ಲವ್ ಮಾಕ್‍ಟೇಲ್ ಮೊದಲ ದಿನದ ಚಿತ್ರೀಕರಣ ನೆನೆದ ನಿಧಿಮಾ

Public TV
3 Min Read

ಬೆಂಗಳೂರು: ಲವ್ ಮಾಕ್‍ಟೇಲ್ ಸಿನಿಮಾದಲ್ಲಿ ನಿಧಿಮಾ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಮಿಲನ ನಾಗರಾಜ್, ಸಿನಿಮಾದ ಮೊದಲ ದಿನದ ಚಿತ್ರೀಕರಣದ ಸಂದರ್ಭವನ್ನು ನೆನೆದಿದ್ದಾರೆ.

ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿರುವ ಅವರು, ಲವ್ ಮಾಕ್‍ಟೇಲ್ ಚಿತ್ರೀಕರಣದ ಮೊದಲ ದಿನ ನೆನಪಾಗುತ್ತಿದೆ. ನಿಮಗೆ ಈ ಸೀನ್ ನೆನಪಾಗುತ್ತಾ, ಇದೇ ಚಿತ್ರೀಕರಣದ ಮೊದಲ ಶಾಟ್ ಎಂದು ಬರೆದುಕೊಂಡು ಡಾರ್ಕ್ ಪಿಂಕ್ ಕಲರ್ ಸೀರೆ ಉಟ್ಟಿರುವ ಫೋಟೋವನ್ನು ಹಾಕಿದ್ದಾರೆ.

 

View this post on Instagram

 

Remembering first day of our shoot.. #LoveMocktail If you remember the scene, that was the first scene we shot????

A post shared by Milana Nagaraj (@milananagaraj) on

ಹಿಂದೆ ಕೆಲ ಸಿನಿಮಾಗಳಲ್ಲಿ ಮಿಲನ ನಾಗರಾಜ್ ನಟಿಸಿದರೂ ಹೆಚ್ಚು ಪ್ರಚಲಿತಕ್ಕೆ ಬಂದಿದ್ದು ಲವ್ ಮಾಕ್‍ಟೇಲ್ ಸಿನಿಮಾದಲ್ಲಿ ಅವರು ಮಾಡಿದ ಮೋಡಿಯಿಂದ. ಹಲವು ಜನರಿಗೆ ಮಿಲನ ನಾಗರಾಜ್ ಹೆಸರೇ ತಿಳಿದಿಲ್ಲ, ಈಗಲೂ ಹಲವರು ನಿಧಿಮಾ ಎಂದೇ ಗುರುತಿಸುತ್ತಾರೆ. ಆ ಮಟ್ಟಿಗೆ ಮಿಲನ ಅವರು ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಮೂಲಕ ಕನ್ನಡಿಗರ ಜನಮಾನಸದಲ್ಲಿ ಸ್ಥಾನ ಪಡೆದಿದ್ದಾರೆ. ಈದೀಗ ಲವ್ ಮಾಕ್‍ಟೇಲ್ ಸಿನಿಮಾದ ಮೊದಲ ದಿನದ ಶೂಟಿಂಗ್ ಕ್ಷಣವನ್ನು ಮಿಲನ ನಾಗರಾಜ್ ನೆನೆದಿದ್ದಾರೆ.

ಲವ್ ಮಾಕ್‍ಟೇಲ್ ಸಿನಿಮಾದಲ್ಲಿ ನಿಧಿಮಾ ಪಾತ್ರ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಒಂದೊಳ್ಳೆ ಐಡಿಂಟಿಟಿ ಸಿಕ್ಕಿದ್ದೇ ಈ ಪಾತ್ರದ ಮೂಲಕ. ಅಷ್ಟೇನು ಅವಕಾಶಗಳು ಸಿಗದೆ ಜಾಹೀರಾತು ಇತರೆ ಶೂಟಿಂಗ್‍ನಲ್ಲಿ ತೊಡಗಿದ್ದ ಮಿಲನ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ, ಚಿತ್ರ ಮಾಡುವ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಡಾರ್ಲಿಂಗ್ ಕೃಷ್ಣ ಅವರಿಗೆ ಹೆಚ್ಚೇನು ಅವಕಾಶಗಳು ಬರುತ್ತಿರಲಿಲ್ಲ. ಹೀಗಾಗಿ ಇಬ್ಬರೂ ಸೇರಿ ಸಿನಿಮಾ ಮಾಡುವ ಕುರಿತು ಚಿಂತಿಸಿ, ಕಾರ್ಯ ರೂಪಕ್ಕೆ ತರುತ್ತಾರೆ.

ಮಾಡಿದ ಪ್ರಯತ್ನ ಫಲ ನೀಡಿದ್ದು, ಸ್ಯಾಂಡಲ್‍ವುಡ್‍ನಲ್ಲಿ ಈ ಸಿನಿಮಾ ತನ್ನದೇಯಾದ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿದೆ. ಈ ಮೂಲಕ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಹೆಚ್ಚು ಜನಪ್ರಿಯರಾಗಿದ್ದಾರೆ. ಅಂದಹಾಗೆ ಲವ್ ಮಾಕ್ಟೇಲ್ ಸಿನಿಮಾಗೆ ಸ್ವತಃ ಮಿಲನ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಬಂಡವಾಳ ಹೂಡಿ, ಕೃಷ್ಣ ಅವರೇ ನಿರ್ದೇಶಿಸಿ, ಕಷ್ಟಪಟ್ಟು, ಕ್ರಿಯೇಟಿವ್ ಆಗಿ ಸಿನಿಮಾ ತಯಾರಿಸಿದ್ದಾರೆ.

ಹಾಗೋ ಹೀಗೋ ಸಿನಿಮಾ ಬಿಡುಗಡೆ ಮಾಡುತ್ತಾರೆ. ಆದರೆ ಬರುಬರುತ್ತ ಚಿತ್ರ ಮಂದಿರಗಳು ಕಡಿಮೆಯಾಗಿ ಒಂದೇ ಥೀಯೇಟರ್‍ನಲ್ಲಿ ಒಂದು ಶೋ ಮಾತ್ರ ಪ್ರದರ್ಶನ ಕಾಣುತ್ತದೆ. ಈ ಶೋನೂ ತಗೆದರೆ ಏನು ಗತಿ ಎಂದು ಕೃಷ್ಣ ಆತಂಕಕ್ಕೊಳಗಾಗುತ್ತಾರೆ. ಆಗ ತಕ್ಷಣ ಇತರೆ ಚಿತ್ರಮಂದಿರದ ಮಾಲೀಕರು ಹಾಗೂ ಮಲ್ಟಿಫ್ಲೆಕ್ಸ್ ಗಳ ಮಾಲೀಕರಿಗೆ ಕರೆ ಮಾಡಿ, ಜನ ಸಿನಿಮಾ ಇಷ್ಟಪಡುತ್ತಿದ್ದಾರೆ, ಕನಿಷ್ಟ ದಿನಕ್ಕೆ ಒಂದು ಶೋಗಾದರೂ ಅವಕಾಶ ಮಾಡಿಕೊಡಿ ಎಂದು ಕೇಳುತ್ತಾರೆ. ಆಗ ಎಲ್ಲ ಮಲ್ಟಿಫ್ಲೆಕ್ಸ್‍ಗಳಲ್ಲಿ ನಿತ್ಯ ಒಂದು ಶೋ ಪ್ರದರ್ಶನ ಕಾಣುತ್ತದೆ. ಎಲ್ಲ ಮಲ್ಟಿಫ್ಲೆಕ್ಸ್‍ಗಳಲ್ಲಿ ಈ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತದೆ. ನಂತರ 2,3 ಶೋಗಳನ್ನು ನಡೆಸಲು ಪ್ರಾರಂಭಿಸುತ್ತರೆ. ಹೀಗೆ ಲವ್ ಮಾಕ್ಟೇಲ್ ಯಶಸ್ಸು ಕಾಣುತ್ತದೆ.

ಭರ್ಜರಿ ಪ್ರದರ್ಶನದ ಬಳಿಕ ಓಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಸಹ ಈ ಚಿತ್ರ ಬಿಡುಗಡೆಯಾಗುತ್ತದೆ ಅಲ್ಲಿಯೂ ಸಖತ್ ರೆಸ್ಪಾನ್ಸ್ ಸಿಗುತ್ತದೆ. ಹೆಚ್ಚು ಜನರಿಗೆ ಅಪ್ಯಾಯಮಾನವಾಗುತ್ತದೆ. ಹೀಗೆ ಯಶಸ್ಸು ಕಂಡ ಚಿತ್ರದ ಸೀಕ್ವೆಲ್‍ನ್ನು ಡಾರ್ಲಿಂಗ್ ಕೃಷ್ಣ ತಯಾರಿಸುತ್ತಿದ್ದಾರೆ. ಲವ್ ಮಾಕ್ಟೇಲ್-2 ಚಿತ್ರ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಚಿತ್ರಕ್ಕೆ ಬೇಕಾದ ತಯಾರಿಯನ್ನು ನಡೆಸಿದ್ದಾರೆ. ಸ್ಕ್ರಿಪ್ಟ್ ರಚನೆಯಲ್ಲಿ ಬ್ಯುಸಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *