ಲೋಕಸಭೆಯಲ್ಲಿ ಅಯೋಧ್ಯೆ ಸೋಲಿನ ಸೇಡನ್ನು ತೀರಿಸಿದ ಬಿಜೆಪಿ

Public TV
1 Min Read

ಲಕ್ನೋ: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಅಯೋಧ್ಯೆ (Ayodhya) ಸೋಲಿನ ಸೇಡನ್ನು ಬಿಜೆಪಿ ಈಗ ಮಿಲ್ಕಿಪುರ ಉಪಚುನಾವಣೆ ಗೆಲ್ಲುವ ಮೂಲಕ ತೀರಿಸಿಕೊಂಡಿದೆ.

ಅಯೋಧ್ಯೆ ಜಿಲ್ಲೆಯ ಮಿಲ್ಕಿಪುರ ಉಪಚುನಾವಣೆಯಲ್ಲಿ (Milkipur Election) ಬಿಜೆಪಿಯ ಚಂದ್ರಬಾಬು ಪಾಸ್ವಾನ್‌ ಅವರು 61,710 ಮತಗಳಿಂದ ಗೆದ್ದಿದ್ದಾರೆ.

‌ಚಂದ್ರಬಾಬು ಪಾಸ್ವಾನ್‌ ಅವರು 1,46,397 ಮತಗಳನ್ನು ಪಡೆದರೆ ಸಮಾಜವಾದಿ ಪಕ್ಷದ ಅಜಿತ್‌ ಪ್ರಸಾದ್‌ ಅವರು 84,687 ಮತ ಪಡೆದರು. ಇದನ್ನೂ ಓದಿ: ದಿಲ್ಲಿ ಗೆದ್ದಾಯ್ತು.. 2026ಕ್ಕೆ ಬಂಗಾಳ ಟಾರ್ಗೆಟ್‌: ಮಮತಾ ಬ್ಯಾನರ್ಜಿಗೆ ಬಿಜೆಪಿ ಎಚ್ಚರಿಕೆ

ಈ ಕ್ಷೇತ್ರದ ಎಸ್‌ಪಿ ಶಾಸಕರಾಗಿದ್ದ ಅವದೇಶ್‌ ಪ್ರಸಾದ್‌ ಅವರು ಅಯೋಧ್ಯೆ ಜಿಲ್ಲೆಯ ಫೈಜಾಬಾದ್‌ ಲೋಕಸಭಾ ಕ್ಷೇತ್ರವನ್ನು ಗೆದ್ದಿದ್ದರಿಂದ ಇಲ್ಲಿ ಉಪಚುನಾವಣೆ ನಡೆದಿತ್ತು. ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯಾದ ನಂತರ ನಡೆದ ಚುನಾವಣೆಯಲ್ಲಿ ಫೈಜಾಬಾದ್‌ನಲ್ಲಿ ಸೋತಿತ್ತು ಬಿಜೆಪಿಗೆ ಭಾರೀ ಹಿನ್ನಡೆಯಾಗಿತ್ತು ಮತ್ತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.


2022ರಲ್ಲಿ ನಡೆದ ಚುನಾವಣೆಯಲ್ಲಿ ಅವದೇಶ್‌ ಪ್ರಸಾದ್‌ ಅವರು 13,338 ಮತಗಳ ಅಂತರದಿಂದ ಜಯಗಳಿಸಿದ್ದರು. ಅವದೇಶ್‌ ಪ್ರಸಾದ್‌ ಅವರು 1,03,905 ಮತ ಪಡೆದರೆ ಬಿಜೆಪಿಯ ಬಾಬಾ ಗೋರಖನಾಥ್‌ ಅವರು 90,567 ಮತಗಳನ್ನು ಪಡೆದಿದ್ದರು.

 

Share This Article