ಸ್ಕಿನ್‌ ಲಿಫ್ಟ್‌ ಥೆರಪಿ ಮೊರೆ ಹೋದ ಶಿವರಾಜ್‌ಕುಮಾರ್‌ ನಾಯಕಿ ಮೆಹ್ರೀನ್‌ ಫಿರ್ಜಾದ

Public TV
1 Min Read

ಚಿತ್ರರಂಗದಲ್ಲಿ ಪ್ರತಿಭೆ ಎಷ್ಟು ಮುಖ್ಯವೋ ಅಂದ ಅಷ್ಟೇ ಮುಖ್ಯ ಅಂತಾ ನಟಿಮಣಿಯರು ಸೌಂದರ್ಯ ವೃದ್ಧಿಗೆ ಹೊಸ ಹೊಸ ಪ್ರಯೋಗಗಳನ್ನ ಮಾಡುತ್ತಾರೆ. ಇದೀಗ ಇಂತಹದ್ದೇ ಪ್ರಯೋಗಕ್ಕೆ ಶಿವರಾಜ್‌ಕುಮಾರ್ (Shivarajkumar) ನಟನೆಯ 124ನೇ ಸಿನಿಮಾ `ನೀ ಸಿಗೋವರೆಗೂ’ ಚಿತ್ರದ ನಾಯಕಿ ಮೆಹ್ರೀನ್ ಫಿರ್ಜಾದ(Mehreen Pirzadaa) ಕೈ ಹಾಕಿದ್ದಾರೆ. ಸ್ಕಿನ್ ಲಿಫ್ಟ್ ಥೆರಪಿಗೆ ಮೇಹ್ರೀನ್ ಮೊರೆ ಹೋಗಿದ್ದಾರೆ.

Contents

 

View this post on Instagram

 

A post shared by MEHREEN ???????? (@mehreenpirzadaa)

ಅಕ್ಯು ಸ್ಕಿನ್ ಲಿಫ್ಟ್ ಹೆಸರಿನ ಟ್ರೀಟ್‌ಮೆಂಟ್ ಮಾಡಿಸಿಕೊಂಡಿದ್ದಾರೆ ಮೆಹ್ರೀನ್. ಇದಕ್ಕಾಗಿ ಅವರು ವಿದೇಶದಲ್ಲಿ ಖ್ಯಾತ ವೈದ್ಯರೊಬ್ಬರನ್ನು ಭೇಟಿ ಮಾಡಿದ್ದಾರೆ. ಅಕ್ಯು ಸ್ಕಿನ್ ಲಿಫ್ಟ್ ಥೆರಪಿ ಮಾಡಿಸಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮೆಹ್ರೀನ್ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ನಟಿಯ ಕೆನ್ನೆ, ಹಣೆ ಭಾಗಕ್ಕೆಲ್ಲ ಸೂಜಿಗಳನ್ನು ಚುಚ್ಚಲಾಗಿದೆ. ಇದನ್ನು ನೋಡಿ ಫ್ಯಾನ್ಸ್‌ಗೆ ನೋವಾಗಿದೆ. ಇದನ್ನೂ ಓದಿ: ಮುಂದುವರಿದ ಸಂಘರ್ಷ -ʼಕಾಂತಾರʼ ಪರ ತೀರ್ಪು ನೀಡಿದ್ದ ಜಿಲ್ಲಾ ಕೋರ್ಟ್‌ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆ

 

View this post on Instagram

 

A post shared by MEHREEN ???????? (@mehreenpirzadaa)

ಅಷ್ಟೊಂದು ಸೂಜಿ ಚುಚ್ಚಿಸಿಕೊಂಡಿದ್ದೀರಿ. ನಿಮಗೆ ನೋವಾಗುವುದಿಲ್ಲವೇ ಇಂತಹ ರಿಸ್ಕ್ ಏಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಒಂದನ್ನು ಮಾಡಲು ಹೋಗಿ ಮತ್ತೊಂದು ಆದೀತು ಎನ್ನುವ ಎಚ್ಚರಿಕೆ ನೀಡಿದ್ದಾರೆ. ಸದ್ಯ ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಬಗೆಬಗೆಯಲ್ಲಿ ಕಾಮೆಂಟ್‌ಗಳು ಬರುತ್ತಿವೆ.

ತೆಲುಗು, ತಮಿಳು ಸಿನಿಮಾಗಳಲ್ಲಿ ಮೋಡಿ ಮಾಡಿದ್ದ ನಟಿ ಇದೀಗ ಶಿವಣ್ಣಗೆ ನಾಯಕಿಯಾಗುವ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *