ಕಾಸಿನ ಸರದಂತೆ ಕಾಣುವ ಟ್ರೆಂಡಿ ಕಾಯಿನ್ ನೆಕ್ಲೇಸ್

Public TV
1 Min Read

ಫ್ಯಾಷನ್ ಜ್ಯುವೆಲರಿ ಲೋಕದಲ್ಲಿ ಇಂದು ಮಿನಿ ಕಾಯಿನ್ಸ್ ನೆಕ್ಲೇಸ್‌ಗಳು (Mini Coin Necklace) ಟ್ರೆಂಡಿಯಾಗಿವೆ. ಸಣ್ಣ ಕಾಯಿನ್‌ನಂತಿರುವ ಮಿನಿ ನಾಣ್ಯದ ರೂಪದಂತಿರುವ ಕಾಯಿನ್ ನೆಕ್‌ಚೈನ್ ಹಾಗೂ ಟೈನಿ ಕಾಯಿನ್ ನೆಕ್ಲೇಸ್‌ಗಳು ಇದೀಗ ಹುಡುಗಿಯರನ್ನು ಆಕರ್ಷಿಸಿವೆ. ಬಂಗಾರದ ಹಾಗೂ ಬಂಗಾರೇತರ ಡಿಸೈನ್‌ಗಳಲ್ಲೂ ಬಿಡುಗಡೆಗೊಂಡಿದ್ದು, ಫ್ಯಾಷನ್ ಜ್ಯುವೆಲ್ಲರಿ ಪ್ರಿಯ ಹುಡುಗಿಯರ ಕತ್ತನ್ನು ಸಿಂಗರಿಸಿವೆ.

ಕೆಲವರು ಕಾಯಿನ್ ನೆಕ್ಲೇಸ್ ಎಂದಾಕ್ಷಣ ಕಾಸಿನ ಸರ ಎಂದುಕೊಳ್ಳುತ್ತಾರೆ. ಇದು ಅವಲ್ಲ. ನೋಡಲು ನಾಣ್ಯದಂತೆಯೇ ಕಾಣಿಸುವ ಮಿನಿ ಕಾಯಿನ್‌ಗಳನ್ನು ಹೊಂದಿದ ನೆಕ್‌ಚೈನ್ ಹಾಗೂ ನೆಕ್ಲೇಸ್‌ಗಳಿವು. ಆರ್ಟಿಫಿಶಿಯಲ್ ಡಿಸೈನ್‌ನಿಂದಿಡಿದು ಬಂಗಾರದಲ್ಲೂ ಸದ್ಯ ಟ್ರೆಂಡ್‌ನಲ್ಲಿವೆ. ಸಿಂಪಲ್ ಡಿಸೈನ್‌ನಿಂದ ಎಲ್ಲರನ್ನೂ ಸೆಳೆಯುತ್ತಿವೆ.

ಅತೀ ಸಣ್ಣದಾದ ನಾಣ್ಯಗಳು ಹಾಗೂ ಅದರಂತೆಯೇ ಕಾಣುವ ಡಿಸೈನ್‌ನ ಕಾಯಿನ್‌ಗಳು, ಚೈನ್‌ನೊಂದಿಗೆ ಸರಪಳಿಗಳಂತೆ ಜೋಡಿಸಲ್ಪಟ್ಟಿರುತ್ತವೆ. ಇವನ್ನು ಹೊಂದಿದ ಡಿಸೈನ್‌ಗೆ ಕಾಯಿನ್ಸ್ ನೆಕ್ಲೇಸ್ ಎನ್ನಲಾಗುತ್ತದೆ. ಇವನ್ನು ಟೈನಿ ಕಾಯಿನ್ಸ್ ನೆಕ್ಲೇಸ್ ಎಂದು ಕರೆಯಲಾಗುತ್ತದೆ. ಕೆಲವು ಒಂದೇ ಎಳೆಯಲ್ಲಿರುವಂತವು ಸಿಗುತ್ತವೆ. ಇನ್ನು ಕೆಲವು ಮೂರ್ನಾಲ್ಕು, ನಾಲ್ಕೈದು ಎಳೆಯ ಲೇಯರ್ ಲುಕ್ ನೀಡುವಂತಹ ಕಾಯಿನ್ಸ್ ನೆಕ್ಲೇಸ್‌ಗಳು ದೊರೆಯುತ್ತವೆ.

ಬಂಗಾರದಲ್ಲೂ ಈ ಡಿಸೈನ್‌ನ ನಾನಾ ಬಗೆಯ ನೆಕ್ಲೇಸ್‌ಗಳು ದೊರೆಯಲಾರಂಭಿಸಿವೆ. ಲೇಯರ್ ಚೈನ್‌ಗೆ ಜೋಡಿಸಿದಂತಹ ಪುಟ್ಟ ಕಾಯಿನ್‌ಗಳಿರುವಂತವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ. ಫ್ಯಾಷನ್ ಜ್ಯುವೆಲ್ಲರಿ ಕೆಟಗರಿಯಲ್ಲಿ ಇವು ಟ್ರೆಂಡಿಯಾಗಿವೆ. ಇದನ್ನೂ ಓದಿ:‘ಬಿಗ್ ಬಾಸ್’ ಖ್ಯಾತಿಯ ಹಿನಾ ಖಾನ್‌ಗೆ ಸ್ತನ ಕ್ಯಾನ್ಸರ್


ಕಡಿಮೆ ಬೆಲೆಗೆ ದೊರೆಯುವ ನೆಕ್ಲೇಸ್‌ಗಳಿವು. ಹೆಚ್ಚು ಭಾರವಿಲ್ಲದ ಮಿನಿಮಲ್ ಡಿಸೈನ್‌ನ ಈ ಕಾಯಿನ್ ನೆಕ್‌ಚೈನ್‌ಗಳನ್ನು ಧರಿಸಿದಾಗ ಎಳೆಎಳೆಯಾಗಿ ಸುಂದರವಾಗಿ ಕಾಣಿಸುತ್ತವೆ.

Share This Article