ರಾಜ್ಯಪಾಲರಿಂದ ಹಾಕಿ ವಿಶ್ವಕಪ್ ಟ್ರೋಫಿ-2023 ಅನಾವರಣ

Public TV
1 Min Read

ಬೆಂಗಳೂರು: ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಇಂದು ನಗರದ ರಾಜಭವನದಲ್ಲಿ ಪುರುಷರ ಹಾಕಿ ವಿಶ್ವಕಪ್ ಟ್ರೋಫಿ-2023 (Men’s Hockey World Cup – 2023) ಅನ್ನು ಅನಾವರಣಗೊಳಿಸಿದರು.

ಪುರುಷರ ಹಾಕಿ ವಿಶ್ವಕಪ್ ಟ್ರೋಫಿ-2023 ಶುಕ್ರವಾರ ರಾಜಧಾನಿ ಬೆಂಗಳೂರಿಗೆ (Bengaluru) ಆಗಮಿಸಿದ್ದು, ಕರ್ನಾಟಕ ರಾಜ್ಯ ಹಾಕಿ ಸಂಘದ (Karnataka State Hockey Association) ಪದಾಧಿಕಾರಿಗಳು, ಸದಸ್ಯರು, ರಾಜ್ಯ ಹಾಕಿ ಕ್ರೀಡಾಪಟುಗಳು ಹಾಗೂ ಹಾಕಿ ಅಭಿಮಾನಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು. ಇದನ್ನೂ ಓದಿ: ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದವನ ನರ ಕಟ್ ಮಾಡಿ ಎಂದ ಉರ್ಫಿ ಜಾವೇದ್

ಈ ವೇಳೆ ಮಾತನಾಡಿದ ರಾಜ್ಯಪಾಲರು, ಪುರುಷರ ಹಾಕಿ ವಿಶ್ವಕಪ್‌ ಜನವರಿ 13-29ರ ವರೆಗೆ ಒಡಿಶಾದಲ್ಲಿ ನಡೆಯಲಿರುವುದು ಸಂತಸದ ವಿಷಯ. ಈ ಸ್ಪರ್ಧೆಯಲ್ಲಿ ಭಾರತದ ತಂಡ ಗೆಲವು ಸಾಧಿಸಲೆಂದು ಪ್ರಾರ್ಥಿಸುವುದಾಗಿ ಎಂದರು. ಹಾಗೂ ಭಾರತದ ಹಾಕಿ ತಂಡಕ್ಕೆ ಶುಭ ಹಾರೈಸಿದರು. ಇದನ್ನೂ ಓದಿ: ನಿವೃತ್ತ ಪ್ರಾಧ್ಯಾಪಕಿ ಶೆಲ್ಲಿ ದೆಹಲಿ ಮೇಯರ್ ಅಭ್ಯರ್ಥಿಯಾಗಿ ಘೋಷಣೆ

ಈ ಸಂದರ್ಭದಲ್ಲಿ ಕರ್ನಾಟಕ ಹಾಕಿ ಅಸೋಸಿಯೇಶನ್ ಅಧ್ಯಕ್ಷ ಸುಬ್ರಮಣಿ ಗುಪ್ತ, ಕಾರ್ಯದರ್ಶಿ ಡಾ.ಎ.ಬಿ ಸುಬ್ಬಯ್ಯ, ಒಲಂಪಿಕ್ ಅಸೋಸಿಯೇಷನ್ ಕಾರ್ಯದರ್ಶಿ ಅನಂತ್ ರಾಜ್ ಸೇರಿದಂತೆ ರಾಜ್ಯ ಹಾಕಿ ಕ್ರೀಡಾಪಟುಗಳು ಉಪಸ್ಥಿತರಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *