– ಬುಕ್ಕಿಂಗ್ ಮಾಡಿದ 20 ದಿನಗಳ ನಂತ್ರ ಮನೆ ಸೇರ್ತಿವೆ ಸಿಲಿಂಡರ್
ಬೆಂಗಳೂರು: ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ (LPG Cylinder) ಅಭಾವ ಮುಂದುವರಿದಿದೆ. ಗ್ಯಾಸ್ ಸಿಲಿಂಡರ್ ಗೋಳಾಟ ತೀರದಂತಾಗಿದೆ. ಜನ ಗ್ಯಾಸ್ ಸಿಲಿಂಡರ್ ಹಾಹಾಕಾರಕ್ಕೆ ಕಂಗಾಲಾಗಿದ್ದಾರೆ. ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದಿದ್ದು, ಗೃಹಬಳಕೆ, ಕಮರ್ಷಿಯಲ್, ಆಟೋ ಗ್ಯಾಸ್‌ಗೆ ಪರದಾಡುವಂತಾಗಿದೆ.
ಗ್ಯಾಸ್ ಏಜೆನ್ಸಿಗಳಿಗೆ ಗ್ರಾಹಕರ ಅಲೆದಾಟ
ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಗೋಳಾಟ ಮುಂದುವರಿದಿದೆ. ಬೆಂಗಳೂರು ನಗರದ (Bengaluru City) ಹಲವು ಏಜೆನ್ಸಿಗಳಿಗೆ ವಾಣಿಜ್ಯ ಸಿಲಿಂಡರ್ ತಲುಪಿಲ್ಲ. ಹೀಗಾಗಿ ಏಜೆನ್ಸಿ ಆವರಣಗಳಲ್ಲೇ ಖಾಲಿ ಖಾಲಿ ಸಿಲಿಂಡರ್‌ಗಳು ಉಳಿದಿವೆ. ಸಂಜಯನಗರದ ಎಚ್‌ಪಿ ಗ್ಯಾಸ್ ಏಜೆನ್ಸಿಗೆ ಗ್ರಾಹಕರು ಅಲೆದಾಡುತ್ತಿದ್ದಾರೆ. 20 ದಿನಗಳ ಹಿಂದೆ ಬುಕ್ ಮಾಡಿದ್ದ ಗೃಹಬಳಕೆ ಸಿಲಿಂಡರ್ ಈಗ ವಿತರಣೆ ಮಾಡಲಾಗ್ತಿದೆ. ಬುಕ್ ಮಾಡಿದ 20 ದಿನಗಳ ನಂತರ ಗ್ರಾಹಕರಿಗೆ ಸಿಲಿಂಡರ್ ಸಿಕ್ಕಿದೆ. ಈ ಮಧ್ಯೆ ಹೋಟೆಲ್‌ಗಳಿಗೆ ಅಲ್ಪ ಪ್ರಮಾಣದಲ್ಲಿ ಸಿಲಿಂಡರ್ ಸಪ್ಲೈ ಆಗ್ತಿದೆ. 10 ಸಿಲಿಂಡರ್ ವಿತರಣೆ ಮಾಡ್ತಿದ್ದ ಜಾಗಕ್ಕೆ 2-3 ಸಿಲಿಂಡರ್ ವಿತರಣೆ ಮಾಡಲಾಗ್ತಿದೆ.
ದಿನೇ ದಿನೇ ಏರಿಕೆಯಾಗುತ್ತಿದೆ ಬಾಕಿ ಬಿಲ್
ಬೆಂಗಳೂರಿನಲ್ಲಿ ಸಿಲಿಂಡರ್ ಟ್ರಬಲ್ ಮುಂದುವರಿದಿದೆ. ಮನೆಗಳಿಗೆ ಗ್ಯಾಸ್ ಸಪ್ಲೈಗೂ ಗ್ಯಾಸ್ ಏಜೆನ್ಸಿ ಪರದಾಡುವಂತಾಗಿದೆ. ಮಲ್ಲೇಶ್ವರದಲ್ಲಿರುವ ಇಂಡೇನ್ ಗ್ಯಾಸ್ ಏಜೆನ್ಸಿಯಲ್ಲಿ 4,000 ಕ್ಕೂ ಹೆಚ್ಚು ಬಿಲ್ ಬಾಕಿ ಇದೆ. ಏಜೆನ್ಸಿಗೆ ಕಡಿಮೆ ಪ್ರಮಾಣದ ಸಿಲಿಂಡರ್ ಲೋಡ್ ಸಪ್ಲೈ ಆಗ್ತಿದೆ. ಇದರಿಂದ ದಿನೇ ದಿನೇ ಬಾಕಿ ಬಿಲ್ ಏರಿಕೆಯಾಗುತ್ತಿದ್ದು, ಪ್ರತಿನಿತ್ಯ 50, 60 ಸಿಲಿಂಡರ್ ಮಾತ್ರ ಸಫ್ಲೈ ಆಗ್ತಿದೆ. ಹೀಗಾದ್ರೆ ಬಿಲ್ ಕ್ಲಿಯರ್ ಹೇಗೆ ಅನ್ನೋ ಟೆನ್ಷನ್ ಗ್ಯಾಸ್ ಏಜೆನ್ಸಿಗಳಿಗೆ ಶುರುವಾಗಿದೆ. ಇನನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ಸಂಗ್ರಹಿಸುವ ಯೋಜನೆಗೆ ಇರಾನ್ ಒಪ್ಪಿಗೆ – ಅಮೆರಿಕ, ಇಸ್ರೇಲ್ ಹಡಗುಗಳಿಗೆ ನಿಷೇಧ
ಹೋಟೆಲ್‌ಗಳಿಗೆ ಪೂರೈಕೆಯಾಗದ ಸಿಲಿಂಡರ್
ಬೆಂಗಳೂರಿನ ಹೋಟೆಲ್‌ಗಳಿಗೆ ಕಮರ್ಷಿಯಲ್ ಸಿಲಿಂಡರ್ ಪೂರೈಕೆ ಆಗ್ತಿಲ್ಲ. ಸರ್ಕಾರ ಶೇ 60 ರಷ್ಟು ಸಿಲಿಂಡರ್ ನೀಡ್ತಿದ್ದೀವಿ ಅಂತಿದೆ. ಆದರೆ ನಮಗೆ ಇಲ್ಲಿವರೆಗೆ ಒಂದೇ ಒಂದು ಸಿಲಿಂಡರ್ ಕೂಡ ಬಂದಿಲ್ಲ ಅಂತ ಹೋಟೆಲ್ ಮಾಲೀಕರು ಆಕ್ರೋಶಗೊಂಡಿದ್ದಾರೆ. ಸೌದೆ ಒಲೆಯಲ್ಲಿ ಅಡುಗೆ ಮಾಡ್ತೀವಿ, ಮೆನುಕೂಡ ಕಟ್ ಮಾಡಿದ್ದೀವಿ ಅಂತ ಜಯನಗರದ ಮಯೂರ ಕಫೆ ಹೋಟಲ್‌ನ ಮ್ಯಾನೇಜರ್ ಬೇಸರ ಹೊರಹಾಕಿದ್ದಾರೆ.
28 ಸಾವಿರಕ್ಕೆ ಸ್ಟವ್ ತಂದ ಮಾಲೀಕ
ಕಮರ್ಷಿಯಲ್ ಸಿಲಿಂಡರ್ ಸಿಗದ ಹಿನ್ನಲೆ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಕೊಪ್ಪಳದಲ್ಲಿ ಹೋಟೆಲ್ ಮಾಲೀಕರೊಬ್ಬ ಬರೋಬ್ಬರಿ 28 ಸಾವಿರ ಕೊಟ್ಟು ಸ್ಟವ್ ತಂದಿದ್ದಾರೆ. ಹೊಟೆಲ್ ಮಾಲೀಕರಿಂದ ಪರ್ಯಾಯ ವಿಧಾನದ ಮೂಲಕ ಅಡುಗೆ ಮೊರೆ ಹೋಗಿದ್ದಾರೆ. ಸೌದೆಗೆ ಭಾರೀ ಡಿಮ್ಯಾಂಡ್ ಜೊತೆಗೆ ಬೆಲೆ ಏರಿಕೆಯೂ ಹೆಚ್ಚಾಗಿದೆ. ಹೀಗಾಗಿ ಸಿಲಿಂಡರ್ ಪರ್ಯಾಯವಾಗಿ ದುಬಾರಿ ಸ್ಟವ್ ತಂದು ಹೋಟೆಲ್ ಮಾಲೀಕರು ಉದ್ಯಮ ನಡೆಸುತ್ತಿದ್ದಾರೆ.
ಆಟೋ ಗ್ಯಾಸ್ ಅಭಾವ; 300 ರೂ.ಗಳಿಗಷ್ಟೇ ಫಿಲ್ಲಿಂಗ್
ಬೆಂಗಳೂರಿನಲ್ಲಿ ಗ್ಯಾಸ್ ಸಮಸ್ಯೆಗೆ ಜನ ಹೈರಾಣಾಗಿದ್ದಾರೆ. ಮೈಸೂರು ರಸ್ತೆಯ ಗ್ಯಾಸ್ ಸ್ಟೇಷನ್‌ಗೆ ಆಟೋ ಗ್ಯಾಸ್‌ಗಾಗಿ ಚಾಲಕರು ಮುಗಿಬಿದ್ದಿದ್ದಾರೆ. ಒಂದೇ ಗ್ಯಾಸ್ ಸ್ಟೇಷನ್‌ನಲ್ಲಿ ನೂರಾರು ಆಟೋಗಳು ನಿಂತಿದ್ದ ದೃಶ್ಯ ಕಂಡುಬಂತು. ಪ್ರತಿ ಆಟೋಗೂ 300 ರೂಗಳಿಗಷ್ಟೇ ಗ್ಯಾಸ್ ಫಿಲ್ಲಿಂಗ್ ಮಾಡಲಾಗ್ತಿದೆ. ಇತರರಿಗೂ ಸಿಗಲಿ ಅನ್ನೋ ಕಾರಣಕ್ಕೆ 300 ರೂಗೆ ದರ ಫಿಕ್ಸ್ ಮಾಡಿದ್ದಾರೆ.
ಬೆಂಗಳೂರು ನಗರದ ಬಹುತೇಕ ಆಟೋ ಗ್ಯಾಸ್ ಸ್ಟೇಷನ್‌ಗಳು ಬಂದ್ ಆಗಿವೆ. ಆಟೋ ಗ್ಯಾಸ್ ಬಂಕ್‌ಗಳಲ್ಲಿ ನೋ ಸ್ಟಾಕ್ ಬೋರ್ಡ್ ತೆರವಾಗಿಲ್ಲ. ಹಲವು ಗ್ಯಾಸ್ ಸ್ಟೇಷನ್‌ಗಳಲ್ಲಿ ನೋ ಸ್ಟಾಕ್ ಬೋರ್ಡ್ ರಾರಾಜಿಸುತ್ತಿವೆ. ಸಪ್ಲೈ ಇಲ್ಲದ ಕಾರಣ ಗ್ಯಾಸ್ ಇಲ್ಲ ಅನ್ನೋ ಬೋರ್ಡ್ ಹಾಕಿ ಸಿಬ್ಬಂದಿ ಬಂಕ್ ಬಂದ್ ಮಾಡಿದ್ದಾರೆ. ಶೇಷಾದ್ರಿಪುರಂನ ಗೇಲ್ ಗ್ಯಾಸ್ ಬಂಕ್ ಕ್ಲೋಸ್ ಆಗಿದ್ದು, ಚಾಲಕರು ಬಂದು ವಾಪಸ್ಸಾಗ್ತಿದ್ದಾರೆ. ಇನನ್ನೂ ಓದಿ: ದುಪ್ಪಟ್ಟು ದರಕ್ಕೆ ಸಿಲಿಂಡರ್ ಮಾರುತ್ತಿದ್ದ ಅಡ್ಡೆ ಮೇಲೆ ಪೊಲೀಸರಿಂದ ದಾಳಿ – 9 ಸಿಲಿಂಡರ್ ಜಪ್ತಿ
ಆಟೋ ಗ್ಯಾಸ್ ದರ ಏರಿಕೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ಯಾಸ್ ಟ್ರಬಲ್ ಜನರ ನಿದ್ದೆಗೆಡಿಸಿದೆ. ಕಾರವಾರದ ಗೋ ಗ್ಯಾಸ್ ಬಂಕ್ ಎರಡು ದಿನದಿಂದ ಬಂದ್ ಆಗಿದೆ. ಬಹುತೇಕ ಗ್ಯಾಸ್ ಬಂಕ್‌ನಲ್ಲಿ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ. ದಿನದ ಕೂಲಿಗೂ ಸಂಕಷ್ಟ ಅನುಭವಿಸುತ್ತಿರುವ ಆಟೋ ಚಾಲಕರು ಕಂಗಲಾಗಿದ್ದಾರೆ. ಆಟೋ ಗ್ಯಾಸ್ ಅಭಾವದಿಂದ ಆಟೋ ಪ್ರಯಾಣ ದರವನ್ನ ದುಬಾರಿ ಮಾಡಿದ್ದಾರೆ. ಇದರಿಂದ ಪ್ರಯಾಣಿಕರಿಗೂ ಹೊಡೆತ ಬಿದ್ದಿದೆ.
ಇನ್ನೂ ಗದಗ ಜಿಲ್ಲೆಯಲ್ಲೂ ಆಟೋ ಚಾಲಕರ ಸಮಸ್ಯೆ ಹೊರತಾಗಿಲ್ಲ. ತಿಂಗಳ ಹಿಂದೆ 54 ರೂಪಾಯಿ ಇದ್ದ ಆಟೋ ಗ್ಯಾಸ್ ದರ ಈಗ 84.95 ರೂ. ಏರಿಕೆ ಆಗಿದೆ. ಬಂಕ್ ಮಾಲಿಕರ ವಿರುದ್ಧ ಆಟೋ ಚಾಲಕರು ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಮುಂದುವರಿದಿದೆ. ಗ್ಯಾಸ್ ಸಿಲಿಂಡರ್ ಗೋಳಾಟ ತೀರದಂತಾಗಿದೆ. ಜನ ಗ್ಯಾಸ್ ಸಿಲಿಂಡರ್ ಹಾಹಾಕಾರಕ್ಕೆ ಕಂಗಾಲಾಗಿದ್ದಾರೆ. ಇನನ್ನೂ ಓದಿ: ಯುದ್ಧ ಶುರುವಾದಾಗಿನಿಂದ ಮಾತುಕತೆ ನಡೆದಿಲ್ಲ, ಪಾಕ್ ಮಧ್ಯಸ್ಥಿಕೆಯಲ್ಲಿ ಅಮೆರಿಕದ ಮನವಿಯಷ್ಟೇ ಬಂದಿದೆ: ಇರಾನ್

