ಹಾಸನ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ನಿವೃತ್ತ ಯೋಧ ತಲೆಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ (Hassan) ಜಿಲ್ಲೆಯ ಬೇಲೂರು (Beluru) ತಾಲ್ಲೂಕಿನ ಹಳೇಬೀಡು (Halebeedu) ಹೋಬಳಿ ಘಟ್ಟದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಿ.ಕೆ.ಕಲ್ಲೇಶ್ (60) ಆತ್ಮಹತ್ಯೆಗೆ ಶರಣಾದ ನಿವೃತ್ತ ಯೋಧ. ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.ಇದನ್ನೂ ಓದಿ: ಚಿರತೆ ಸೆರೆಗೆ ಇಟ್ಟಿದ್ದ ಬೋನಿಗೆ ರೈತ ಲಾಕ್ – 3 ಗಂಟೆ ಒದ್ದಾಟದ ಬಳಿಕ ಸ್ಥಳೀಯರಿಂದ ರಕ್ಷಣೆ
ಮೃತ ಜಿ.ಕೆ.ಕಲ್ಲೇಶ್ ಎರಡು ವಿವಾಹವಾಗಿದ್ದರು. ಕೆಲಸದಿಂದ ನಿವೃತ್ತಿಯಾಗಿ ಬರುವಾಗಲೇ ಪಿಸ್ತೂಲ್ ಮಂಜೂರಾತಿ ಮಾಡಿಸಿಕೊಂಡು ಬಂದಿದ್ದರು. ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಘಟನೆಗೂ ಎರಡು ದಿನ ಮೊದಲು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ನಿ ಬಳಿ ಹೇಳುತ್ತಿದ್ದರು ಎಂದು ತಿಳಿದುಬಂದಿದೆ.
ಇಂದು (ಡಿ.23) ಬೆಳಿಗ್ಗೆ ಸಕಲೇಶಪುರ ಪೊಲೀಸ್ ಠಾಣೆಗೆ ಕರೆ ಮಾಡಿದ್ದ ಕಲ್ಲೇಶ್ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಕೂಡಲೇ ಹಳೇಬೀಡು ಪೊಲೀಸರಿಗೆ ಸಕಲೇಶಪುರ ಪೊಲೀಸರು ಮಾಹಿತಿ ನೀಡಿದ್ದು, ಘಟ್ಟದಹಳ್ಳಿ ಗ್ರಾಮಕ್ಕೆ ಪೊಲೀಸರು ತೆರಳಿದ್ದಾರೆ. ಅಷ್ಟರಲ್ಲಿ ಮನೆಯಲ್ಲಿಯೇ ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ವೀಕ್ ಡೇಸ್‌ನಲ್ಲಿ ಕನ್ನಡ ಪ್ರೊಫೆಸರ್, ವೀಕೆಂಡ್‌ನಲ್ಲಿ ಖರ್ತನಾಕ್ ಕಳ್ಳಿ – ಮದ್ವೆ ಮನೆಯೇ ಟಾರ್ಗೆಟ್!

