10 ಬೌಂಡರಿ, 13 ಸಿಕ್ಸರ್ – ನಿಕೋಲಸ್ ಪೂರನ್ ಸ್ಫೋಟಕ ಶತಕ; ವಿದೇಶದಲ್ಲೂ ಮುಂಬೈ ಚಾಂಪಿಯನ್

Public TV
3 Min Read

ವಾಷಿಂಗ್ಟನ್: ನಿಕೋಲಸ್ ಪೂರನ್ (Nicholas Pooran) ಸ್ಫೋಟಕ ಶತಕದ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ (MI New York) ತಂಡವು ಸಿಯಾಟಲ್ ಓಕಾರ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಚೊಚ್ಚಲ ಆವೃತ್ತಿಯ ಮೇಜರ್ ಕ್ರಿಕೆಟ್‌ಲೀಗ್‌ನಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಯಾಟಲ್ ಓಕಾರ್ಸ್ (Seattle Orcas) 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ 16 ಓವರ್‌ಗಳಲ್ಲೇ 3 ವಿಕೆಟ್ ನಷ್ಟಕ್ಕೆ 184 ರನ್ ಸಿಡಿಸಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದನ್ನೂ ಓದಿ: ದೊಡ್ಡ ಪ್ರತಿಫಲಕ್ಕೆ ಕಾಯುತ್ತೇನೆ – ಟೀಂ ಇಂಡಿಯಾ ಅಭಿಮಾನಿಗಳಿಗೆ ದ್ರಾವಿಡ್ ಪ್ರತಿಕ್ರಿಯೆ

ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ನಿರಾಯಾಸವಾಗಿ ಗೆಲುವಿನತ್ತ ಸಾಗಿತು. ಆರಂಭಿಕರು ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲವಾದರೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕೋಲಸ್ ಪೂರನ್ ಎದುರಾಳಿ ಬೌಲರ್‌ಗಳನ್ನ ಹಿಗ್ಗಾಮುಗ್ಗ ದಂಡಿಸಿದರು. ಬ್ಯಾಕ್ ಟು ಬ್ಯಾಕ್ ಸಿಕ್ಸರ್, ಬೌಂಡರಿಗಳೊAದಿಗೆ ಸ್ಫೋಟಕ ಶತಕ ಸಿಡಿಸಿ ಸುಲಭವಾಗಿ ಜಯ ಸಾಧಿಸಲು ನೆರವಾದರು. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 48 ರನ್‌ ಚಚ್ಚಿದ ಆಫ್ಘನ್‌ ಬ್ಯಾಟರ್‌ – ಮೈದಾನದಲ್ಲೇ ಕಣ್ಣೀರಿಟ್ಟ ಬೌಲರ್‌

ಮೊದಲ 16 ಎಸೆತಗಳಲ್ಲಿ 50 ರನ್ ಚಚ್ಚಿದ ನಿಕೋಲಸ್ ಪೂರನ್ 40 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದರು. 249 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಪೂರನ್ ಒಟ್ಟು 55 ಎಸೆತಗಳಲ್ಲಿ ಅಜೇಯ 137 ರನ್ (10 ಬೌಂಡರಿ, 13 ಸಿಕ್ಸರ್) ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಶಯಾನ್ ಜಹಾಂಗೀರ್ 10 ರನ್, ದೇವಾಲ್ ಬ್ರೇವ್ಸ್ 20 ರನ್ ಗಳಿಸಿದ್ರೆ ಟಿಮ್ ಡೇವಿಡ್ ಅಜೇಯ 10 ರನ್ ಗಳಿಸಿದರು.

ಮೊದಲು ಬ್ಯಾಟ್ ಮಾಡಿದ ಸಿಯಾಟಲ್ ಓಕಾರ್ಸ್ ಪರ ಕ್ವಿಂಟನ್ ಡಿಕಾಕ್ 87 ರನ್ (52 ಎಸೆತ, 9 ಬೌಂಡರಿ, 4 ಸಿಕ್ಸ್) ಬಾರಿಸುವ ಮೂಲಕ ಓಕಾರ್ಸ್ ಬೃಹತ್ ಮೊತ್ತ ಗಳಿಸಲು ನೆರವಾದರು. ಇದರೊಂದಿಗೆ ಶೆಹಾನ್ ಜಯಸೂರ್ಯ 16 ರನ್, ಶುಭಂ ರಂಜನೆ 29 ರನ್, ಡ್ವೈನ್‌ ಪ್ರಿಟೋರಿಯಸ್ 21 ರನ್ ಕೊಡುಗೆ ನೀಡಿದರು.

ಮುಂಬೈ ಪರ ಟ್ರೆಂಟ್ ಬೋಲ್ಟ್ ಹಾಗೂ ರಶೀದ್ ಖಾನ್ ತಲಾ 3 ವಿಕೆಟ್ ಪಡೆದರೆ, ಸ್ಟೀವನ್ ಟೇಲರ್ ಹಾಗೂ ಡೇವಿಡ್ ವೈಸ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು. ಓಕಾರ್ಸ್ ಪರ ಇಮಾದ್ ವಸೀಮ್ ಹಾಗೂ ವೇಯ್ನ್ ಪಾರ್ನೆಲ್ ತಲಾ ಒಂದೊಂದು ವಿಕೆಟ್ ಕಿತ್ತರು.

ಐಪಿಎಲ್‌ನಲ್ಲಿ 5 ಬಾರಿ ಚಾಂಪಿಯನ್ ಕಿರೀಟ ಧರಿಸಿರುವ ಮುಂಬೈ ಇಂಡಿಯನ್ಸ್ ಸಹೋದರ ತಂಡ ಈಗ ವಿದೇಶದಲ್ಲೂ ಕಮಾಲ್ ಮಾಡಿದೆ. ಇದೇ ಮೊದಲಬಾರಿಗೆ ನಡೆದ ಮೇಜರ್ ಕ್ರಿಕೆಟ್ ಲೀಗ್‌ನಲ್ಲಿ ಚಾಂಪಿಯನ್ ಪಟ್ಟಕ್ಕೆ ಕೊರಳೊಡ್ಡಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್