ಗಡಿದಾಟಿ ಬಂದ ಬಾಂಗ್ಲಾ ಯೋಧರನ್ನು ಓಡಿಸಿದ ಮೇಘಾಲಯ ಗ್ರಾಮಸ್ಥರು

Public TV
1 Min Read

ಶಿಲ್ಲಾಂಗ್‌: ಗಡಿದಾಟಿ ಬಂದ ಬಾಂಗ್ಲಾ ದೇಶದ ಯೋಧರನ್ನು (Bangladesh Border Guards) ಮೇಘಾಲಯದ ಹಳ್ಳಿಯೊಂದರ (Meghalaya Villagers) ಜನ ಓಡಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಾರ್ಡರ್ ಗಾರ್ಡ್ಸ್ ಬಾಂಗ್ಲಾದೇಶ (ಬಿಜಿಬಿ) ಪಡೆದ ಇಬ್ಬರು ಯೋಧರು ಮೇಘಾಲಯದ ಗಾರೋಹಿಲ್ಸ್‍ನ ರೋಂಗಾರ ಎಂಬ ಹಳ್ಳಿಗೆ ಬುಧವಾರ ಸಂಜೆ ರೈಫಲ್ ಹಿಡಿದು ನುಗ್ಗಿದ್ದಾರೆ. ಸೈನಿಕರನ್ನು ನೋಡಿದ ಗ್ರಾಮಸ್ಥರು ಆರಂಭದಲ್ಲಿ ಭಯ ಬಿದ್ದಿದ್ದಾರೆ. ಆದರೆ ತಡ ಮಾಡದೇ ಎಚ್ಚೆತ್ತ ನಿವಾಸಿಗಳು ಇಬ್ಬರು ಬಾಂಗ್ಲಾ ಯೋಧರನ್ನು ಓಡಿಸಿಕೊಂಡು ಹೋಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಂಗ್ಲಾ ಸೇನೆ, ಅಪರಾಧಿಗಳನ್ನು ಹಿಡಿಯುವ ಭರದಲ್ಲಿ ನಮ್ಮ ಯೋಧರು ಅವರಿಗೆ ಅರಿವಿಲ್ಲದೆಯೇ ಗಾಡಿ ದಾಟಿ ಹಳ್ಳಿಗೆ ಹೋಗಿದ್ದಾರೆ ಎಂದು ಸಮಜಾಯಿಷಿ ನೀಡಿದೆ.

 

ಗ್ರಾಮವು ಗಡಿ ಭಾಗದಲ್ಲಿರುವುದರಿಂದ ಅಪರಾಧಿಗಳನ್ನು ಬೆನ್ನಟ್ಟುವ ಸಂದರ್ಭದಲ್ಲಿ ಅವರು ಭಾರತೀಯ ಭೂಪ್ರದೇಶವನ್ನು ದಾಟಿರುವುದು ಅವರಿಗೆ ತಿಳಿದಿರಲಿಲ್ಲ. ಗಡಿ ಉಲ್ಲಂಘನೆಗೆ ಸಂಬಂಧಿಸಿದಂತೆ ಧ್ವಜ ಸಭೆಯನ್ನು ನಡೆಸಲಾಗಿದೆ. ಆದರೆ ಅಲ್ಲಿ ಯಾವುದೇ ಭಾರತೀಯ ಪ್ರಜೆಗೆ ಕಿರುಕುಳ ನೀಡಿಲ್ಲ ಎಂದು ಬಿಎಸ್‌ಎಫ್‌ನ (BSF) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article