆ ಬೀದರ್‌, 10ರಿಂದ 12 ಡಿಗ್ರಿ ತಾಪಮಾನ

ಬೆಂಗಳೂರು: `ದಿತ್ವಾ’ ಚಂಡಮಾರುತದ (Ditwah Effect) ಅಬ್ಬರ ಜೋರಾಗಿದ್ದು, ತಾಪಮಾನದಲ್ಲಿ ಕುಸಿತ ಕಂಡಿದೆ. ಇನ್ನೂ ಮೂರು ದಿನ ಮೈಕೊರೆಯುವ ಚಳಿ ಇರಲಿದ್ದು, ಶೀತ ಗಾಳಿ, ಚಳಿಗೆ ಸಿಲಿಕಾನ್ ಸಿಟಿ ಜನರು ನಡುಗುವಂತಾಗಿದೆ.

ಬೆಂಗಳೂರಲ್ಲಿ (Bengaluru) ಕಳೆದ ಒಂದು ವಾರದಿಂದ ಚಳಿ, ಶೀತಗಾಳಿ ಜೋರಾಗಿದೆ. ಮನೆಯ ಹೊಸ್ತಿಲು ಸಹ ಗಡಗಡ ನಡುಗುವಷ್ಟು ಚಳಿ ಆವರಿಸಿದೆ. ಭಾನುವಾರ (ನ.30) ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಉಷ್ಣಾಂಶ ಗಣನೀಯವಾಗಿ ಇಳಿಕೆಯಾಗಿದೆ. ಬೆಂಗಳೂರಲ್ಲಿ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಂಟಿಗ್ರೇಡ್ ದಾಖಲಾಗಿದೆ. ಇಂದು (ಡಿ.1) ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಸಾಧಾರಣದಿಂದ ಹಗುರ ಮಳೆಯಾಗೋ ಸಾಧ್ಯತೆಯಿದೆ. ಮುಂದಿನ ಮೂರು ದಿನಗಳ ಕಾಲ ಈ ಚಳಿ ಅಬ್ಬರ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆಯ ತಜ್ಞರು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಭಾರತೀಯರ ಪ್ರತಿಭೆಯಿಂದ ಅಮೆರಿಕ ಬೆಳವಣಿಗೆ ಸಾಧಿಸಿದೆ: ಮಸ್ಕ್‌

ಇನ್ನೂ ಈ ವಿಪರೀತ ಚಳಿಯಿಂದಾಗಿ ಮಕ್ಕಳು ಹಾಗೂ ವಯೋವೃದ್ಧರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಆಸ್ಪತ್ರೆಗಳಿಗೆ ನೆಗಡಿ, ತಲೆನೋವು, ಸಣ್ಣಪುಟ್ಟ ಜ್ವರದಿಂದಾಗಿ ತೆರಳುತ್ತಿರುವವ ಸಂಖ್ಯೆ ಹೆಚ್ಚುತ್ತಿದೆ. ನಾಲ್ಕು ವರ್ಷದೊಳಗಿನ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡಿರುವ ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆತರುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಯ ಒಪಿಡಿ ವಿಭಾಗ ಪುಲ್ ರಶ್ ಆಗುತ್ತಿವೆ. ಈ ಚಳಿಯ ರಕ್ಷಣೆಗಾಗಿ ಸ್ವೇಟರ್, ಮಂಕಿಕ್ಯಾಪ್ ಮೊದಲಾದವುಗಳಿಗೆ ಜನ ಮೊರೆ ಹೋಗುತ್ತಿದ್ದು, ಬೆಂಗಳೂರು ಚಳಿ ಊಟಿಯಂತೆ ಭಾಸವಾಗಿ, ಚಳಿ ಮೈ ಕೊರೆಯುತ್ತಿದೆ.

ರಾಜಧಾನಿಯಲ್ಲಿ ಮಾತ್ರವಲ್ಲದೇ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯೂ ಕನಿಷ್ಠ ತಾಪಮಾನ ದಾಖಲಾಗುತ್ತಿದೆ. ಗಡಿಜಿಲ್ಲೆ ಬೀದರ್ ಮಂಜಿನನಗರಿಯಾಗಿ ಬದಲಾಗುತ್ತಿದೆ. 10 ರಿಂದ 12 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದ್ದು, ಜಿಲ್ಲೆಯಲ್ಲಿ ದಟ್ಟವಾದ ಮಂಜು ಆವರಿಸಿದೆ.ಇದನ್ನೂ ಓದಿ: ಡಿ.2ಕ್ಕೆ ವಿಶ್ವ ಗುಲಾಮಗಿರಿ ನಿರ್ಮೂಲನಾ ದಿನ – ಇದು ಹುಟ್ಟಿಕೊಂಡಿದ್ದು ಹೇಗೆ?

Share This Article