ಭಾರತಕ್ಕೆ ಎಂಜಿಯ ಎಲೆಕ್ಟ್ರಿಕ್ ಎಸ್‍ಯುವಿ ಬಿಡುಗಡೆ – ಬೆಲೆ, ಮೈಲೇಜ್ ಎಷ್ಟು?

Public TV
2 Min Read

ನವದೆಹಲಿ: ಪ್ರತಿಷ್ಠಿತ ಎಂಜಿ ಮೋಟಾರ್ಸ್ ತನ್ನ ಕಂಪನಿಯ ಮೊದಲ ಎಲೆಕ್ಟ್ರಿಕ್ ಎಸ್‍ಯುವಿ ಕಾರನ್ನು ಎಂಜಿ ಝಡ್‍ಎಸ್ ಇವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಈಗಾಗಲೇ ಹುಂಡೈ ಕಂಪನಿಯವರು ಕೋನಾ ಹೆಸರಿನ ಎಲೆಕ್ಟ್ರಿಕ್ ವಾಹನವನ್ನು ಭಾರತದಲ್ಲಿ ಅನಾವರಣಗೊಳಿಸಿದ್ದು, ಇದಕ್ಕೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಎಂಜಿ ಮೋಟಾರ್ಸ್ ಅವರು ತಮ್ಮ ಕಂಪನಿಯ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಿದೆ.

ಈ ಎಂಜಿ ಜಡ್‍ಎಸ್ ಇವಿ ತುಂಬಾ ಸ್ಟೈಲಿಶ್ ಲುಕ್‍ನಲ್ಲಿ ಡಿಸೈನ್ ಮಾಡಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 340 ಕಿ.ಮೀ ಚಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಿನಲ್ಲಿ 44.5 ಕಿಲೋವ್ಯಾಟ್ ಲಿಥಿಯಂ ಬ್ಯಾಟರಿಯನ್ನು ಅಳವಡಿಸಿದ್ದು, 50 ಕಿ.ವ್ಯಾ ಡಿಸಿ ಚಾರ್ಜರ್ ನಲ್ಲಿ ಕೇವಲ 40 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಆಗುತ್ತದೆ. ಅಲ್ಲದೇ ಕಾರಿನ ಜೊತೆ ಕಂಪನಿಯವರು 7.4 ಕಿ.ವ್ಯಾ ಡಿಸಿ ಚಾರ್ಜರ್ ಅನ್ನು ನೀಡುತ್ತಿದ್ದು, ಇದನ್ನು ಬಳಸಿ ಚಾರ್ಜ್ ಮಾಡಿದರೆ 7 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ.

ಎಂಜಿ ಜಡ್‍ಎಸ್ ಇವಿ ಎಸ್‍ಯುವಿ ಎಲೆಕ್ಟ್ರಿಕ್ ಕಾರನ್ನು ಭಾರತದದ್ಯಾಂತ ಸುಮಾರು 1 ಲಕ್ಷ ಕಿ.ಮೀ ಡ್ರೈವ್ ಮಾಡಿ ಪರೀಕ್ಷೆ ಮಾಡಲಾಗಿದೆ ಎಂದು ಎಂಜಿ ಮೋಟಾರ್ಸ್ ಕಂಪನಿ ತಿಳಿಸಿದೆ. ಈ ಕಾರು ಬ್ಯಾಟರಿ ಪವರ್ ಬಳಸಿಕೊಂಡು ಕೇವಲ ಎಂಟು ಸೆಕೆಂಡ್‍ಗಳಲ್ಲಿ 100 ಕಿ.ಮೀ ಸ್ಪೀಡ್‍ಗೆ ತಲುಪಬಲ್ಲ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ ಎಂಜಿ ಮೋಟಾರ್ಸ್ ಶೋರೂಮ್‍ಗಳು ಭಾರತದಲ್ಲಿ ದೆಹಲಿ, ಹೈದರಾಬಾದ್, ಮುಂಬೈ, ಬೆಂಗಳೂರು ಮತ್ತು ಅಹಮದಾಬಾದ್‍ನಲ್ಲಿ ಇದ್ದು, ಮುಂದಿನ 5 ವರ್ಷಗಳಲ್ಲಿ ಪ್ರಮುಖ ಮೆಟ್ರೋ ನಗರಗಳಲ್ಲಿ ಪ್ರತಿ 5 ಕಿ.ಮೀ ಮತ್ತು ಹೆದ್ದಾರಿಗಳಲ್ಲಿ ಪ್ರತಿ 25 ಕಿ.ಮೀ.ಗೆ 1 ಚಾರ್ಜಿಂಗ್ ಸ್ಟೇಷನ್ ಅನ್ನು ತೆರೆಯಲು ಕಂಪನಿ ಯೋಜನೆ ರೂಪಿಸಿದೆ.

ಈ ಕಾರು ಈ ಹಿಂದೆ ಎಂಜಿ ಮೋಟಾರ್ಸ್ ಬಿಡುಗಡೆ ಮಾಡಿದ ಎಂಜಿ ಹೆಕ್ಟರ್ ಕಾರಿಗಿಂತ ಸ್ವಲ್ಪ ಚಿಕ್ಕದಾಗಿದ್ದು, ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಇಂಟಿರಿಯರ್ ಡಿಸೈನ್ ಮಾಡಲಾಗಿದೆ. ಈ ಕಾರು 4314 ಮಿಮೀ (14 ಅಡಿ) ಉದ್ದ, 1809 ಮಿಮೀ (5 ಅಡಿ) ಅಗಲ ಮತ್ತು 1620 ಮಿಮೀ (5 ಅಡಿ) ಎತ್ತರವನ್ನು ಇದೆ. ಈ ಕಾರು ಹುಂಡೈ ಕಂಪನಿಯ ಕ್ರೆಟಾ ಕಾರಿಗಿಂತ ದೊಡ್ಡಾಗಿದೆ.

ಈ ಕಾರನ್ನು ಸ್ಪೋರ್ಟ್ ಕಾರ್ ರೀತಿಯಲ್ಲಿ ಡಿಸೈನ್ ಮಾಡಿದ್ದು, ಕಪ್ಪು ಮತ್ತು ಸಿಲ್ವರ್ ಬಣ್ಣದಲ್ಲಿ ಕಾರಿನ ಒಳಭಾಗವನ್ನು ಬಹಳ ಆಕರ್ಷಣೀಯವಾಗಿ ಕಾಣುವಂತೆ ವಿನ್ಯಾಸ ಮಾಡಲಾಗಿದೆ. ಇದರ ಜೊತೆ 8.0 ಇಂಚಿನ ಟಚ್‍ಸ್ಕ್ರೀನ್ ಸಿಸ್ಟಮ್ ನೀಡಲಾಗಿದ್ದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾಡುತ್ತದೆ. ಮೊಬೈಲ್ ಚಾರ್ಜರ್ ಮತ್ತು ಬ್ಲೂಟೂತ್ ಮತ್ತು ಹಿಂಬದಿಯ ಕ್ಯಾಮೆರಾವನ್ನು ನೀಡಲಾಗಿದೆ.

ಬೆಲೆ ಎಷ್ಟು?
ಕಂಪನಿ ಕಾರಿನ ಬೆಲೆಯನ್ನು ನಿಖರವಾಗಿ ತಿಳಿಸಿಲ್ಲ. ಆದರೆ ಮೂಲಗಳ ಪ್ರಕಾರ 20 ಲಕ್ಷ ರೂ. ಇರಬಹುದು ಎಂದು ಅದಾಜಿಸಲಾಗಿದೆ. ಜನವರಿಯಿಂದ ಈ ಕಾರು ಮಾರಾಟವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *