ಜಗತ್ತಿನಲ್ಲಿ 5 ವರ್ಷ ಕದನ ವಿರಾಮಕ್ಕೆ ಮೋದಿ ಸಮಿತಿ ರಚಿಸಿ: ಮೆಕ್ಸಿಕೋ ಅಧ್ಯಕ್ಷ

Public TV
2 Min Read

ಮೆಕ್ಸಿಕೋ: ಜಗತ್ತಿನಲ್ಲಿ ಮುಂದಿನ 5 ವರ್ಷಗಳ ಕಾಲ ಯುದ್ಧವೇ ಇಲ್ಲದೆ ಜೀವನ ನಡೆಸಲು ಸಮಿತಿಯನ್ನು ರಚಿಸಬೇಕು. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡಂತೆ ಮೂವರು ಸದಸ್ಯರಾಗಿರಬೇಕು ಎಂದು ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಹೇಳಿದ್ದಾರೆ.

ರಷ್ಯಾ, ಚೀನಾ ಯುದ್ಧ ನಡೆಸುತ್ತಿರುವ ಆತಂಕದ ನಡುವೆಯು ಮೆಕ್ಸಿಕನ್ ಅಧ್ಯಕ್ಷರು ಯುದ್ಧ ನಿಲ್ಲಿಸಲು ಸಮಿತಿ ಸ್ಥಾಪನೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಇರಬೇಕು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಈ ಸಮಿತಿಯ ಬಗ್ಗೆ ವಿಶ್ವಸಂಸ್ಥೆಗೆ ಲಿಖಿತ ರೂಪದಲ್ಲಿ ಮಂಡಿಸುತ್ತೇನೆ. ಈ ಆಯೋಗದ ಬಗ್ಗೆ ಪ್ರಚಾರ ಮಾಡಲು ಸಹಾಯ ಬೇಕಾಗಿದೆ ಎಂದು ಹೇಳಿದರು.

ಈ ಸಮಿತಿಯ ರಚಿಸಲು ಉದ್ದೇಶವೆಂದರೆ, ಅವರೆಲ್ಲರೂ ನಿಯಮಿತವಾಗಿ ಸಭೆ ನಡೆಸುವುದು ಮಾತ್ರವಲ್ಲದೆ, ಯುದ್ಧವಾಗುವ ಸಂಭವ ಇರುವ ಕಡೆ ಯದ್ಧಗಳನ್ನು ನಿಲ್ಲಿಸುವ ಪ್ರಸ್ತಾಪದ ಬಗ್ಗೆಯೂ ಸಲಹೆಯನ್ನು ನೀಡುತ್ತಾರೆ. ಜೊತೆಗೆ ಆಯಾ ದೇಶಗಳೊಂದಿಗೆ ಕನಿಷ್ಠ 5 ವರ್ಷಗಳ ಕಾಲ ಯುದ್ಧಗಳಿಲ್ಲದ ಜಾಗತಿಕ ಒಪ್ಪಂದಕ್ಕೆ ಸಹಾಯ ಮಾಡುತ್ತಾರೆ. ಇದರಿಂದಾಗಿ ಪ್ರಪಂಚದಾದ್ಯಂತದ ಯುದ್ಧ ಮತ್ತು ಅದರ ಪರಿಣಾಮಗಳಿಂದ ಬಳಲುತ್ತಿರುವ ಜನರಿಗೆ ಇದು ನೆರವಾಗಲಿದೆ. ಜಗತ್ತಿಗೆ ಐದು ವರ್ಷಗಳ ಕಾಲ ಯಾವುದೇ ಉದ್ವಿಗ್ನತೆ ಇಲ್ಲದೆ, ಹಿಂಸೆಯಿಲ್ಲದೆ ಮತ್ತು ಶಾಂತಿಯಿಂದ ಇರುತ್ತವೆ ಎಂದು ಹೇಳಿದರು.

ಈಗಾಗಲೇ ಯುದ್ಧ ನಡೆಸುತ್ತಿರುವ ಕೆಲವು ದೇಶಗಳು ತಮ್ಮ ವ್ಯಾಪಾರ ಸಂಘರ್ಷಗಳನ್ನು ನಿಲ್ಲಿಸಬೇಕು. ತಮ್ಮ ಸಂಬಂಧಿತ ಬದ್ಧತೆಗಳ ಬಗ್ಗೆ ನಿಗಾ ಇಡಲು ವಿಶ್ವಸಂಸ್ಥೆಯ ಚೌಕಟ್ಟನ್ನು ಬಳಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: PSI ಕೇಸ್‍ – ನಿಮ್ಹಾನ್ಸ್‌ನಲ್ಲಿ ಅಮೃತ್ ಪೌಲ್‌ಗೆ ಚಿಕಿತ್ಸೆ

ಮೋದಿಯೇ ಯಾಕೆ?: ಕದನ ವಿರಾಮ ಘೋಷಿಸಿ ಶಾಂತಿ ಕಾಪಾಡಲು 3 ಜಾಗತಿಕ ಶಕ್ತಿಗಳಾದ ಚೀನಾ, ರಷ್ಯಾ ಮತ್ತು ಅಮೆರಿಕವನ್ನು ಆಹ್ವಾನಿಸುತ್ತೇನೆ. ಇದು ಅವರಿಗೆ ಅರ್ಥವಾಗುತ್ತದೆ ಎಂದುಕೊಳ್ಳುತ್ತೇನೆ. ಅವರ ಯುದ್ಧಗಳಿಂದಾಗಿ ಕಳೆದ ಒಂದು ವರ್ಷದಿಂದ ವಿಶ್ವದ ಪರಿಸ್ಥಿತಿ ಹದಗೆಟ್ಟಿದೆ. ಇಂದು ವಿಶ್ವದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದರೆ, ಅದಕ್ಕೆ ಈ ಮೂರು ದೇಶಗಳೇ ಕಾರಣ. ವಿಶ್ವ ಆರ್ಥಿಕ ಬಿಕ್ಕಟ್ಟು, ಹಣದುಬ್ಬರ, ಆಹಾರದ ಕೊರತೆ, ಬಡತನ, ಜೀವಹಾನಿಗೆ ಅವರೇ ಕಾರಣೀಕರ್ತರು. ಈ ಮೂರು ದೇಶಗಳ ಜೊತೆ ನರೇಂದ್ರ ಮೋದಿ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ ಈ ದೇಶಗಳು ಈ ಸಮಿತಿಯ ಮಾತನ್ನು ಒಪ್ಪುವ ಸಾಧ್ಯತೆಯಿದೆ ಎಂದು ಮೆಕ್ಸಿಕೋ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: 4 ವರ್ಷಗಳಿಂದ ಸ್ಥಗಿತವಾಗಿದ್ದ ಮೈ ಶುಗರ್‌ ಕಾರ್ಖಾನೆ ಇಂದಿನಿಂದ ಆರಂಭ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *