ಮೇರಾ ಬಿಲ್ ಮೇರಾ ಅಧಿಕಾರ್ – ಬಿಲ್ ಕೇಳಿ 1 ಕೋಟಿ ರೂ. ಬಹುಮಾನ ಗೆಲ್ಲಿ

Public TV
2 Min Read

ನವದೆಹಲಿ: ಆರು ರಾಜ್ಯಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು 10,000 ರೂ. ನಿಂದ 1 ಕೋಟಿ ರೂ. ವರೆಗೆ ನಗದು ಬಹುಮಾನ ನೀಡುವ `ಮೇರಾ ಬಿಲ್ ಮೇರಾ ಅಧಿಕಾರ್’ (Mera Bill Mera Adhikar) ಯೋಜನೆಯನ್ನು ಸರ್ಕಾರ ಸೆ.1 ರಿಂದ ಪ್ರಾರಂಭಿಸಲಿದೆ.

ಗ್ರಾಹಕರು ವಸ್ತುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸುವಾಗ ಪ್ರತಿ ಬಾರಿ ಕಡ್ಡಾಯವಾಗಿ ಬಿಲ್ ಕೇಳುವಂತೆ ಪ್ರೇರೇಪಿಸುವ ಗುರಿಯನ್ನು ಈ ಯೋಜನೆ ಹೋದಿದೆ. ಅಸ್ಸಾಂ, ಗುಜರಾತ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಆರಂಭದಲ್ಲಿ ಪ್ರಾರಂಭಿಸಲಾಗುತ್ತದೆ. ಪುದುಚೇರಿ, ದಮನ್, ದಿಯು, ದಾದ್ರಾ ಮತ್ತು ಹವೇಲಿಯ ಕೇಂದ್ರೀಯ ಆಡಳಿತ ಪ್ರದೇಶಗಳಲ್ಲಿ ಸಹ ಜಾರಿಗೆ ತರಲಾಗುತ್ತಿದೆ. ಇದನ್ನೂ ಓದಿ: ಚಿಣ್ಣರ ಅಂಗಳ ಅಂಗನವಾಡಿಗಳಿಗೆ ಆಸರೆಯಾಗಲು ಮುಂದಾದ ಗುಂಡೂರಾವ್ ಪುತ್ರಿ ಅನನ್ಯ ರಾವ್

ಜಿಎಸ್‍ಟಿ (GST) ಬಿಲ್‍ಗಳನ್ನು ಅಪ್‍ಲೋಡ್‍ನಲ್ಲಿ ನಗದು ಬಹುಮಾನಗಳನ್ನು ಗಳಿಸಲು ಇನ್‍ವಾಯ್ಸ್ ಇನ್ಸೆಂಟಿವ್ ಸ್ಕೀಮ್ ನ್ನು ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ಟ್ವೀಟ್ ಮಾಡಿದೆ. ಗ್ರಾಹಕರಿಗೆ ಸರಕು ಮತ್ತು ಸೇವಾ ತೆರಿಗೆ ನೋಂದಾಯಿತ ಪೂರೈಕೆದಾರರು ನೀಡಿದ ಎಲ್ಲಾ ಇನ್‍ವಾಯ್ಸ್‍ಗಳು ಯೋಜನೆಗೆ ಅರ್ಹವಾಗಿರುತ್ತವೆ. ಇದರ ಅಡಿಯಲ್ಲಿ ಮಾಸಿಕ ಮತ್ತು ತ್ರೈಮಾಸಿಕ ಡ್ರಾಗಳನ್ನು ಮಾಡಲಾಗುತ್ತದೆ. ವಿಜೇತರು ನಗದು ಬಹುಮಾನಗಳನ್ನು ಪಡೆಯಲಿದ್ದಾರೆ.

ಈ ಡ್ರಾಗಾಗಿ ಪರಿಗಣಿಸಬೇಕಾದ ಇನ್‍ವಾಯ್ಸ್‍ನ ಕನಿಷ್ಠ ಖರೀದಿ ಮೌಲ್ಯವು 200 ರೂ. ಆಗಿದೆ. ವ್ಯಕ್ತಿಗಳು ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗುವ ತಿಂಗಳಲ್ಲಿ ಗರಿಷ್ಠ 25 ಇನ್‍ವಾಯ್ಸ್‍ಗಳನ್ನು ಅಪ್‍ಲೋಡ್ ಮಾಡಬಹುದು. ಇದನ್ನು ಅಪ್‍ಲೋಡ್ ಮಾಡಲು `ಮೇರಾ ಬಿಲ್ ಮೇರಾ ಅಧಿಕಾರ್’ ಮೊಬೈಲ್ ಅಪ್ಲಿಕೇಶನ್ ಐಒಎಸ್ ಮತ್ತು ಆಂಡ್ರಾಯ್ಡ್ ಪ್ಲಾಟ್‍ಫಾರ್ಮ್‍ಗಳಲ್ಲಿ ಲಭ್ಯವಾಗಲಿದೆ. ಅಪ್ಲಿಕೇಶನ್‍ನಲ್ಲಿ ಅಪ್‍ಲೋಡ್ ಮಾಡಿದ ಇನ್‍ವಾಯ್ಸ್ ಮಾರಾಟಗಾರರ ಇನ್‍ವಾಯ್ಸ್ ಸಂಖ್ಯೆ, ಪಾವತಿಸಿದ ಮೊತ್ತ ಮತ್ತು ತೆರಿಗೆ ಮೊತ್ತವನ್ನು ಹೊಂದಿರಬೇಕಾಗಿರುತ್ತದೆ. ಇದನ್ನೂ ಓದಿ: ಚಂದ್ರಯಾನ-3 ಯಶಸ್ವಿಯಾಗಲಿ – ರಾಯಚೂರಿನ ಪುಟಾಣಿ ಮಕ್ಕಳಿಂದ ಶಿವಲಿಂಗಕ್ಕೆ ಹಾಲಿನ ಅಭಿಷೇಕ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್