ಮೊಬೈಲ್ ಹುಚ್ಚು, ಮೆಟ್ರೋ ಹಳಿ ಮೇಲೆ ಬಿದ್ದ ಮಹಿಳೆ – ವಿಡಿಯೋ ನೋಡಿ

Public TV
1 Min Read

ಮ್ಯಾಡ್ರಿಡ್: ಈ ವಿಡಿಯೋ ನೋಡಿದರೆ ಒಂದು ಕ್ಷಣ ನೀವು ಖಂಡಿತ ಬೆಚ್ಚಿ ಬೀಳುತ್ತೀರಿ.

ಈ ಘಟನೆ ಸ್ಪೇನ್‍ನ ಉತ್ತರ ಮ್ಯಾಡ್ರಿಡ್‍ನ ಎಸ್ಟ್ರೆಚೊ ಮೆಟ್ರೋ ರೈಲು ನಿಲ್ದಾಣದಲ್ಲಿ ನಡೆದಿದ್ದು, ಮಹಿಳೆಯೊಬ್ಬಳು ಮೊಬೈಲ್‍ನಲ್ಲಿ ತಲ್ಲೀನರಾಗಿದ್ದಾಗ ಅರಿವಿಲ್ಲದೆ ಪ್ಲಾಟ್‍ಫಾರ್ಮ್ ಅಂಚಿನಿಂದ ಹಳಿಗೆ ಬಿದ್ದಿದ್ದಾಳೆ. ತಕ್ಷಣವೇ ಮೆಟ್ರೋ ರೈಲು ಆಗಮಿಸಿದೆ.

ರೈಲು ಮಹಿಳೆಯ ಮೇಲೆ ಹರಿದಿದೆಯೇ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸಿಲ್ಲ. ಆದರೆ ಈ ಘಟನೆಯಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಮೆಟ್ರೋ ಡಿ ಮ್ಯಾಡ್ರಿಡ್ ಸ್ಪಷ್ಟಪಡಿಸಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

ಘಟನೆಯ ಸಿಸಿ ಟಿವಿ ದೃಶ್ಯಾವಳಿಯನ್ನು ಮೆಟ್ರೋ ಡಿ ಮ್ಯಾಡ್ರಿಡ್ ಬಿಡುಗಡೆಗೊಳಿಸಿದೆ. ರೈಲು ನಿಲ್ದಾಣಗಳಲ್ಲಿ ಈ ವಿಡಿಯೋ ಪ್ರಸಾರ ಮಾಡುವ ಮೂಲಕ ಪ್ರಯಾಣಿಕರಿಗೆ ಜಾಗೃತವಾಗಿ ಇರುವಂತೆ ಎಚ್ಚರಿಕೆ ನೀಡುತ್ತಿದೆ.

ಈ ಪ್ರಕರಣದಲ್ಲಿ ಮಹಿಳೆಗೆ ಏನೂ ಆಗಿಲ್ಲ, ಮಹಿಳೆ ಚೆನ್ನಾಗಿದ್ದಾರೆ ಎಂದು ಮಟ್ರೋ ಡಿ ಮ್ಯಾಡ್ರಿಡ್ ಈ ವಿಡಿಯೋ ತುಣುಕನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *