ಗಂಡಸರೆ ನನ್ನ ಮುಟ್ಟಬೇಡಿ, ನಾನು ಪವಿತ್ರಳು : ರಾಖಿ ಸಾವಂತ್ ಮನವಿ

By
1 Min Read

ಬಾಲಿವುಡ್ ವಿವಾದಿತ ನಟಿ ರಾಖಿ ಸಾವಂತ್  (Rakhi Sawant) ಮೆಕ್ಕಾದಿಂದ ವಾಪಸ್ಸಾದ ನಂತರ ಚಿತ್ರ ವಿಚಿತ್ರವಾಗಿ ಆಡುತ್ತಿದ್ದಾರೆ. ಮೆಕ್ಕಾಗೆ ಹೋಗಿ ಬಂದ ನಂತರ ತಾವು ಪವಿತ್ರರಾಗಿರುವುದಾಗಿ ಹೇಳಿಕೊಂಡಿರುವ ಅವರು, ತಮ್ಮನ್ನು ಯಾವುದೇ ಗಂಡಸು ಮುಟ್ಟುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ. ತಮ್ಮ ಹತ್ತಿರಕ್ಕೆ ಗಂಡಸರು ಬರುತ್ತಿದ್ದಂತೆಯೆ ‘ದೂರ ಇರಿ’ ಎಂದು ಎಚ್ಚರಿಕೆಯನ್ನೂ ರಾಖಿ ಕೊಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಮೈಸೂರು ಹುಡುಗ ಆದಿಲ್ (Adil) ನನ್ನು ಮದುವೆಯಾದ ನಂತರ ತಾನು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿದ್ದೇನೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು ನಟಿ ರಾಖಿ ಸಾವಂತ್ (Rakhi Sawant). ಮುಸ್ಲಿಂ ನಿಯಮದಂತೆಯೇ ಮದುವೆ ಆಗಿರುವುದಾಗಿಯೂ ತಿಳಿಸಿದ್ದರು. ಆಮೇಲೆ ಆದಿಲ್ ಮೇಲೆ ಗುರುತರ ಆರೋಪಗಳನ್ನು ಮಾಡಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯೂ ಆಗಿದ್ದರು. ಇದೀಗ ಆದಿಲ್ ಜೈಲಿನಿಂದ ಆಚೆ ಬಂದಿದ್ದಾನೆ. ಸರಣಿಯವಾಗಿ ರಾಖಿ ಮೇಲೆ ಆರೋಪ ಮಾಡುತ್ತಿದ್ದಾನೆ.

ಮಾಧ್ಯಮಗೋಷ್ಠಿಯಲ್ಲಿ ರಾಖಿ ಬಗ್ಗೆ ದಿನಕ್ಕೊಂದು ಆರೋಪ ಮಾಡುತ್ತಿರುವ ಆದಿಲ್, ಪತ್ನಿ ರಾಖಿ ಸಾವಂತ್ ಗೆಳತಿಯರನ್ನೂ ತನ್ನತ್ತ ಒಲಿಸಿಕೊಂಡು ರಾಖಿ ವಿರುದ್ಧ ಹೇಳಿಕೆಗಳನ್ನು ಕೊಡಿಸುತ್ತಿದ್ದಾನೆ. ಇದರಿಂದ ಬೇಸತ್ತ ರಾಖಿ ಮೆಕ್ಕಾಗೆ ತೆರಳಿದ್ದರು. ಅಲ್ಲಿ ಅಳುತ್ತಲೇ ಪ್ರಾರ್ಥನೆ ಮಾಡಿದ್ದ ವಿಡಿಯೋವನ್ನೂ ಶೇರ್ ಮಾಡಿದ್ದರು. ಇದೀಗ ರಾಖಿ ಮೆಕ್ಕಾದಿಂದ ವಾಪಸ್ಸಾಗಿದ್ದಾರೆ.

 

ಮೆಕ್ಕಾದಿಂದ (Mecca) ಭಾರತಕ್ಕೆ ಬಂದಿಳಿದ ರಾಖಿಗೆ ಕೆಲವರು ‘ರಾಖಿ ರಾಖಿ..’ ಎಂದು ಕರೆಯುತ್ತಾರೆ. ಸಿಡುಕಿನಿಂದಲೇ ‘ನನ್ನನ್ನು ರಾಖಿ ಎಂದು ಕರೆಯಬೇಡಿ. ನಾನು ಫಾತಿಮಾ (Fatima). ಇನ್ಮುಂದೆ ನನ್ನನ್ನು ಫಾತಿಮಾ ಅಂತಾನೇ ಕರೆಯಬೇಕು’ ಎಂದು ತಾಕೀತು ಮಾಡುತ್ತಾರೆ. ಮದುವೆಯ ನಂತರ ಫಾತಿಮಾ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವುದಾಗಿಯೂ ಅವರು ತಿಳಿಸಿದ್ದಾರೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್