ನಿರ್ದೇಶಕರಿಗೆ ದುಬಾರಿ ವಾಚ್‌ ಗಿಫ್ಟ್‌ ಕೊಟ್ಟ ಮೆಗಾಸ್ಟಾರ್ – ಈ ಕ್ಷಣವನ್ನು ಸದಾ ನೆನಪಲ್ಲಿಟ್ಟುಕೊಳ್ಳುತ್ತೇನೆ ಎಂದ ಬಾಬಿ!

Public TV
1 Min Read

ಮೆಗಾಸ್ಟಾರ್ ಚಿರಂಜೀವಿಯವರ (Megastar Chiranjeevi) ಸ್ವಭಾವದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅವರಿಗೆ ಒಮ್ಮೆ ಒಬ್ಬ ವ್ಯಕ್ತಿ ಇಷ್ಟವಾದರೆ, ಆ ಸ್ನೇಹವನ್ನು ತಮ್ಮ ಜೀವನದುದ್ದಕ್ಕೂ ಹೃದಯದಲ್ಲಿಟ್ಟುಕೊಂಡು ಕಾಪಾಡುತ್ತಾರೆ. ಅದಕ್ಕೆ ಉದಾಹರಣೆ ಎಂಬಂತೆ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ಟಾಲಿವುಡ್ ನಿರ್ದೇಶಕರಿಗೆ ಅಚ್ಚರಿಯ ಗಿಫ್ಟ್‌ ಕೊಟ್ಟಿದ್ದಾರೆ.

 

View this post on Instagram

 

A post shared by Bobby (@director.bobby)

ಚಿರಂಜೀವಿ ನಿರ್ದೇಶಕ ಬಾಬಿಯವರಿಗೆ (Bobby) ವಿಶೇಷ ಗಿಫ್ಟ್‌ ನೀಡಿದ್ದಾರೆ. ಈ ವಾಚಿನ ಬೆಲೆ ಸುಮಾರು 6-10 ಲಕ್ಷ ರೂ. ಮೌಲ್ಯದ್ದು ಎನ್ನಲಾಗಿದೆ. ಒಮೆಗಾ ಸೀಮಾಸ್ಟರ್ ವಾಚ್ ಇದಾಗಿದ್ದು, ಈ ವಿಚಾರವನ್ನು ನಿರ್ದೇಶಕ ಬಾಬಿಯವರೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಸ್ಟ್‌ನಲ್ಲಿ, ಚಿರಂಜೀವಿ ಗಾರು ಅವರಿಂದ ಒಂದು ಅಚ್ಚರಿಯ ಉಡುಗೊರೆ ಸಿಕ್ಕಿದೆ. ಈ ಉಡುಗೊರೆಗೆ ನಾನು ಬೆಲೆ ಕಟ್ಟಲು ಸಾಧ್ಯವಿಲ್ಲ. ಧನ್ಯವಾದಗಳು ಸಹೋದರ! ಈ ಕ್ಷಣವನ್ನು ನಾನು ಸದಾ ನೆನಪಲ್ಲಿಟ್ಟುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಕೈಯಲ್ಲಿ ವಾಚ್‌ ಧರಿಸಿರುವ ಫೋಟೋಗಳನ್ನು ಸಹ ಬಾಬಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದನ್ನು ನೋಡಿದವರೆಲ್ಲರೂ, ಚಿರಂಜೀವಿಯ ಸ್ನೇಹಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಚಿರಂಜೀವಿ ಪ್ರಸ್ತುತ ವಿಶ್ವಂಭರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಿಂಬಿಸಾರ ಖ್ಯಾತಿಯ ವಶಿಷ್ಠ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದರ ಜೊತೆಗೆ ಚಿರಂಜೀವಿ ಬ್ಲಾಕ್‌ಬಸ್ಟರ್ ನಿರ್ದೇಶಕ ಅನಿಲ್ ರವಿಪುಡಿ ನಿರ್ದೇಶನದಲ್ಲಿ ಒಂದು ಸಿನಿಮಾ ಕೂಡ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ.

Share This Article