AI 1st ಫ್ಯೂಚರ್‌ಗಾಗಿ 1.5 ಲಕ್ಷ ಕೋಟಿ ರೂ. – ಭಾರತದಲ್ಲಿ ಮೈಕ್ರೋಸಾಫ್ಟ್‌ ಮೆಗಾ ಹೂಡಿಕೆ

2 Min Read

ನವದೆಹಲಿ: ಭಾರತದಲ್ಲಿ ಮೆಗಾ ಹೂಡಿಕೆಗಾಗಿ ಮೈಕ್ರೋಸಾಫ್ಟ್‌ (Microsoft) ಮುಂದಾಗಿದೆ. AI 1st ಫ್ಯೂಚರ್‌ಗಾಗಿ 1.5 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದೆ.

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ (Satya Nadella) ಅವರು ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿಯವರನ್ನು (PM Modi) ಭೇಟಿ ಮಾಡಿದರು. ಭಾರತದಲ್ಲಿ ಕೃತಕ ಬುದ್ಧಿಮತ್ತೆ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ 17.5 ಬಿಲಿಯನ್ ಅಮೆರಿಕನ್ ಡಾಲರ್ (1.5 ಲಕ್ಷ ಕೋಟಿ ರೂ.)ಗಳಿಗೂ ಹೆಚ್ಚು ಹೂಡಿಕೆಗೆ ಮುಂದಾಗಿದ್ದಾರೆ. ಅಮೆರಿಕ ಮೂಲದ ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್‌ನ ಏಷ್ಯಾದ ಅತಿದೊಡ್ಡ ಹೂಡಿಕೆ ಇದಾಗಲಿದೆ. ಇದನ್ನೂ ಓದಿ: ಚೀನಿ ವರರಿಗೆ ಪಾಕ್‌ ಮಾರುಕಟ್ಟೆ – ಯುವತಿಯರು ‘ಲೈಂಗಿಕ ಗುಲಾಮʼರಾಗುತ್ತಿರೋದು ಹೇಗೆ?

ಭಾರತದ AI ಅವಕಾಶದ ಕುರಿತು ಸ್ಪೂರ್ತಿದಾಯಕ ಸಂಭಾಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ದೇಶದ ಮಹತ್ವಾಕಾಂಕ್ಷೆಗಳನ್ನು ಬೆಂಬಲಿಸಲು, ಮೈಕ್ರೋಸಾಫ್ಟ್ ಏಷ್ಯಾದಲ್ಲೇ ಇದುವರೆಗಿನ ಅತಿದೊಡ್ಡ ಹೂಡಿಕೆ ಮಾಡಲಿದೆ. ಭಾರತದ ‘AI ಫರ್ಸ್ಟ್‌ ಫ್ಯೂಚರ್’ಗಾಗಿ ಅಗತ್ಯವಾದ ಮೂಲಸೌಕರ್ಯ, ಕೌಶಲ್ಯಕ್ಕಾಗಿ 17.5 ಬಿಲಿಯನ್ ಅಮೆರಿಕನ್ ಡಾಲರ್‌ ಹೂಡಿಕೆಗೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ನಾದೆಲ್ಲಾ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, AI ವಿಷಯಕ್ಕೆ ಬಂದರೆ, ಜಗತ್ತು ಭಾರತದ ಬಗ್ಗೆ ಆಶಾವಾದಿಯಾಗಿದೆ. ಸತ್ಯ ನಾದೆಲ್ಲಾ ಅವರೊಂದಿಗೆ ಬಹಳ ಉತ್ಪಾದಕ ಚರ್ಚೆ ನಡೆಸಿದೆ. ಮೈಕ್ರೋಸಾಫ್ಟ್ ಏಷ್ಯಾದಲ್ಲಿ ಇದುವರೆಗಿನ ಅತಿದೊಡ್ಡ ಹೂಡಿಕೆಗೆ ಭಾರತವನ್ನು ಆಯ್ಕೆ ಮಾಡಿಕೊಂಡಿರುವುದು ಸಂತಸ ತಂದಿದೆ. ಭಾರತದ ಯುವಕರು ಈ ಅವಕಾಶವನ್ನು ಬಳಸಿಕೊಳ್ಳುತ್ತಾರೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಚರ್ಚೆ – ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಮರಳಲು ವಿಪಕ್ಷಗಳ ಪಟ್ಟು

ಉಭಯ ನಾಯಕರ ಭೇಟಿಯ ನಂತರ ಬಿಡುಗಡೆಯಾದ ಪತ್ರಿಕಾ ಹೇಳಿಕೆಯಲ್ಲಿ, ಮೈಕ್ರೋಸಾಫ್ಟ್ ಭಾರತದಲ್ಲಿ 17.5 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಾಗಿ ಹೇಳಿದೆ. ಈ ಹಿಂದೆ ಬೆಂಗಳೂರಿನಲ್ಲಿ ಕ್ಲೌಡ್ ಮತ್ತು ಎಐ ಮೂಲಸೌಕರ್ಯವನ್ನು ಸ್ಥಾಪಿಸಲು 3 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಾಗಿತ್ತು. ಇದರಲ್ಲಿ ಕೌಶಲ್ಯವರ್ಧನೆ ಮತ್ತು ಹೊಸ ಡೇಟಾ ಸೆಂಟರ್‌ಗಳು ಸೇರಿವೆ. ಕಂಪನಿಯು ‘ಭಾರತದಲ್ಲಿ ಅತಿದೊಡ್ಡ ಹೈಪರ್‌ಸ್ಕೇಲ್ ಉಪಸ್ಥಿತಿಯನ್ನು’ ಹೊಂದಿದೆ ಎಂಬುದನ್ನು ಈ ಹೂಡಿಕೆ ಖಚಿತಪಡಿಸುತ್ತದೆ.

Share This Article