ಇನ್ಸ್‌ಸ್ಟಾಗ್ರಾಂನಲ್ಲಿ ಆ್ಯಕ್ಟೀವ್ ಆಗಿರುವ ಮೇಘನಾ ರಾಜ್ ಇದೀಗ ಸುಂದರ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಮನೆಯಲ್ಲಿ ದಸರಾ ಬೊಂಬೆಯಿಟ್ಟು ಅದರ ಮುಂದೆ ಬೊಂಬೆಯಂತೆ ಮೇಘನಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಪೋಸ್ಟ್‌ನಲ್ಲಿ ಕೆಂಪು ಸಲ್ವಾರ್ ಧರಿಸಿ, ಕೈತುಂಬಾ ಬಳೆ ಹಾಕಿಕೊಂಡು ಸೊಗಸಾಗಿ ಕಾಣುತ್ತಿದ್ದಾರೆ. ಫೋಟೋ ಕರ್ಟಸಿಯನ್ನ ನಟಿ ಶ್ವೇತಾ ಚೆಂಗಪ್ಪಗೆ ಕೊಟ್ಟಿದ್ದಾರೆ ಮೇಘನಾ. ಹೀಗಾಗಿ ಮೇಘನಾರ ಈ ಸುಂದರ ಫೋಟೋಗಳ ಹಿಂದಿನ ಛಾಯಾಗ್ರಾಹಕಿ ಶ್ವೇತಾ ಚೆಂಗಪ್ಪ ಅನ್ನೋದು ರಿವೀಲ್ ಆಗಿದೆ.ಇದನ್ನೂ ಓದಿ: ಕ್ರೂ ಪಾರ್ಟ್-2 ನಲ್ಲಿ ಕರೀನಾ ನಟಿಸೋದು ಪಕ್ಕಾ
ದಸರಾ ಹಬ್ಬಕ್ಕಾಗಿ ಮೇಘನಾ ಸುಂದರವಾಗಿ ರೆಡಿಯಾಗಿದ್ದು, ಎಷ್ಟೋ ದಿನಗಳಾದ್ಮೇಲೆ ನಗುತ್ತಿರುವ ಮೇಘನಾ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ.