ಮಗನಿಗೆ ರಾಯನ್ ಹೆಸರಿಟ್ಟಿದ್ದಕ್ಕೆ ಮೇಘನಾ ಸ್ಪಷ್ಟನೆ

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಂಪತಿಯ ಪ್ರೀತಿಯ ಪುತ್ರನಿಗೆ ಶುಕ್ರವಾರ ಹಿಂದೂ ಸಂಪ್ರದಾಯದ ಜೊತೆಗೆ ಕ್ರೈಸ್ತ ಸಂಪ್ರದಾಯದ ಪ್ರಕಾರ ನಾಮಕರಣ ಮಾಡಲಾಗಿತ್ತು. ಈ ಕುರಿತಂತೆ ಕೆಲವು ಮಂದಿ ರಾಯನ್ ರಾಜ್ ಸರ್ಜಾ ಎಂಬ ಹೆಸರಿನ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು. ಸದ್ಯ ಈ ಬಗ್ಗೆ ಮೇಘನಾ ರಾಜ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸ್ವರ್ಗದ ಬಾಗಿಲನ್ನು ತೆಗೆದುಕೊಟ್ಟ ಯುವರಾಜನೇ ರಾಯನ್: ಮೇಘನಾ ರಾಜ್

junior chiru

ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ನಾಮಕರಣದ ಕ್ಯೂಟ್ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ಜೊತೆಗೆ, ಒಬ್ಬ ತಾಯಿಯಾಗಿ ನಾನು ನನ್ನ ಮಗನಿಗೆ ಉತ್ತಮವಾದುದನ್ನು ನೀಡುವುದು ಬಹಳ ಮುಖ್ಯ. ಅವನ ತಂದೆ, ತಾಯಿ ಖುಷಿಪಟ್ಟಂತೆ ಎರಡು ಧರ್ಮದಲ್ಲಿರುವ ಒಳ್ಳೆಯ ಅಂಶ ಅವನಿಗೆ ಯಾಕೆ ಸಿಗಬಾರದು? ಜನರು ತಮ್ಮ ಜಾತಿ, ಧರ್ಮವನ್ನು ಲೆಕ್ಕಿಸದೇ ಅವನಿಗಾಗಿ ಹಾಗೂ ನಮ್ಮ ಕುಟುಂಬಕ್ಕಾಗಿ ಪ್ರಾರ್ಥಿಸಿದ್ದಾರೆ. ಎಲ್ಲ ದೇವರಿಂದಲೂ ನಾವು ಆಶೀರ್ವಾದವನ್ನು ಕೋರುತ್ತೇವೆ. ಎರಡು ಸಂಪ್ರದಾಯದ ಪ್ರಕಾರ ಇದನ್ನು ಮಾಡುವುದು ನನಗೆ ಬಹಳ ಮುಖ್ಯವಾಗಿತ್ತು. ಏಕೆಂದರೆ ಇದಕ್ಕೆ ಕಾರಣ ಅವನ ತಂದೆ, ನಮ್ಮ ರಾಜ ಚಿರು ಎಲ್ಲದಕ್ಕಿಂತ ಹೆಚ್ಚಾಗಿ ಮಾನವೀಯತೆ ಮುಖ್ಯ ಎಂದು ನಂಬಿದ್ದರು. ಹೀಗಾಗಿ ಎರಡು ಸಂಪ್ರದಾಯದಲ್ಲಿ ಉತ್ತಮವಾಗಿರುವುದನ್ನು ಆಚರಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:  ಚಿರು, ಮೇಘನಾ ಪುತ್ರ ಈಗ ‘ರಾಯನ್ ರಾಜ್ ಸರ್ಜಾ’

ರಾಯನ್ ಎಂಬ ಹೆಸರು ಎಲ್ಲ ಧರ್ಮಕ್ಕೂ ಸೇರಿದೆ. ಬೇರೆ ಬೇರೆ ವರ್ಷನ್, ಬೇರೆ ಬೇರೆ ರೀತಿಯಲ್ಲಿ ಉಚ್ಛಾರಣೆ ಇರಬಹುದು, ಆದರೆ ಅರ್ಥ ಒಂದೇ. ನಮ್ಮ ಯುವರಾಜನನ್ನು ರಾಯನ್ ಸರ್ಜಾ ಎಂದು ಪರಿಚಯಿಸುತ್ತಿದ್ದೇವೆ. ನಮ್ಮ ರಾಯನ್ ಸರ್ಜಾ ಅವನ ತಂದೆಯಂತೆ ಬೆಳೆಯಬೇಕು. ಚಿರು ಜನರನ್ನು ಮತ್ತು ಅವರು ಮಾಡುತ್ತಿದ್ದ ಮಾನವೀಯ ಒಳ್ಳೆಯ ಕೆಲಸಗಳನ್ನು ಪ್ರೀತಿಸುತ್ತಿದ್ದರು. ಜನರ ಹಿನ್ನೆಲೆ ನೋಡಿ ಪ್ರೀತಿಸುತ್ತಿರಲಿಲ್ಲ ಎಂದು ಮೇಘನಾ ಬರೆದುಕೊಂಡಿದ್ದಾರೆ.

 

View this post on Instagram

 

A post shared by Meghana Raj Sarja (@megsraj)

ನಗರದ ಖಾಸಗಿ ಹೋಟೆಲ್‍ನಲ್ಲಿ ಅದ್ದೂರಿಯಾಗಿ ಶುಕ್ರವಾರ ಚಿರು ಹಾಗೂ ಮೇಘನಾ ಸರ್ಜಾ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಟ್ಟು ನಾಮಕರಣ ಮಾಡಲಾಗಿತ್ತು. ಸದ್ಯ ಮೇಘನಾ ಶೇರ್ ಮಾಡಿರುವ ಈ ಕ್ಯೂಟ್ ವೀಡಿಯೋದಲ್ಲಿ ಸ್ಯಾಂಡಲ್‍ವುಡ್‍ನ ಹಲವಾರು ತಾರೆಯರು ನಾಮಕರಣದಲ್ಲಿ ಪಾಲ್ಗೊಂಡಿರುವುದನ್ನು ಕಾಣಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *