ಹಾಲಿನ ಟ್ಯಾಂಕರ್, ಕಾರು, ಬೈಕ್ ಡಿಕ್ಕಿ- ಸವಾರ ಸ್ಥಳದಲ್ಲಿ ಸಾವು, ಬೆಂಕಿಗೆ ಆಹುತಿಯಾದ ಕಾರು

Public TV
1 Min Read

ಆನೇಕಲ್: ಹಾಲಿನ ಟ್ಯಾಂಕರ್, ಕಾರು, ಹಾಗೂ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದು, ಕಾರು ಬೆಂಕಿಗೆ ಆಹುತಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ತಮಿಳುನಾಡಿನ ಚೆನ್ನೈ ಹಾಗೂ ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಕಾರಿಗೆ ಬೈಕ್‌ವೊಂದು ಡಿಕ್ಕಿ ಹೊಡೆದೆ. ಇದರ ಪರಿಣಾಮ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದಾನೆ. ಆದರೆ ವಿಚಿತ್ರ ಎನ್ನುವಂತೆ ಅದೇ ಸಮಯಕ್ಕೆ ತಿಂಡಿವನಂ ಬಳಿ ಬರುತ್ತಿದ್ದ ಹಾಲನ್ನು ಸಾಗಿಸುತ್ತಿದ್ದ ಟ್ಯಾಂಕರ್ ಕಾರಿಗೆ ಡಿಕ್ಕಿಯಾಗಿದೆ. ಇದನ್ನೂ ಓದಿ: 3 ಗ್ರಾಂ ಚಿನ್ನ ನೀಡದ್ದಕ್ಕೆ ಕಿರುಕುಳ: ಗೃಹಿಣಿ ಅನುಮಾನಾಸ್ಪದ ಸಾವು 

ಇದರಿಂದಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸ್ಥಳದಲ್ಲೇ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ದ್ವಿಚಕ್ರ ವಾಹನ ಸವಾರ ಈ ಅಪಘಾತದಲ್ಲಿ ಬಲಿಯಾಗಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಸರ್ಕಾರದ ಜನೋತ್ಸವಕ್ಕೆ ಸಿದ್ಧತೆ – ರಾಜ್ಯಕ್ಕೆ ಮೋದಿ ಮತ್ತೊಮ್ಮೆ ಆಗಮನದ ನಿರೀಕ್ಷೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *