ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ‘ಮೆಲ್ಲಗೆ’ ಸಾಂಗ್ ರಿಲೀಸ್

Public TV
1 Min Read

ನ್ನೇನು ಬಿಡುಗಡೆಗೆ ಕೆಲವೇ ದಿನಗಳಿರುವಂತೆಯೇ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swati Muthina Male Haniye) ಚಿತ್ರದ ‘ಮೆಲ್ಲಗೆ’ ಎಂಬ ಮೊದಲ ಹಾಡನ್ನು ಇಂದು ಬಿಡುಗಡೆ ಮಾಡಲಾಗಿದೆ. ರಾಜ್‍ ಬಿ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವನ್ನು ‘ಸ್ಯಾಂಡಲ್‌ವುಡ್‌ ಕ್ವೀನ್‌’ ರಮ್ಯಾ (Ramya) ಅವರು ತಮ್ಮ ಆಪಲ್‍ ಬಾಕ್ಸ್ ಸ್ಟುಡಿಯೋಸ್‍ ಮೂಲಕ ಇದೇ ಮೊದಲ ಬಾರಿಗೆ ನಿರ್ಮಿಸಿದ್ದಾರೆ. ಲೈಟರ್‍ ಬುದ್ಧ ಫಿಲಂಸ್‍ ಸಹಯೋಗದೊಂದಿಗೆ ನಿರ್ಮಾಣವಾಗಿರುವ ಈ ಚಿತ್ರವನ್ನು ನವೆಂಬರ್‍ 24ರಂದು ಕೆ.ಆರ್.ಜಿ. ಸ್ಟುಡಿಯೋಸ್‍ ಸಂಸ್ಥೆಯು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.

‘ಮೆಲ್ಲಗೆ’ ಹಾಡಿಗೆ ಮಿಥುನ್‍ ಮುಕುಂದನ್‍ ಸಂಗೀತ ಸಂಯೋಜಿಸಿದ್ದು, ಮಾಧುರಿ ಶೇಷಾದ್ರಿ ಹಾಡಿದ್ದಾರೆ. ಇನ್ನು, ಮಂಗಳೂರಿನಲ್ಲಿ ಓದುತ್ತಿರುವ ವಿದ್ಯಾರ್ಥಿ ಪೃಥ್ವಿ ಈ ಹಾಡನ್ನು ಬರೆದಿದ್ದಾರೆ. ಈ ಕುರಿತು ಮತನಾಡುವ ನಿರ್ದೇಶಕ ರಾಜ್‍ ಶೆಟ್ಟಿ, ‘ಇದು ಪ್ರೀತಿಯ ಕುರಿತ ಒಂದು ಮಹಿಳೆಯ ದೃಷ್ಟಿಕೋನದ ಹಾಡು’. ಈ ಪ್ರೀತಿಯನ್ನು ಮಹಿಳೆಯರು ಹೇಗೆ ಅನುಭವಿಸುತ್ತಾರೆ ಎನ್ನುವುದು ಬೇಕಾಗಿತ್ತು. ಹಾಗಾಗಿ, ಪೃಥ್ವಿ ಅವರಿಂದಲೇ ಬರೆಸಿದೆ’ ಎನ್ನುತ್ತಾರೆ ರಾಜ್‍.

ಈ ಹಾಡಿನಲ್ಲಿ ಶಾಸ್ತ್ರೀಯ ಸಂಗೀತದ ಸ್ಪರ್ಶ ಇದ್ದು, ಸಂಗೀತ ನಿರ್ದೇಶಕ ಮಿಥುನ್‍ ಮುಕುಂದನ್‍ ತಮ್ಮ ಸಂಯೋಜನೆಯಿಂದ ಮೋಡಿ ಮಾಡುತ್ತಾರೆ ಎನ್ನುತ್ತಾರೆ. ಸ್ವತಃ ಹಿನ್ನೆಲೆ ಗಾಯಕಿಯೂ ಆಗಿರುವ ನಾಯಕಿ ಸಿರಿ ರವಿಕುಮಾರ್ ಈ ಹಾಡಿನ ಅಭಿಮಾನಿಯಾಗಿದ್ದು, ಹಾಡನ್ನು ಪದೇಪದೇ ಕೇಳುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ.

 

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ರಾಜ್‍ ಮತ್ತು ಸಿರಿ ಜೊತೆಗೆ ಬಾಲಾಜಿ ಮನೋಹರ್‍, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಜೆ.ಪಿ. ತುಮ್ಮಿನಾಡು, ಸ್ನೇಹ ಶರ್ಮಾ ಮುಂತಾದವರು ಅಭಿನಯಿಸಿದ್ದಾರೆ. ಪ್ರವೀಣ್‍ ಶ್ರೀಯಾನ್‍ ಈ ಚಿತ್ರದ ಛಾಯಾಗ್ರಹಣದ ಜೊತೆಗೆ, ರಾಜ್‍ ಜೊತೆಗೆ ಸೇರಿ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

Share This Article