ರಾಜಕೀಯ ಅಖಾಡಕ್ಕೆ ಮೆಗಾಸ್ಟಾರ್ ಮನೆ ಮಗಳು?

Public TV
1 Min Read

ಟಾಲಿವುಡ್‌ನ ಮೆಗಾಸ್ಟಾರ್ ಮನೆ ಮಗಳು ನಿಹಾರಿಕಾ (Niharika Konidela) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ವೈಯಕ್ತಿಕ ವಿಚಾರಗಳಿಂದ ಹೆಚ್ಚೆಚ್ಚು ಸುದ್ದಿಯಲ್ಲಿದ್ದ ನಿಹಾರಿಕಾ ಇದೀಗ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಿನಿಮಾ ಬಿಟ್ಟು ರಾಜಕೀಯದತ್ತ (Politics) ನಟಿ ಮುಖ ಮಾಡ್ತಾರಾ? ಇಲ್ಲಿದೆ ಮಾಹಿತಿ.

ಮೆಗಾಸ್ಟಾರ್ ಕುಟುಂಬಕ್ಕೆ ರಾಜಕೀಯ (Politics) ಕ್ಷೇತ್ರವೇನು ಹೊಸದಲ್ಲ. ಪವನ್ ಕಲ್ಯಾಣ್, ಚಿರಂಜೀವಿ ಇಬ್ಬರೂ ಕೂಡ ರಾಜಕೀಯದಲ್ಲಿ ಪಳಗಿದ್ದಾರೆ. ಸಿನಿಮಾ- ಪಾಲಿಟಿಕ್ಸ್ ಎರಡರಲ್ಲೂ ಮೆಗಾಸ್ಟಾರ್ ಕುಟುಂಬ ಹೈಲೆಟ್ ಆಗಿದ್ದಾರೆ.

ಡಿವೋರ್ಸ್ (Divorce) ಆದ್ಮೇಲೆ ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರೋ ನಟಿ ಸಿನಿಮಾ ಬಿಟ್ಟು, ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯದಲ್ಲೇ ನಟಿ ಎಂಪಿ ಎಲೆಕ್ಷನ್‌ನಲ್ಲಿ ಭಾಗವಹಿಸಲಿದ್ದಾರೆ ಎಂಬ ಸುದ್ದಿಗೆ ನಿಹಾರಿಕಾ ಆಪ್ತರು ಸ್ಪಷ್ಟನೆ ನೀಡಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬುದು ಸುಳ್ಳು ಸುದ್ದಿ ಎಂದು ಮಾಹಿತಿ ನೀಡಿದ್ದಾರೆ. ಪವನ್‌ ಕಲ್ಯಾಣ್‌ ಪರವಾಗಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗ್ತಾರೆ. ಆದರೆ ರಾಜಕೀಯಕ್ಕೆ ನಟಿ ಬರುವುದಿಲ್ಲ ಎನ್ನಲಾಗಿದೆ.

ಚಿತ್ರರಂಗದಲ್ಲಿ ಗಟ್ಟಿ ನೆಲೆ ನಿಹಾರಿಕಾಗೆ ಸಿಗಲಿಲ್ಲ. ದಾಂಪತ್ಯದಲ್ಲಿ ಖುಷಿ ಇಲ್ಲ. ಅದಕ್ಕಾಗಿ ವೈವಾಹಿಕ ಜೀವನಕ್ಕೆ ಬ್ರೇಕ್ ಹಾಕಿದ್ದರು. 2 ವರ್ಷಗಳ ದಾಂಪತ್ಯಕ್ಕೆ 2022ರಲ್ಲಿ ಡಿವೋರ್ಸ್ ಪಡೆದುಕೊಳ್ಳುವ ಮೂಲಕ ಅಂತ್ಯ ಹಾಡಿದ್ದರು. ಇದನ್ನೂ ಓದಿ:ಮೊದಲ ದಿನವೇ ‘ಆರ್ಟಿಕಲ್ 370’ ಚಿತ್ರಕ್ಕೆ ಅತ್ಯುತ್ತಮ ರೆಸ್ಪಾನ್ಸ್

ನಿಹಾರಿಕಾ 2ನೇ ಮದುವೆ ಬಗ್ಗೆ ಆಗಾಗ ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ. ಸೋಷಿಯಲ್ ಮೀಡಿಯಾದಲ್ಲೂ ಚರ್ಚೆ ಆಗಿದ್ದು, ಇದೆ. ಆದರೆ ಈ ಬಗ್ಗೆ ಮೆಗಾ ಫ್ಯಾಮಿಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಹಾಗಾಗಿಯೇ ಚಿತ್ರರಂಗದಲ್ಲಿ ನಟಿ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿದ್ದಾರೆ. ನಿರ್ಮಾಣದ ಜೊತೆ ನಟನೆಯಲ್ಲಿಯೂ ನಿಹಾರಿಕಾ ಗುರುತಿಸಿಕೊಂಡಿದ್ದಾರೆ.

Share This Article