ಫಿಫಾ ಫೈನಲ್ – ಮೆಸ್ಸಿ Vs ಎಂಬಾಪೆ ನಡುವೆ ಕಾಲ್ಚೆಂಡಿನಾಟದ ಕ್ಲೈಮ್ಯಾಕ್ಸ್‌ ಫೈಟ್

Public TV
3 Min Read

ಕತಾರ್: ಅರಬ್ಬರ ನಾಡಲ್ಲಿ ಬಹಳ ಅದ್ದೂರಿಯಾಗಿ ಆರಂಭಗೊಂಡಿದ್ದ ಫಿಫಾ ವಿಶ್ವಕಪ್‍ಗೆ (FIFA World Cup final 2022) ಇಂದು ತೆರೆ ಬೀಳಲಿದೆ. ಇಂದು ರಾತ್ರಿ ಅರ್ಜೆಂಟಿನಾ (Argentina) ಹಾಗೂ ಫ್ರಾನ್ಸ್ (France) ನಡುವಿನ ರೋಚಕ ಫೈನಲ್  ಹಣಾಹಣಿಯೊಂದಿಗೆ ಕಾಲ್ಚೆಂಡಿನಾಟ ಕ್ಲೈಮ್ಯಾಕ್ಸ್‌ ಕಾಣಲಿದ್ದು, ಫೈನಲ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಫೈನಲ್‍ನಲ್ಲಿ ಅರ್ಜೆಂಟಿನಾದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಮತ್ತು ಫ್ರಾನ್ಸ್‌ನ ಯಂಗ್ ಫೈಯರ್ ಕಿಲಿಯಾನ್ ಎಂಬಾಪೆ (Kylian Mbappe) ನಡುವಿನ ಕಾದಾಟವಾಗಿ ಮಾರ್ಪಾಡಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ಒಂದು ಕಡೆ ಹಾಲಿ ಚಾಂಪಿಯನ್ ಫ್ರಾನ್ಸ್ ಆದರೆ, ಇನ್ನೊಂದೆಡೆ ಮಾಜಿ ಚಾಂಪಿಯನ್ ಅರ್ಜೆಂಟಿನಾ ಮೂರನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಹೋರಾಟ ನಡೆಸಲಿದೆ. ಇದನ್ನೂ ಓದಿ: ಭಾರತಕ್ಕೆ 188 ರನ್‌ಗಳ ಗೆಲುವು – ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ

ಕತಾರ್‌ನ ಲುಸೈಲ್ ಮೈದಾನ 80,000 ಪ್ರೇಕ್ಷಕರಿಂದ ತುಂಬಿ ತುಳುಕಲಿದ್ದು, ಅಭಿಮಾನಿಗಳ ಹರ್ಷೋದ್ಘಾರದೊಂದಿಗೆ ಫೈನಲ್ ಫೈಟ್ ನಡೆಯಲಿದೆ. ಎರಡು ತಂಡಗಳು ಬಲಿಷ್ಠ ಹೋರಾಟದ ಮೂಲಕ ಸೋಲು ಗೆಲುವಿನ ಸಮ್ಮಿಲನದೊಂದಿಗೆ ಫೈನಲ್ ಹಂತಕ್ಕೆ ತಲುಪಿದೆ. ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಇದನ್ನೂ ಓದಿ: ಫಿಫಾ ವಿಶ್ವಕಪ್ – ಫೈನಲ್‍ಗೂ ಮುನ್ನ ಫ್ರಾನ್ಸ್ ಆಟಗಾರರಿಗೆ ಕಾಡುತ್ತಿದೆ ವೈರಸ್!

ಅರ್ಜೆಂಟಿನಾ ಲೀಗ್ ಹಂತದಲ್ಲೇ ಸೌದಿ ಅರೇಬಿಯಾ ವಿರುದ್ಧ ಸೋತು ಹೊರಬೀಳುವ ಸ್ಥಿತಿಯಲ್ಲಿತ್ತು. ಆ ಬಳಿಕ ನಡೆದಿದ್ದು, ಮೆಸ್ಸಿ ಮ್ಯಾಜಿಕ್‌ ಹಾಗಾಗಿ ಪುಟಿದೆದ್ದ ಅರ್ಜೆಂಟಿನಾ ಫೈನಲ್ ವರೆಗೂ ಬಂದಿದೆ. ಇನ್ನೊಂದೆಡೆ ಸ್ಟಾರ್ ಆಟಗಾರರು ಗಾಯಗೊಂಡು ತಂಡ ತೊರೆದರೂ ತಂಡದಲ್ಲಿದ್ದ ಇತರ ಆಟಗಾರರು ಫ್ರಾನ್ಸ್‌ನ ಸ್ಟಾರ್‌ಗಳಾಗಿ ಗುರುತಿಸಿಕೊಂಡು ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಆಟದೊಂದಿಗೆ ತಂಡವನ್ನು ಫೈನಲ್ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – ಭಾರತಕ್ಕೆ ಅಂಧರ ವಿಶ್ವಕಪ್

ಮೆಸ್ಸಿ, ಎಂಬಾಪೆ ನಡುವೆ ಗೋಲ್ಡನ್ ಬೂಟ್ ಕಾದಾಟ
ಒಂದು ಕಡೆ ಫ್ರಾನ್ಸ್ ಮತ್ತು ಅರ್ಜೆಂಟಿನಾ ಪ್ರಶಸ್ತಿಗಾಗಿ ಕಾದಾಟ ನಡೆಸಿದರೆ, ಇನ್ನೊಂದೆಡೆ ಗೋಲ್ ವೀರರಾದ ಮೆಸ್ಸಿ ಮತ್ತು ಎಂಬಾಪೆ ನಡುವೆ ಗೋಲ್ಡನ್ ಬೂಟ್ ಪ್ರಶಸ್ತಿಗಾಗಿ (ಹೆಚ್ಚು ಗೋಲು ಬಾರಿಸಿದ ಆಟಗಾರನಿಗೆ ನೀಡುವ ಪ್ರಶಸ್ತಿ) ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಇಬ್ಬರೂ ತಲಾ 5 ಗೋಲು ಬಾರಿಸಿದ್ದಾರೆ. ಇಂದಿನ ಫೈನಲ್ ಪಂದ್ಯದಲ್ಲಿ ಯಾರು ಹೆಚ್ಚು ಗೋಲು ಬಾರಿಸುತ್ತಾರೆ ಅವರ ಮಡಿಲಿಗೆ ಗೋಲ್ಡನ್ ಬೂಟ್ ಸೇರಲಿದೆ.

ಈ ಬಾರಿ ಫ್ರಾನ್ಸ್ ಗೆದ್ದರೆ, ಎಂಬಾಪೆಗೆ 2ನೇ ಪ್ರಶಸ್ತಿ ಆಗಲಿದ್ದು, ಅರ್ಜೆಂಟಿನಾ ಗೆದ್ದರೆ, ಮೆಸ್ಸಿಗೆ ಚೊಚ್ಚಲ ಫಿಫಾ ವಿಶ್ವಕಪ್ ಎತ್ತಿಹಿಡಿಯುವಂತಾಗುತ್ತದೆ. ಈಗಾಗಲೇ ತಂಡಗಳೆರಡೂ ತಲಾ 2 ಬಾರಿ ಪ್ರಶಸ್ತಿ ಗೆದ್ದರೂ ಅರ್ಜೆಂಟಿನಾ ಸ್ಟಾರ್ ಮೆಸ್ಸಿಗೆ ಈವರೆಗೆ ಫಿಫಾ ವಿಶ್ವಕಪ್ ಎತ್ತಿ ಹಿಡಿಯುವ ಅದೃಷ್ಟ ಸಿಕ್ಕಿರಲಿಲ್ಲ. ಇದೀಗ ಅವಕಾಶ ಕೂಡಿ ಬಂದಿದ್ದು, ಈ ಬಾರಿ ಪ್ರಶಸ್ತಿ ಜಯಿಸಿ ವೃತ್ತಿಜೀವನದ ಕೊನೆಯ ವಿಶ್ವಕಪ್ ಪಂದ್ಯವನ್ನು ಸ್ಮರಣೀಯವಾಗಿಸಲು ಮೆಸ್ಸಿ ಎದುರು ನೋಡುತ್ತಿದ್ದಾರೆ. ಇದನ್ನೂ ಓದಿ: ಡಿ.18ರ ಫೈನಲ್‌ ನನ್ನ ಕೊನೆಯ ವಿಶ್ವಕಪ್‌ ಪಂದ್ಯ – ನಿವೃತ್ತಿ ಖಚಿತಪಡಿಸಿದ ಮೆಸ್ಸಿ

ಈ ಹಿಂದಿನ ಅಂಕಿಅಂಶ:
ಅರ್ಜೆಂಟಿನಾ ಮತ್ತು ಫ್ರಾನ್ಸ್ ತಂಡಗಳು ಈವರೆಗೆ 12 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಅರ್ಜೆಂಟಿನಾ ಆರು ಪಂದ್ಯಗಳನ್ನು ಗೆದ್ದಿದೆ. ಫ್ರಾನ್ಸ್ ಮೂರರಲ್ಲಿ ಗೆದ್ದರೆ, ಉಳಿದ ಮೂರು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಈ ಎರಡು ತಂಡಗಳು ಇಲ್ಲಿಯವರೆಗೆ ಫಿಫಾ ವಿಶ್ವಕಪ್‍ನಲ್ಲಿ ಮೂರು ಬಾರಿ ಆಡಿವೆ. ಅರ್ಜೆಂಟಿನಾ ಎರಡು ಗೆಲುವುಗಳನ್ನು ಪಡೆದರೆ, ಫ್ರಾನ್ಸ್ ಒಂದು ಬಾರಿ ಗೆದ್ದಿದೆ.

ಅರ್ಜೆಂಟಿನಾ 1930 ರಲ್ಲಿ 1-0 ಮತ್ತು 1978 ರಲ್ಲಿ 2-1 ರಲ್ಲಿ ಫ್ರಾನ್ಸ್ ಅನ್ನು ಸೋಲಿಸಿತು. ಆ ಬಳಿಕ 2018ರ ವಿಶ್ವಕಪ್‍ನಲ್ಲಿ ಫ್ರಾನ್ಸ್ 4-3 ಅಂತರದಿಂದ ಅರ್ಜೆಂಟಿನಾವನ್ನು ಸೋಲಿಸಿತ್ತು. ಇದೀಗ ಮತ್ತೊಮ್ಮೆ ಎದುರುಬದುರಾಗುತ್ತಿದೆ.

ಗೆದ್ದವರಿಗೆ 347 ಕೋಟಿ ರೂ.
ಫಿಫಾ ವಿಶ್ವಕಪ್ ಪ್ರಶಸ್ತಿ ಮೊತ್ತ ದುಬಾರಿಯಾಗಿದ್ದು, ವಿಶ್ವಕಪ್ ಗೆದ್ದ ತಂಡಕ್ಕೆ 42 ಮಿಲಿಯನ್ ಡಾಲರ್ (347 ಕೋಟಿ ರೂ.) ಸಿಗಲಿದೆ, ರನ್ನರ್ ಅಪ್ ತಂಡಕ್ಕೆ 30 ಮಿಲಿಯನ್ ಡಾಲರ್ (248 ಕೋಟಿ ರೂ.) ಬಹುಮಾನ ಮೊತ್ತ ಸಿಗಲಿದೆ.

ಇಂದು ಭಾರತೀಯ ಕಾಲಮಾನ ರಾತ್ರಿ 8:30ಕ್ಕೆ ಪಂದ್ಯ ನಡೆಯಲಿದ್ದು, ಫುಟ್‍ಬಾಲ್ ಪ್ರಿಯರು ಎರಡು ಶ್ರೇಷ್ಠ ತಂಡಗಳ ನಡುವಿನ ರೋಚಕ ಹಣಾಹಣಿ ನೋಡಲು ಈಗಾಗಲೇ ಸಜ್ಜಾಗುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *