ಜು.23, 24 ರಂದು ಹಾಲು, ಸಿಗರೇಟ್ ಮಾರಾಟ ಬಂದ್

Public TV
2 Min Read

ಬೆಂಗಳೂರು: ಜಿಎಸ್‌ಟಿ ಟ್ಯಾಕ್ಸ್ (GST Tax) ವಿರುದ್ಧ ವರ್ತಕರು ಸಮರ ಸಾರಿದ್ದಾರೆ. ಜು.23, 24 ರಂದು ಹಾಲು (Milk), ಸಿಗರೇಟ್ ಮಾರಾಟ ಬಂದ್‌ಗೆ ಕರೆ ಕೊಟ್ಟಿದ್ದಾರೆ.

ಜು.25 ರಂದು ಬೇಕರಿ, ಕಾಂಡಿಮೆಟ್ಸ್, ಸಣ್ಣಪುಟ್ಟ ಅಂಗಡಿಗಳು ಎಲ್ಲವೂ ಬಂದ್ ಆಗಲಿವೆ. ಬೆಂಗಳೂರಿನ ಪ್ರತಿ ಏರಿಯಾದಲ್ಲೂ ಪ್ರತಿಭಟನೆಗೆ ಪ್ಲ್ಯಾನ್ ಮಾಡಲಾಗಿದೆ. ಆದರೆ, ವ್ಯಾಪಾರಸ್ಥರನ್ನ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ತೆರಿಗೆ ಹಣ ಕಟ್ಟಲು ಸೆಟ್ಲಿಮೆಂಟ್ ಮಾಡಿಕೊಳ್ಳಿ ಎಂದು ಅಂಗಡಿಗಳ ಬಳಿ ಅಧಿಕಾರಿಗಳು ಬರುತ್ತಿದ್ದಾರೆ ಎಂದು ವ್ಯಾಪಾರಸ್ಥರು ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಜಿಎಸ್‌ಟಿ ಮಾಡಿರೋದು ಕೇಂದ್ರ ಸರ್ಕಾರ – ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್‌ ನೋಟಿಸ್‌ ವಿಚಾರಕ್ಕೆ ಸಿಎಂ ರಿಯಾಕ್ಷನ್‌

ಜಿಎಸ್‌ಟಿ ನೋಟಿಸ್‌ಗೆ ಸಣ್ಣಪುಟ್ಟ ವ್ಯಾಪಾರಿಗಳು ಬೆಚ್ಚಿಬಿದ್ದಿದ್ದಾರೆ. ಆತಂಕಕ್ಕೆ ಒಳಗಾದ ವ್ಯಾಪಾರಿಗಳು ಜು.25 ರಂದು ಸಂಪೂರ್ಣ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಕಾರ್ಮಿಕ ಪರಿಷತ್ ಕಚೇರಿಯಲ್ಲಿ ನಗರದ ಕಾಂಡಿಮೆಟ್ಸ್, ಬೇಕರಿ ಅಂಗಡಿ ಮಾಲೀಕರು ಸಭೆ ನಡೆಸಿದ್ದರು. ಬಂದ್ ತೀವ್ರತೆ ಹೇಗಿರಬೇಕು, ಎಲ್ಲೆಲ್ಲಿ ಪ್ರತಿಭಟನೆ ಮಾಡಬೇಕು ಎಂದು ಚರ್ಚಿಸಿದ್ದರು.

ನಗರದಲ್ಲಿ 1 ಲಕ್ಷಕ್ಕೂ ಹೆಚ್ಚು ಬೇಕರಿ, ಕಾಂಡಿಮೆಟ್ಸ್ಗಳಿವೆ. ನೋಟಿಸ್ ಬಂದ ಕೆಲ ವ್ಯಾಪಾರಸ್ಥರನ್ನ ಅಧಿಕಾರಿಗಳು ಸಂಪರ್ಕಿಸಿ, ಸೆಟ್ಲ್ಮೆಂಟ್ ಮಾಡಿಕೊಳ್ಳಿ ಅಂತ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕೆಲವು ವ್ಯಾಪಾರಿಗಳನ್ನ ಕಚೇರಿಗೆ ಬನ್ನಿ ನಿಮಗಿರುವ ಗೊಂದಲದ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡುತ್ತೀವಿ ಎಂದು ಆಹ್ವಾನಿಸುತ್ತಿದ್ದಾರೆ. ಈ ಆಹ್ವಾನವನ್ನ ತಿರಸ್ಕರಿಸಿರುವ ವ್ಯಾಪಾರಿಗಳು ಬಂದ್ ತೀವ್ರಗೊಳಿಸಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಬಿಹಾರ ಎಲೆಕ್ಷನ್‌ಗೆ ಕರ್ನಾಟಕದಲ್ಲಿ ವಸೂಲಿ – ಜಿಎಸ್‌ಟಿ ನೋಟಿಸ್‌ಗೆ ಕೇಸರಿ ಬಿಗ್ ಟ್ವಿಸ್ಟ್

23, 24 ರಂದು ವ್ಯಾಪಾರಿಗಳು ಟೀ-ಕಾಫಿ ಬಂದ್ ಮಾಡಿ, ಕೈಗೆ ಕಪ್ಪುಪಟ್ಟಿ ಕಟ್ಟಿಕೊಳ್ಳಲಿದ್ದಾರೆ. 25ರಂದು ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ಹಾಲು ಮಾರಾಟ ಬಂದ್ ಕುರಿತು ಪ್ರತಿಕ್ರಿಯಿಸಿದ ಕೆಎಂಎಫ್ ಎಂಡಿ ಶಿವಸ್ವಾಮಿ, ರೆಗ್ಯೂಲರ್ ಆಗಿ ಹಾಲನ್ನ ಮಾರಾಟ ಮಾಡ್ತಾ ಇದ್ದೇವೆ. ಎಲ್ಲಾ ಪಾರ್ಲರ್, ಫ್ರಾಂಚೈಸಿಗಳಲ್ಲಿ, ಬೀದಿಬದಿಗಳಲ್ಲಿ ಹಾಲು ಮಾರಾಟ ಮಾಡ್ತಾ ಇದ್ದೇವೆ. ಜಿಎಸ್‌ಟಿಗೆ ಸಂಬಂಧಪಟ್ಟಂತೆ ವರ್ತಕರು ಪ್ರತಿಭಟನೆ, ಮುಷ್ಕರ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಒಂದು ವೇಳೆ ಮುಷ್ಕರ ಮಾಡಿದರೆ, ನಾವು ನಮ್ಮ ಅಧಿಕಾರಿಗಳು, ಸಿಬ್ಬಂದಿ, ಮಾರಾಟ ವಿಭಾಗದ ಸಿಬ್ಬಂದಿ ಮುಖಾಂತರ ಪೂರೈಕೆ ಮಾಡುತ್ತೇವೆ. ಯಾವುದೇ ವ್ಯತ್ಯಯ ಆಗದೇ ಇರೋಥರ ನೋಡಿಕೊಳ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ಬರೆ; ಸಿಎಂ ಮಧ್ಯಪ್ರವೇಶಿಸಿ ಪರಿಹಾರ ಒದಗಿಸಲಿ: ಬೊಮ್ಮಾಯಿ ಆಗ್ರಹ

ಹಾಲು ಅತ್ಯವಶ್ಯಕ ಆಗಿರುವುದರಿಂದ ಆಸ್ಪತ್ರೆಗೆ, ಹೋಟೆಲ್‌ಗೆ ಪೂರೈಕೆ ಮಾಡಬೇಕಾಗುತ್ತೆ. ಒಂದು ವೇಳೆ ಪ್ರತಿಭಟನೆ ಆದರೆ ನಾವು ಮಾರುಕಟ್ಟೆ ಸಿಬ್ಬಂದಿ ಹಾಗೂ ನಮ್ಮ ಬೇರೆ ಬೇರೆ ಶಾಖೆ ಅಧಿಕಾರಿಗಳನ್ನ ಬಳಕೆ ಮಾಡಿಕೊಂಡು ಹಾಲು ಮಾರಾಟ ಮಾಡುತ್ತೇವೆಂದು ತಿಳಿಸಿದ್ದಾರೆ.

Share This Article