Exclusive: ಸಮ್ಮಿಶ್ರ ಸರ್ಕಾರದ ರಾಜಕೀಯ ಚದುರಂಗದಾಟದಲ್ಲಿ ಮೆಗಾ ಟ್ವಿಸ್ಟ್

Public TV
1 Min Read

ಬೆಂಗಳೂರು: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರ ಹೇಳಿಕೆಯ ಬೆನ್ನಲ್ಲೆ ರಾಜಕೀಯ ಚದುರಂಗದಾಟ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ. ಸಾಲಮನ್ನಾ ಮತ್ತು ಮಧ್ಯಂತರ ಬಜೆಟ್ ಎರಡು ವಿಷಯಗಳಿಂದಾಗಿ ರಾಜಕೀಯ ನಾಯಕರಲ್ಲಿ ಭಿನ್ನಮತದ ಹೊಗೆ ಕಾಣಲಾರಂಭಿಸಿದೆ.

ಸಾಲಮನ್ನಾ ಮತ್ತು ಬಜೆಟ್ ವಿಚಾರವಾಗಿ ಸಿದ್ದರಾಮಯ್ಯನವರು ಅಸಮಾಧಾನ ಹೊರಹಾಕಿದ ಎನ್ನಲಾದ ಆಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇತ್ತ ಸಹಕಾರಿ ಬ್ಯಾಂಕುಗಳ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿಯವರು, ಬಜೆಟ್ ಮಂಡನೆ ಮಾಡಬೇಕೋ ಬೇಡವೋ ಚರ್ಚೆ ನಡಿಯುತ್ತಿದೆ. ಲೋಕಸಭಾ ಚುನಾವಣೆ ನಂತರ ಹೊಸ ಬಜೆಟ್ ಮಂಡಿಸಿ ಅಂತಾ ಹೇಳುತ್ತಿದ್ದಾರೆ. ಅಲ್ಲದೆ ನಾನು ಯಾರ ಹಂಗಲ್ಲೂ ಇಲ್ಲ, ಯಾರೂ ಭಿಕ್ಷೆ ಕೊಟ್ಟಿಲ್ಲ. ಈ ಸರ್ಕಾರ ಎಷ್ಟು ದಿನ ಇರುತ್ತೋ ಇಲ್ಲವೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಾಲಮನ್ನಾ, ಬಜೆಟ್ ವಿಚಾರದಲ್ಲಿ ಸಿದ್ದರಾಮಯ್ಯ ಮುನಿಸು: ಆಪ್ತರ ಜೊತೆ ಮಾತನಾಡಿದ್ದು ಏನು? ಆಡಿಯೋ ಕೇಳಿ

ಇಬ್ಬರ ಜಗಳ ಮೂರನೇ ವ್ಯಕ್ತಿಗೆ ಲಾಭ:
ಇಲ್ಲಿ ಸಮ್ಮಿಶ್ರ ಸರ್ಕಾರದ ಎರಡೂ ಪಕ್ಷಗಳ ನಾಯಕರು ಒಬ್ಬರ ಮೇಲೊಬ್ಬರು ಅಸಮಾಧಾನ ಹೊರಹಾಕುತ್ತಿದ್ದಂತೆ ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಬ್ಬರ ಜಗಳಲ್ಲಿ ಲಾಭ ಪಡೆಯಲು ಮುಂದಾಗಿದ್ದಾರಂತೆ. ಯಡಿಯೂರಪ್ಪನವರು ಇವತ್ತು ಬೆಳಗ್ಗೆಯಿಂದ ಯಾರ ಕೈಗೂ ಸಿಗದೇ ಸೆಕ್ಯೂರಿಟಿ, ಸರ್ಕಾರಿ ಕಾರು ಇಲ್ಲದೇ ನಿವಾಸದಿಂದ ಹೊರ ನಡೆದಿದ್ದಾರೆ. ಬೆಳಗ್ಗೆ 7.30ಕ್ಕೆ ಡಾಲರ್ಸ್ ಕಾಲೋನಿ ನಿವಾಸ ಬಿಟ್ಟಿರುವ ಬಿಎಸ್ ವೈ ಕೇವಲ ಓರ್ವ ಆಪ್ತನನ್ನು ಮಾತ್ರ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸರ್ಕಾರ ಎಷ್ಟು ದಿನ ಇರುತ್ತೋ ಇಲ್ಲವೋ ಗೊತ್ತಿಲ್ಲ: ಸಿದ್ದರಾಮಯ್ಯ ವಿರುದ್ಧ ಎಚ್‍ಡಿಕೆ ಅಸಮಾಧಾನ

ದಿಢೀರ್ ಅಂತಾ ಯಡಿಯೂರಪ್ಪನವರ ಅಜ್ಞಾವಾಸ ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಯಾರಿಗೂ ತಿಳಿಯದಂತೆ ಮತ್ತೆ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸಂಪರ್ಕಿಸಲು ಯಡಿಯೂರಪ್ಪ ಮುಂದಾದರಾ ಅಥವಾ ಮತ್ತೊಮ್ಮೆ ತೆರೆಮರೆಯಲ್ಲಿ ಆಪರೇಷನ್ ಕಮಲಕ್ಕೆ ಸಜ್ಜಾಗುತ್ತಿದ್ದಾರೆ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *