ಕಾಂಗ್ರೆಸ್ಸಿಗರು ಮಾಡ್ತಿರೋದು ಪಾದಯಾತ್ರೆ ಅಲ್ಲ, ಪಾಪಗಳ ಪ್ರಾಯಶ್ಚಿತ ಯಾತ್ರೆ: ರವಿಕುಮಾರ್

Public TV
1 Min Read

ಚಿಕ್ಕಬಳ್ಳಾಪುರ: ಕಾಂಗ್ರೆಸ್‍ನಿಂದ ಹಮ್ಮಿಕೊಂಡಿರುವುದು ಮೇಕೆದಾಟು ಪಾದಯಾತ್ರೆಯಲ್ಲ ಬದಲಿಗೆ ಕಾಂಗ್ರೆಸ್ಸಿನ ಮತ ಯಾತ್ರೆ ಹಾಗೂ ಪಾಪಗಳ ಪ್ರಾಯಶ್ಚಿತ ಯಾತ್ರೆ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಟೀಕಿಸಿದ್ದಾರೆ.

ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಿದಲ್ಲಿದ್ದಾಗ ಯೋಜನೆಯನ್ನು ಅನುಷ್ಠಾನಕ್ಕೆ ತರುವುದನ್ನು ಬಿಟ್ಟು ವಿನಾಕಾರಣ ಕಾಲಹರಣ ಮಾಡಿದರು. ಈಗ ಮತಕ್ಕಾಗಿ ಮೇಕೆದಾಟು ಪಾದಯಾತ್ರೆಯನ್ನು ನಡೆಸುತ್ತಿದೆ. ಸಜ್ಜನರು ಆಗಿರುವ ಸಚಿವ ಗೋವಿಂದ್ ಕಾರಜೋಳ ಬಗ್ಗೆ ಕಾಂಗ್ರೆಸ್ ಮುಖಂಡರು ಏಕವಚನದಲ್ಲಿ ಮಾತಾಡಿರುವುದು ಖಂಡನೀಯವಾಗಿದೆ ಎಂದು ಕಿಡಿಕಾರಿದರು.

ಮೇಕೆದಾಟು ಯೊಜನೆ ಪ್ರಾರಂಭವಾಗಿದ್ದು ಕಾಂಗ್ರೆಸ್ ಸರ್ಕಾರವಿದ್ದಾಗ ಅಲ್ಲ, ನಮ್ಮ ಕಾಲದಲ್ಲಿ ಎಂದ ಅವರು ತಮಿಳುನಾಡಿನಲ್ಲಿ ಸ್ಟಾಲಿನ್‍ಗೆ ಸಹಕಾರ ನೀಡಿ ಸರ್ಕಾರ ಮಾಡಿದ್ದೀರಿ. ಈಗ ಅವರ ಮನೆಯ ಮುಂದೆ ಹೋಗಿ ಪ್ರತಿಭಟನೆ ನಡೆಸಿ ಎಂದು ಸವಾಲು ಹಾಕಿದರು.  ಇದನ್ನೂ ಓದಿ: ಸ್ಲಂ ಬೋರ್ಡ್‍ನಿಂದ ಕೈಗೆತ್ತಿಕೊಂಡಿರುವ 50 ಮನೆಗಳನ್ನು ಜ.30 ರೊಳಗೆ ಪೂರ್ಣಗೊಳಿಸಬೇಕು: ಗೋಪಾಲಯ್ಯ

ಕಾಂಗ್ರೆಸ್ ಅವರು ಮಾಡುತ್ತಿರುವ ಪಾದಯಾತ್ರೆ ಅತ್ಯಂತ ಬೇಜಾವ್ದಾರಿತನದಿಂದ ಕೂಡಿದೆ. ನಾವು ನಿಮ್ಮ ವಿರುದ್ಧ ಸಾವಿರಾರು ಜನರನ್ನು ಸೇರಿಸಿ ಪ್ರತಿಭಟನೆ ಮಾಡಬಹುದು. ಆದರೆ ನಮಗೆ ಜವಬ್ದಾರಿ ಇರುವುದರಿಂದ ಈ ರೀತಿ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

ಪಾದಾಯಾತ್ರೆಯಲ್ಲಿ ಭಾಗವಿಸಿದವರು ಟೆಸ್ಟ್ ಮಾಡಿಸಿಕೊಳ್ಳಬೇಕು. ಶಿಸ್ತು, ಕಾಳಜಿ ಇದ್ದರೆ ಡಿ.ಕೆ. ಶಿವಕುಮಾರ್ ಅವರು ಸ್ವತಃ ಕೋವಿಡ್ ಟೆಸ್ಟ್‍ಗೆ ಒಳಪಡುತ್ತಾರೆ. ಇಲ್ಲವಾದರೆ ನಿಮ್ಮನ್ನು ಬೇಜಾವಬ್ದಾರಿತನದ ಅಧ್ಯಕ್ಷ ಅಂತ ಕರೆಯಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೋವಿಡ್ ಮುಗಿದ ನಂತರ ಮೇಕೆದಾಟಿನಲ್ಲೇ ಬಿದ್ದು ಒದ್ದಾಡಿ, ಯಾರು ಬೇಡ ಅಂತಾರೆ: ಈಶ್ವರಪ್ಪ

ಕಾಂಗ್ರೆಸ್ ಅವರಿಗೆ ಕೋವಿಡ್ ಎಷ್ಟೇ ಹೆಚ್ಚಾದರೂ ಅದರ ಬಗ್ಗೆ ಯೋಚನೆ ಇಲ್ಲ. ಅವರಿಗೆ ತಮ್ಮ ಪಾದಯಾತ್ರೆ ಯಶಸ್ವಿ ಆಗುವುದಷ್ಟೇ ಮುಖ್ಯವಾಗಿದೆ. ಆದರೆ ಡಿ.ಕೆ. ಶಿವಕುಮಾರ್ ಇಂತಹ ಒಂದಲ್ಲ ನೂರು ಪಾದಯಾತ್ರೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *